ಮೈಸೂರಿನಲ್ಲಿ ರಣಜಿ ಕ್ರಿಕೆಟ್ ಪಂದ್ಯ

7

ಮೈಸೂರಿನಲ್ಲಿ ರಣಜಿ ಕ್ರಿಕೆಟ್ ಪಂದ್ಯ

Published:
Updated:

ಗ್ಲೇಡ್ಸ್ ಅಂಗಳದಲ್ಲಿ ಡಿ.15ರಿಂದ ಕರ್ನಾಟಕ-ವಿದರ್ಭ ಮುಖಾಮುಖಿ

ಬೆಂಗಳೂರು:
ಎರಡು ವರ್ಷಗಳ ಬಳಿಕ ಅರಮನೆಗಳ ನಗರಿ ಮೈಸೂರು ಮತ್ತೆ ರಣಜಿ ಟ್ರೋಫಿ ಟೂರ್ನಿಯ ಪಂದ್ಯ ಆಯೋಜಿಸಲು ಸಿದ್ಧವಾಗುತ್ತಿದೆ. ಆತಿಥೇಯ ಕರ್ನಾಟಕ ಹಾಗೂ ವಿದರ್ಭ ತಂಡಗಳ ನಡುವಿನ ಎಲೈಟ್ ಗುಂಪಿನ ಪಂದ್ಯ ಡಿಸೆಂಬರ್ 15ರಿಂದ 18ರವರೆಗೆ ನಡೆಯಲಿದೆ.ಎಲೈಟ್ `ಬಿ~ ಗುಂಪಿನ ಈ ಪಂದ್ಯ ಮಾನಸಗಂಗೋತ್ರಿಯ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ವಿಷಯವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಆಡಳಿತ ಮಂಡಳಿ ಸದಸ್ಯ ವಿಜಯ್ ಆರ್.ಭಾರದ್ವಾಜ್ `ಪ್ರಜಾವಾಣಿ~ಗೆ ಖಚಿತ ಪಡಿಸಿದ್ದಾರೆ.`ಈ ಬಾರಿ ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ರಣಜಿ ಪಂದ್ಯ ಆಯೋಜಿಸಲು ಕೆಎಸ್‌ಸಿಎ ತೀರ್ಮಾನಿಸಿದೆ. ಗ್ರಾಮೀಣ ಭಾಗದಲ್ಲಿ ಕ್ರಿಕೆಟ್‌ಗೆ ಪ್ರೋತ್ಸಾಹ ನೀಡುವುದು ಇದರ ಉದ್ದೇಶ. ಇದರಿಂದ ಆ ಪ್ರದೇಶದ ಸೌಲಭ್ಯಗಳು ಸುಧಾರಣೆ ಆಗಲಿವೆ. ಮೈಸೂರಿನ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ಹೊಸ ಪೆವಿಲಿಯನ್ ನಿರ್ಮಿಸಿದ್ದೇವೆ. ಇದರ ಉದ್ಘಾಟನೆ ರಣಜಿ ಪಂದ್ಯದ ಹಿಂದಿನ ದಿನ ನಡೆಯಲಿದೆ~ ಎಂದೂ ಅವರು ಹೇಳಿದರು.`10 ದಿನಗಳ ಹಿಂದೆ ಹುಬ್ಬಳ್ಳಿಗೆ ಬಿಸಿಸಿಐ ಪಿಚ್ ಪರಿಶೀಲನಾ ಸಮಿತಿಯವರು ಆಗಮಿಸಿ ಕ್ರೀಡಾಂಗಣದ ವ್ಯವಸ್ಥೆ ಹಾಗೂ ಪಿಚ್ ಪರಿಶೀಲನೆ ನಡೆಸಿದ್ದಾರೆ~ ಎಂದೂ ವಿಜಯ್ ನುಡಿದರು.ಹುಬ್ಬಳ್ಳಿಯಲ್ಲಿ ಡಿ. 22ರಿಂದ 25ರವರೆಗೆ ಕರ್ನಾಟಕ ಹಾಗೂ ಹರಿಯಾಣ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕಿನ್ನೂ ಅಧಿಕೃತ ಒಪ್ಪಿಗೆ ಸಿಗಬೇಕಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry