ಮಂಗಳವಾರ, ಮೇ 18, 2021
24 °C

ಮೇ 4: ಮೈಸೂರು ವಲಯ ಹೂಡಿಕೆದಾರರ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಜಾಗತಿಕ ಬಂಡವಾಳ ಹೂಡಿಕೆದಾರರ (ಜಿಮ್) ಸಮಾವೇಶ ಮಾದರಿಯಲ್ಲಿ ಮೈಸೂರು ವಲಯ ಮಟ್ಟದ ಹೂಡಿಕೆದಾರರ ಸಮಾವೇಶವನ್ನು (ಎಂ-ಜಿಮ್) ಆಯೋಜಿಸಲು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸಜ್ಜಾಗಿದೆ.ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಉದ್ದಿಮೆದಾರರನ್ನು ಪ್ರೋತ್ಸಾಹಿಸಿ ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಿಕೊಡುವ ಮೂಲಕ ಹೊಸ ಉದ್ದಿಮೆಗಳ ಸ್ಥಾಪನೆ ಮತ್ತು ಉದ್ಯೋಗ ಸೃಷ್ಟಿಗೆ ವೇದಿಕೆ ಒದಗಿಸಲು ಸಂಸ್ಥೆ ತೀರ್ಮಾನಿಸಿದೆ.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಸ್ಥೆಯ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ, `ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಮೇ 4ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಸಮಾವೇಶವನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಉದ್ಘಾಟಿಸುವರು. ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಸಣ್ಣ ಕೈಗಾರಿಕಾ ಸಚಿವ ನರಸಿಂಹ ನಾಯಕ್ (ರಾಜೂಗೌಡ) ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಪಾಲ್ಗೊಳ್ಳುವರು. ಸಮಾವೇಶದಲ್ಲಿ 1,500 ಕೈಗಾರಿಕೋದ್ಯಮಿಗಳು ಹಾಗೂ 500 ಮಂದಿ ಹೊಸ ಕೈಗಾರಿಕೋದ್ಯಮಿಗಳು ಭಾಗವಹಿಸುವ ನಿರೀಕ್ಷೆ ಇದೆ~ ಎಂದರು.`ಇದೇ ಸಂದರ್ಭದಲ್ಲಿ ಮೈಸೂರು ವಲಯದಲ್ಲಿ ನೂತನವಾಗಿ ಸ್ಥಾಪಿಸಲು ಉದ್ದೇಶಿಸಿರುವ ಉದ್ಯಮಗಳಿಗೆ ಸಂಬಂಧಿಸಿದಂತೆ ಹೂಡಿಕೆದಾರರು ಹಾಗೂ ಸರ್ಕಾರದ ನಡುವೆ ಒಡಂಬಡಿಕೆಗಳಿಗೆ ಸಹಿ ಹಾಕಲಾಗುವುದು~ ಎಂದು ತಿಳಿಸಿದರು.`ಸಮಾವೇಶದ ಅಂಗವಾಗಿ ವಿವಿಧ ವಿಷಯಗಳ ಕುರಿತಂತೆ ನಾಲ್ಕು ಅಧಿವೇಶನಗಳು ನಡೆಯಲಿದ್ದು, ಬೆಳಿಗ್ಗೆ 11.45ಕ್ಕೆ ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ ಕುರಿತ ಪ್ರಥಮ ಅಧಿವೇಶನ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಸಣ್ಣ ಕೈಗಾರಿಕೆ ಮತ್ತು ಅತಿ ಸಣ್ಣ ಕೈಗಾರಿಕೆ ಹಾಗೂ ಬೃಹತ್ ಕೈಗಾರಿಕೋದ್ಯಮ ಕುರಿತ ಅಧಿವೇಶನ, 2 ಗಂಟೆಗೆ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ, 3 ಗಂಟೆಗೆ ಆಹಾರ ಸಂಸ್ಕರಣ ಮತ್ತು ಬ್ಯಾಂಕಿಂಗ್ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ತಜ್ಞರಿಂದ ವಿಶೇಷ ಉಪನ್ಯಾಸ, ಚರ್ಚೆಗೆ ಅವಕಾಶ ಒದಗಿಸಲಾಗಿದೆ~ ಎಂದು ಹೇಳಿದರು.`ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ರೂ. 5 ಸಾವಿರ ಕೋಟಿ, ಬೆಳಗಾವಿಯಲ್ಲಿ ರೂ. 1030 ಕೋಟಿ, ಮಂಗಳೂರಿನಲ್ಲಿ ರೂ. 1760 ಕೋಟಿ ಹೂಡಿಕೆಗೆ ಉದ್ದಿಮೆದಾರರು ಆಸಕ್ತಿ ತೋರಿಸಿದ್ದಾರೆ~ ಎಂದರು.ಪತ್ರಿಕಾಗೋಷ್ಠಿಯಲ್ಲಿ ಮೈಸೂರು ಕೈಗಾರಿಕಾ ಮಂಡಳಿ ಜಂಟಿ ನಿರ್ದೇಶಕ ಎಂ.ಶಿವಶಂಕರ್, ಶಿವಕುಮಾರ್, ಹೆಬ್ಬಾಳು ಇಂಡಸ್ಟ್ರಿಯಲ್ ಮ್ಯಾನೇಜ್‌ಮೆಂಟ್ ಸಂಸ್ಥೆ ಅಧ್ಯಕ್ಷ ಜಯಂತ್, ಪುಟ್ಟನಾಯಕ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.