ಮೈಸೂರಿಗೆ ಸರಕು ಪೂರೈಕೆ ಸ್ಥಗಿತ

7
ತಮಿಳುನಾಡಿಗೆ ರೂ30 ಕೋಟಿ ನಷ್ಟ

ಮೈಸೂರಿಗೆ ಸರಕು ಪೂರೈಕೆ ಸ್ಥಗಿತ

Published:
Updated:

ಈರೋಡ್ (ಪಿಟಿಐ): ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ, ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ನಾಲ್ಕು ದಿನಗಳಿಂದ ವಾಹನಗಳನ್ನು ತಡೆಹಿಡಿಯುತ್ತಿರುವುದರಿಂದ ಕನಿಷ್ಠ 30 ಕೋಟಿ ರೂಪಾಯಿ ನಷ್ಟವಾಗಿದೆ.

ಕನ್ನಡಪರ ಸಂಘಟನೆಗಳು ಮಂಡ್ಯ, ಚಾಮರಾಜನಗರ  ಮತ್ತು ಮೈಸೂರು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ತಮಿಳುನಾಡಿನ ಸತ್ಯಮಂಗಲ ಕಡೆಯಿಂದ ಬರುವ ವಾಹನಗಳು ಕರ್ನಾಟಕವನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ.ಇದರಿಂದಾಗಿ ತಮಿಳುನಾಡಿನಿಂದ ಮೈಸೂರಿಗೆ ಪೂರೈಕೆಯಾಗುವ ಹತ್ತಿ ಅಂಡಿಗೆಗಳು, ರೇಷ್ಮೆ, ಚರ್ಮ, ಎಣ್ಣೆ, ಶೇಂಗಾ, ಮೊಟ್ಟೆ, ಬ್ರಾಯ್ಲರ್ ಕೋಳಿಮರಿ , ಮಲ್ಲಿಗೆ ಮತ್ತಿತರ ಹೂವುಗಳ ಇತ್ಯಾದಿಗಳು ಅತ್ತ ಕಡೆಯೇ ಸ್ಥಗಿತವಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry