ಬುಧವಾರ, ನವೆಂಬರ್ 13, 2019
17 °C

ಮೇ 2ಕ್ಕೆ ಸೋನಿಯಾ ಮೈಸೂರಿಗೆ

Published:
Updated:

ಮೈಸೂರು: `ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್‌ಗಾಂಧಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಕೇಂದ್ರ ಸಚಿವರು ಪಕ್ಷದ ಪರ ಪ್ರಚಾರ ಮಾಡಲಿದ್ದಾರೆ' ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ  ಸಿದ್ದರಾಮಯ್ಯ ತಿಳಿಸಿದರು.ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದಲ್ಲಿ ಸಿದ್ದರಾಮಯ್ಯ ಅವರು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.`ಸೋನಿಯಾಗಾಂಧಿ, ಪ್ರಧಾನಿ ಮನಮೋಹನ್‌ಸಿಂಗ್ ಹಾಗೂ ರಾಹುಲ್‌ಗಾಂಧಿ ಪ್ರವಾಸದ ವೇಳಾ ಪಟ್ಟಿಯನ್ನು ಕೆಪಿಸಿಸಿ ಸಿದ್ಧಪಡಿಸುತ್ತಿದ್ದು, ಶೀಘ್ರವೇ  ಬಿಡುಗಡೆ ಮಾಡಲಿದೆ. ಮೇ 2 ರಂದು ಸೋನಿಯಾಗಾಂಧಿ ಮೈಸೂರಿಗೆ ಭೇಟಿ ನೀಡಿ ಪ್ರಚಾರ ಮಾಡಲಿದ್ದಾರೆ' ಎಂದು ಹೇಳಿದರು.`ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದ ಲವಿಲ್ಲ. ಗೊಂದಲ ಇರುವುದು ಇತರೆ ಪಕ್ಷಗಳಲ್ಲಿ. 177 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಳಿಕ  ಯಾವುದೇ ಗೊಂದಲ ಕಾಣಿಸಿಕೊಂಡಿಲ್ಲ. ಒಂದೊಂದು ಕ್ಷೇತ್ರ ದಲ್ಲಿ ಹೆಚ್ಚು ಮಂದಿ ಟಿಕೆಟ್ ಆಕಾಂಕ್ಷಿ ಗಳಿದ್ದರೆ ಅಸಮಾಧಾನ ಉಂಟಾಗು ವುದು ಸಹಜ. ಬಳ್ಳಾರಿ ಜಿಲ್ಲೆಯಲ್ಲಿ ಯಾವುದೇ ಗೊಂದಲವಿಲ್ಲ' ಎಂದ ಅವರು `ಜೆಡಿಎಸ್, ಬಿಜೆಪಿಯಲ್ಲಿ ಅಭ್ಯರ್ಥಿಗಳೇ ಇಲ್ಲ. ಬಂಡಾಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಜೆಡಿಎಸ್ ಕಾದು ಕುಳಿತಿದೆ' ಎಂದರು.`ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಹೈಕಮಾಂಡ್ ನಿರ್ಧ ರಿಸಲಿದೆ. ಆದರೆ ಈ ವಿಷಯದಲ್ಲಿ ಆಶಾವಾದಿ ಆಗಿದ್ದೇನೆ. ಏ.18 ರಿಂದ 29 ರವರೆಗೆ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದೇನೆ. ಯಾರು ಎಷ್ಟೇ ಹಣ ಖರ್ಚು ಮಾಡಿದರೂ ಗೆಲುವು ಕಾಂಗ್ರೆಸ್‌ನದ್ದೆ. ಹಣದಿಂದ ಎಲ್ಲವನ್ನು ಗೆಲ್ಲಲು ಸಾಧ್ಯವಿಲ್ಲ' ಎಂದು ಹೇಳಿದರು.ಸಂಸದ ಆರ್.ಧ್ರುವನಾರಾಯಣ, ಶಾಸಕರಾದ ವಿ.ಶ್ರೀನಿವಾಸಪ್ರಸಾದ್, ತನ್ವೀರ್ ಸೇಟ್, ಎಂ.ಸತ್ಯನಾರಾಯಣ, ಎಚ್.ಸಿ.ಮಹದೇವಪ್ಪ, ಮಹದೇವ ಪ್ರಸಾದ್ ಹಾಗೂ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ಮೇಯರ್ ವಾಸು, ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಸಿ.ದಾಸೇಗೌಡ, ಎಚ್. ಎ.ವೆಂಕಟೇಶ್, ಜಿ.ಬಿ.ಸೀತಾರಾಂ, ರಾಕೇಶ್ ಸಿದ್ದರಾಮಯ್ಯ ಇದ್ದರು.

ಪ್ರತಿಕ್ರಿಯಿಸಿ (+)