ಭಾನುವಾರ, ಮೇ 16, 2021
26 °C

ಮೈಲಾರ ಮಹಾದೇವ ಕರ್ನಾಟಕದ ಭಗತ್ ಸಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: `ಹುತಾತ್ಮ ಮೈಲಾರ ಮಹಾದೇವ ಅವರ ಸ್ಮಾರಕವನ್ನು ಪಂಜಾಬಿನ ಫಿರೋಜಪುರ ದಲ್ಲಿರುವ ಭಗತ್‌ಸಿಂಗ್ ಅವರ ಸ್ಮಾರಕದಂತೆ ನಿರ್ಮಿಸಿ, ಅದನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು~ ಎಂದು ನಾಡೋಜ ಡಾ.ಪಾಟೀಲ ಪುಟ್ಟಪ್ಪ ಸರ್ಕಾರಕ್ಕೆ ಒತ್ತಾಯಿಸಿದರು.ನಗರದ ಹೊರವಲಯದಲ್ಲಿರುವ ಮೈಲಾರ ಮಹಾದೇವ ವೀರಸೌಧ ಸಭಾಭವನದಲ್ಲಿ ಭಾನುವಾರ ನಡೆದ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.ಮೈಲಾರ ಮಹಾದೇವ ಕೇವಲ ಸ್ವಾತಂತ್ರ್ಯ ಹೋರಾಟಗಾರರಷ್ಟೇ ಆಗಿರದೇ  ಗಾಂಧೀಜಿ ಅವರ ಎಲ್ಲ ಆಶಯಗಳನ್ನು ಮೈಗೂಡಿಸಿಕೊಂಡ ಕರ್ನಾಟಕದ ಭಗತ್‌ಸಿಂಗ್ ಆಗಿದ್ದರು.ಅವರ ಜೀವನ, ಸಂದೇಶಗಳು ಇಂದಿನ ಯುವ ಜನಾಂಗಕ್ಕೆ ತಿಳಿಸಿಕೊಡಲು ಕೇವಲ ಕಟ್ಟಡ ಕಟ್ಟಿದರೆ ಸಾಲದು. ಈಗ ನಿರ್ಮಿಸಲಾದ ವೀರಸೌಧವನ್ನು `ಮೈಲಾರ ಮಹಾದೇವ ಸ್ಮಾರಕ~ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ.ಉದಾಸಿ ಮಾತನಾಡಿ, ಹುತಾತ್ಮ ಮೈಲಾರ ಮಹಾದೇವ ಅವರ ಸ್ಮಾರಕವನ್ನು ಭಗತ್‌ಸಿಂಗ್ ಸ್ಮಾರಕದಂತೆ ಅಭಿವೃದ್ಧಿಪಡಿಸುವ ಕುರಿತು ಚಿಂತನೆ ನಡೆದಿದೆ. ಆದಷ್ಟು ಬೇಗ ಫಿರೋಜಪುರಕ್ಕೆ ತೆರಳಿ, ಅಲ್ಲಿನ ಸ್ಮಾರಕವನ್ನು ನೋಡಿ ಬಂದು, ಅದೇ ಮಾದರಿಯಲ್ಲಿ ಸ್ಮಾರಕ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಶಾಸಕ ನೆಹರೂ ಓಲೇಕಾರ ಅಧ್ಯಕ್ಷತೆ ವಹಿಸಿದ್ದರು. ಸಂಸದ ಶಿವಕುಮಾರ ಉದಾಸಿ, ವಿಧಾನಸಭಾ ಮಾಜಿ ಸಭಾಪತಿ ಬಿ.ಜಿ. ಬಣಕಾರ, ಸ್ವಾತಂತ್ರ್ಯ ಹೋರಾಟಗಾರರ ಜಿಲ್ಲಾ ಸಂಘದ ಅಧ್ಯಕ್ಷ ದೇವೇಂದ್ರಪ್ಪ ವಿಭೂತಿ, ಜಿ.ಪಂ. ಅಧ್ಯಕ್ಷೆ ಸಾವಿತ್ರಿ ತಳವಾರ, ಉಪಾಧ್ಯಕ್ಷೆ ಗದಿಗೆವ್ವ ಬಸನಗೌಡ್ರ, ಮೈಲಾರ ಮಹಾದೇವರ ಪುತ್ರಿ ಕಸ್ತೂರೆಮ್ಮ, ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ ಮತ್ತಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.