ಮೈಕ್ರೋಸಾಫ್ಟ್‌ಗೆ ಹ್ಯಾಕರ್ ದಾಳಿ

7

ಮೈಕ್ರೋಸಾಫ್ಟ್‌ಗೆ ಹ್ಯಾಕರ್ ದಾಳಿ

Published:
Updated:

ನವದೆಹಲಿ (ಪಿಟಿಐ):  `ಎವಿಲ್ ಶಾಡೋ~ ಎಂಬ ಹೆಸರಿನ ಚೀನಾದ ಹ್ಯಾಕರ್‌ಗಳ ತಂಡವೊಂದು ಮೈಕ್ರೋಸಾಫ್ಟ್‌ನ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದ ವೆಬ್‌ಸೈಟ್‌ನಿಂದ ಅಕ್ರಮವಾಗಿ ಮಾಹಿತಿ ಪಡೆದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ.ಈ ಹಿನ್ನೆಲೆಯಲ್ಲಿ ಮೈಕ್ರೋಸಾಫ್ಟ್ ವೆಬ್ ಸೈಟ್ www.microsoftstore.co.in ಅನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.`ಈ ಬಗ್ಗೆ ಗ್ರಾಹಕರಿಗೆ ಮಾರ್ಗಸೂಚಿಗಳನ್ನು ಕಳುಹಿಸಲಾಗಿದ್ದು, ವೆಬ್‌ಸೈಟ್ ಅನ್ನು ಮೊದಲಿನ ಸ್ಥಿತಿಗೆ ತರುವ ನಿಟ್ಟಿನಲ್ಲಿ ಕಂಪಪೆನಿಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ~ ಎಂದು ಮೈಕ್ರೋಸಾಫ್ಟ್ ವಕ್ತಾರೆ ಇ-ಮೇಲ್‌ನಲ್ಲಿ ತಿಳಿಸಿದ್ದಾರೆ. ಮಾಹಿತಿ ಸೋರಿಕೆಯಿಂದಾಗಿ  ಅನಾನುಕೂಲವಾಗಿರುವುದರಿಂದ ಕಂಪೆನಿ ತನ್ನ ಗ್ರಾಹಕರಲ್ಲಿ ಕ್ಷಮೆಯಾಚಿಸಿದೆ.ಕಳೆದ ಜನವರಿ- ಜೂನ್ ನಡುವೆ 117 ಸರ್ಕಾರಿ ವೆಬ್‌ಸೈಟ್‌ಗಳು ಹ್ಯಾಕರ್‌ಗಳ ದಾಳಿಗೆ ಒಳಗಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry