ಶುಕ್ರವಾರ, ನವೆಂಬರ್ 22, 2019
19 °C

ಮೇ 3ರಂದು ಕಿರಿಯರ ರಸ್ತೆ ಓಟದ ಸ್ಪರ್ಧೆ

Published:
Updated:

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಬೇಸಿಗೆ ಶಿಬಿರಗಳಲ್ಲಿ ಪಾಲ್ಗೊಂಡಿರುವ ಕಿರಿಯರಿಗಾಗಿ ಜರಗನಹಳ್ಳಿಯ ರಾಮಾಂಜನೇಯ ಫ್ರೆಂಡ್ಸ್ ಫೋರಮ್ ಮತ್ತು ಮುನಿಸಂಜೀವಪ್ಪ ಪ್ರತಿಷ್ಠಾನದ ವತಿಯಿಂದ ಐದನೇ ವಾರ್ಷಿಕ ರಸ್ತೆ ಓಟದ ಸ್ಪರ್ಧೆಗಳನ್ನು ಮೇ 3ರಂದು ಕನಕಪುರ ರಸ್ತೆಯಲ್ಲಿ ಹಮ್ಮಿಕೊಳ್ಳಲಾಗಿದೆ.ಹತ್ತು ವರ್ಷದೊಳಗಿನ ಪ್ರಾಥಮಿಕ ಶಾಲಾ ಮಕ್ಕಳಿಗೆ (2003ರ ಮೇ 5ರ ನಂತರ ಜನಿಸಿದವರು) ಒಂದು ಕಿ.ಮೀ. ಓಟ, 13 ವರ್ಷದೊಳಗಿನ ಮಾಧ್ಯಮಿಕ ಶಾಲಾ ಮಕ್ಕಳಿಗೆ (2000ದ ಮೇ 5ರ ನಂತರ ಜನಿಸಿದವರು) ಎರಡು ಕಿ.ಮೀ. ಓಟ, 16 ವರ್ಷದೊಳಗಿನ ಹೈಸ್ಕೂಲು ಮಕ್ಕಳಿಗೆ (1997ರ ಮೇ 5ರ ನಂತರ ಜನಿಸಿದವರು) ಮೂರು ಕಿ.ಮೀ. ಓಟದ ಸ್ಪರ್ಧೆಗಳು ನಡೆಯುತ್ತವೆ.ಜನ್ಮ ದಿನಾಂಕ ದೃಢಿಕರಿಸುವ ಪತ್ರಗಳೊಂದಿಗೆ ಪ್ರವೇಶಪತ್ರಗಳನ್ನು ಈ ಕೆಳಗಿನ ವಿಳಾಸಕ್ಕೆ ಏಪ್ರಿಲ್ 29ರ ಒಳಗೆ ಕಳುಹಿಸತಕ್ಕದ್ದು. ಒಟ್ಟು 50 ಸಾವಿರ ರೂಪಾಯಿಗಳ ನಗದು ಬಹುಮಾನ  ನೀಡಲಾಗುವುದು.

ಸಂಪರ್ಕ ವಿಳಾಸ: ಜೆ.ಎಂ.ರಾಜಪ್ಪ, ಸಂಘಟನಾ ಕಾರ್ಯದರ್ಶಿ, ಅಮಿತ್ ಕಾಂಪ್ಲೆಕ್ಸ್, ನಂಬರ್ 1, ರಾಜೀವ್ ಗಾಂಧಿ ರಸ್ತೆ, ಜರಗನಹಳ್ಳಿ, ಕನಕಪುರ ಮುಖ್ಯ ರಸ್ತೆ, ಜೆ.ಪಿ.ನಗರ ಅಂಚೆ, ಬೆಂಗಳೂರು-560078. (ಮೊಬೈಲ್ ಸಂಖ್ಯೆ: 9880184848 ಮತ್ತು 9845483344).

ಪ್ರತಿಕ್ರಿಯಿಸಿ (+)