ಶನಿವಾರ, ನವೆಂಬರ್ 23, 2019
18 °C

`ಮೈಂಡ್ ಸ್ಪೇಸ್' ಛಾಯಾಚಿತ್ರ ಪ್ರದರ್ಶನ

Published:
Updated:
`ಮೈಂಡ್ ಸ್ಪೇಸ್' ಛಾಯಾಚಿತ್ರ ಪ್ರದರ್ಶನ

ಕ್ರೆಸೆಂಟ್ ರಸ್ತೆಯಲ್ಲಿರುವ ನಳಪಾದ್ಸ್ ಹೊಟೆಲ್ ಬೆಂಗಳೂರು ಇಂಟರ್‌ನ್ಯಾಷನಲ್‌ನ ಗ್ಯಾಲರಿ ಕ್ರೆಸೆಂಟ್‌ನಲ್ಲಿ ಏ.6ರಿಂದ 16ರವರೆಗೆ `ಮೈಂಡ್ ಸ್ಪೇಸ್' ಹೆಸರಿನ ಸಮೂಹ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ.ಏಳು ಮಂದಿ ಪ್ರತಿಭಾವಂತ ಯುವ ಛಾಯಾಗ್ರಾಹಕರ ಚಿತ್ರಗಳು ಪ್ರದರ್ಶನದಲ್ಲಿವೆ. ಕೇರಳ ಮೂಲದ ಬೆಂಗಳೂರು ನಿವಾಸಿ ರಾಹುಲ್ ಅಕೋಟ್, ಕೋದಂಡರಾಮ್, ಮಂಗಳೂರು ಮೂಲದ ಬರೋಡ ನಿವಾಸಿ ಶಾಲ್ಮಲಿ ಶೆಟ್ಟಿ, ತಂಜಾವೂರಿನ ಮಣಿಕಂಠನ್ ಎ.ವಿ., ಶಾನಿಲ್ ಲೋದ್, ರಿತೇಶ್ ಮೆನನ್ ಮತ್ತು ಬೆಂಗಳೂರಿನ ಚಿತ್ರಕಲಾವಿದ ವಿಷ್ಣುಕುಮಾರ್ ಅವರ ಅಪರೂಪದ ಛಾಯಾಚಿತ್ರಗಳ ಪ್ರದರ್ಶನವನ್ನು ಏ.6ರಂದು ಸಂಜೆ 6ಕ್ಕೆ ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಟಿ.ಎನ್.ಎ.ಪೆರುಮಾಳ್ ಉದ್ಘಾಟಿಸುವರು.ಪ್ರದರ್ಶನ ಪ್ರತಿದಿನ ಬೆಳಗ್ಗೆ 11ರಿಂದ ಸಂಜೆ 7ರವರೆಗೆ ತೆರೆದಿರುತ್ತದೆ. ಮಾಹಿತಿಗೆ: 9886349811.

ಪ್ರತಿಕ್ರಿಯಿಸಿ (+)