ಬುಧವಾರ, ಜೂನ್ 16, 2021
28 °C

ಮೈಸೂರಿಗೆ ಲಾಭವಿಲ್ಲದ ಬಜೆಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಕೇಂದ್ರ ರೈಲ್ವೆ ಬಜೆಟ್‌ಗೆ ನಗರ ವಾಣಿಜ್ಯ ಮತ್ತು ಕೈಗಾರಿ ಕೋದ್ಯಮಿಗಳಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಇದೊಂದು ನಿರಾಶದಾಯಕ ಬಜೆಟ್ ಎಂದಿದ್ದರೆ, ಲಘು ಉದ್ಯೋಗ ಭಾರತಿ ಕರ್ನಾಟಕ ಘಟಕವು ಸಮತೋಲನ ದಿಂದ ಕೂಡಿದ ಬಜೆಟ್ ಎಂದು ಅಭಿಪ್ರಾಯಪಟ್ಟಿದೆ.ರಾಜ್ಯಕ್ಕೆ ನಿರಾಶೆ: ಉತ್ತರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಕೇರಳಕ್ಕೆ ತಲಾ 4 ಹಾಗೂ ಗುಜರಾತಿಗೆ 2 ಕೋಚ್ ಫ್ಯಾಕ್ಟರಿ ಕೊಟ್ಟಿರುವ ಕೇಂದ್ರ ಸರ್ಕಾರ ರಾಜ್ಯಕ್ಕೆ 1 ಕೋಚ್ ಫ್ಯಾಕ್ಟರಿ ನೀಡಿದೆ. ಅದು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ನಡೆಸಬೇಕೆನ್ನುವ ಷರತ್ತು ಹಾಕಿದೆ. ಇದು ಸರಿಯಲ್ಲ, ಇದರಿಂದ ಹೊಂದಾ ಣಿಕೆ ಕಷ್ಟವಾಗುತ್ತದೆ. ಆದ್ದರಿಂದ ರೈಲ್ವೆ ಇಲಾಖೆಯ ಪೂರ್ಣ ಕಾರ್ಯ ಕ್ರಮದ ಅಡಿಯಲ್ಲಿ ಕೋಚ್ ಫ್ಯಾಕ್ಟರಿ ನಡೆಸಬೇಕು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಸುಧಾಕರ ಎಸ್. ಶೆಟ್ಟಿ ಆಗ್ರಹಿಸಿದ್ದಾರೆ.ಮೈಸೂರು- ಚಾಮರಾಜನಗರ ಮೆಟ್ಟುಪಾಳ್ಯ ಕಾಮಗಾರಿ ಆರಂಭದ ನಿರೀಕ್ಷಿಯಿತ್ತು. ಶಿವಮೊಗ್ಗ- ಮೈಸೂರು ರೈಲನ್ನು ಚಾಮರಾಜ ನಗರಕ್ಕೆ ವಿಸ್ತರಿಸುವುದರ ನಂಬಿಕೆ ಇತ್ತು. ಮೈಸೂರು-ಬೆಂಗಳೂರು ಡಬಲ್ ಟ್ರ್ಯಾಕ್ ಮಾಡುತ್ತಾರೆ ಎನಲಾಗುತ್ತಿತ್ತು. ಕೇವಲ ಕೋಚ್ ಫ್ಯಾಕ್ಟರಿ ನೀಡುವ ಏಕೈಕ ಭರವಸೆ ಯೊಂದಿಗೆ ರಾಜ್ಯದ ನಾಯಕರ ಸುಮ್ಮನಿರುವ ಯತ್ನವನ್ನು ರೈಲ್ವೆ ಸಚಿವ ದಿನೇಶ್ ತ್ರಿವೇದಿ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಹೊಸಪೇಟೆ-ಮೈಸೂರಿಗೆ ನೇರ ರೈಲ್ವೆ ಸಂಪರ್ಕ ಕೇಳಿದ್ದು ಪರಿಗಣಿಸಿಲ್ಲ. ಹಲವು ಸಮೀಕ್ಷೆಗಳು ನಡೆಯು ತ್ತಿದ್ದರೂ ಯಾವುದೇ ಕಾರ್ಯಗಳು ನಡೆಯುತ್ತಿಲ್ಲ ಎಂದಿದ್ದಾರೆ.ಸಮತೋಲನ ಬಜೆಟ್: ಮೈಸೂರು ಬೀರೂರು ಪ್ಯಾಸೆಂಜರ್,  ಮೈಸೂರು ಪಂಡರ ಪುರ ಎಕ್ಸ್‌ಪ್ರಸ್ ದೊರೆತಿರು ವುದು ಸಂತಸ ತಂದಿದೆ ಎಂದು ಲಘು ಉದ್ಯೋಗ ಭಾರತಿ ಕರ್ನಾಟಕ ಘಟಕದ ಉಪಾಧ್ಯಕ್ಷ ಸುರೇಶ ಕುಮಾರ್ ಜೈನ್ ಹೇಳಿದ್ದಾರೆ.ಮೈಸೂರು, ಚಾಮರಾಜನಗರ ಮಾರ್ಗ ಕಾಯಂಗೊಳಿಸಿರುವುದು ಸ್ವಾಗತಾರ್ಹ. ಶ್ರವಣಬೆಳಗೊಳ ಮೈಸೂರು ಮಾರ್ಗಕ್ಕೆ ಚಾಲನೆ ನೀಡು ತ್ತಿರುವುದು ಪ್ರವಾಸೋದ್ಯಮಕ್ಕೆ ಪೂರಕವಾಗಲಿದೆ. ರಾಮನಗರ ಮೈಸೂರು ಎಲೆಕ್ಟ್ರಿಕ್ ರೈಲ್ವೆಗೆ ಅನು ಮೋದಿಸಿರುವುದು ಒಳ್ಳೆಯದು. ಆದರೆ ಸಚಿವ ಕೆ.ಎಚ್. ಮುನಿಯಪ್ಪ ಮೈಸೂರಿನ ಬಗ್ಗೆ ಮುನಿಸಿಕೊಂಡಿರು ವುದು ಬೇಸರವಾಗಿದೆ ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.