ಭಾನುವಾರ, ಡಿಸೆಂಬರ್ 8, 2019
25 °C

ಮೈತ್ರಿ ಸರ್ಕಾರ ನಡೆಸುವುದು ಸುಲಭವಲ್ಲ: ಸಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈತ್ರಿ ಸರ್ಕಾರ ನಡೆಸುವುದು ಸುಲಭವಲ್ಲ: ಸಿಂಗ್

ನವದೆಹಲಿ (ಪಿಟಿಐ): `ಮೈತ್ರಿಕೂಟ ಸರ್ಕಾರ ನಡೆಸುವುದು ಸುಲಭದ ಕಾರ್ಯವಲ್ಲ' ಎಂದು  ಪ್ರಧಾನಿ ಮನಮೋಹನ್ ಸಿಂಗ್ ಬುಧವಾರ ತಿಳಿಸಿದ್ದಾರೆ.

ಯುಪಿಎ ಮೈತ್ರಿಕೂಟದಿಂದ ಡಿಎಂಕೆ ಹೊರ ಬಂದ ಬಳಿಕ ಮೊದಲ ಭಾರಿಗೆ ಸಾರ್ವಜನಿಕವಾಗಿ ಮನಮೋಹನ್ ಸಿಂಗ್ ಮಾತನಾಡಿದ್ದಾರೆ.ಮೈತ್ರಿ ಪಕ್ಷಗಳ ಆಂತರಿಕ ವಿಷಯಗಳು, ಬ್ಲಾಕ್ ಮೇಲ್ ತಂತ್ರ ಮತ್ತು  ಭ್ರಷ್ಟಾಚಾರ  ಸುಗಮ ಆಡಳಿತಕ್ಕೆ ಅಡ್ಡಿಯಾಗಿದೆ. ಆಗಾಗಿ ಮೈತ್ರಿ ಸರ್ಕಾರವನ್ನು ನಿಭಾಯಿಸುವುದು ಕಷ್ಟದ ಕೆಲಸ ಎಂದು ಸಿಂಗ್ ವಿಷಾಧ ವ್ಯಕ್ತಪಡಿಸಿದ್ದಾರೆ.ಈ ಎಲ್ಲಾ ಸಮಸ್ಯೆಗಳ ಮಧ್ಯೆಯು ಯುಪಿಎ ಸರ್ಕಾರ ಆರ್ಥಿಕ ಅಭಿವೃದ್ಧಿ ದರವನ್ನು ಸಮತೋಲನದಲ್ಲಿ ಕಾಯ್ದುಕೊಂಡು ಬಂದಿದೆ ಎಂದು ಅವರು ವಿವರಿಸಿದರು.

ಪ್ರತಿಕ್ರಿಯಿಸಿ (+)