ಬುಧವಾರ, ಫೆಬ್ರವರಿ 1, 2023
18 °C

ಮೈಸೂರಿನಲ್ಲಿ 111 ಅಡಿ ಉದ್ದದ ರಾಷ್ಟ್ರ ಧ್ವಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರಿನಲ್ಲಿ 111 ಅಡಿ ಉದ್ದದ ರಾಷ್ಟ್ರ ಧ್ವಜ

ಮೈಸೂರು:  ಗಣರಾಜ್ಯೋತ್ಸವದ ದಿನದಂದು ಇಲ್ಲಿನ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ಕಚೇರಿಯ ಮುಂದೆ 111 ಅಡಿ ಉದ್ದ , 12 ಅಡಿ ಅಗಲದ ರಾಷ್ಟ್ರ ಧ್ವಜವನ್ನು ಬುಧವಾರ ಪ್ರದರ್ಶಿಸಲಾಯಿತು.



ಇಲ್ಲಿನ ಮೈಸೂರು- ಬೆಂಗಳೂರು ರಸ್ತೆಯಲ್ಲಿರುವ ಕಚೇರಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಮಂದಿ ಪಕ್ಷದ ಕಾರ್ಯಕರ್ತರು ಈ ಬೃಹತ್ ರಾಷ್ಟ್ರಧ್ವಜವನ್ನು ಹಿಡಿದುಕೊಂಡು ನೋಡುಗರಿಗೆ ಅಚ್ಚರಿ ಉಂಟು ಮಾಡಿದರು. ಅಲ್ಲದೇ ‘ಝಂಡಾ ಉಂಚಾ ರಹೇ ಹಮಾರ’ ಸಾರೆ ಜಹಾಸೆ ಅಚ್ಚಾ’ ಗೀತೆಯನ್ನು ಹಾಡುವ ಮೂಲಕ ರಾಷ್ಟ್ರಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದರು.



ಈ ಬೃಹತ್ ತಿರಂಗಾ ತಯಾರಾಗಿದ್ದು ಇಲ್ಲಿನ ಮಂಡಿ ಮೊಹಲ್ಲಾದ ಸಾಡೆ ರಸ್ತೆಯ ದುಬೈ ಸೆಂಟರ್‌ನಲ್ಲಿ. ಇದರ ಹಿಂದಿನ ರೂವಾರಿ ಎಸ್‌ಡಿಪಿಐ ಪಕ್ಷದ ಸದಸ್ಯ ಅಬ್ದುಲ್ ಅನ್ಸಾರಿ.



 2 ವರ್ಷಗಳ ಹಿಂದೆ ಪಂಜಾಬ್‌ನ ಚಂಢೀಗಡದಲ್ಲಿ 65 ಅಡಿ ಉದ್ದದ ರಾಷ್ಟ್ರಧ್ವಜ ಹಾರಾಡಿತು. ಇದರಿಂದ ಪ್ರೇರಿತರಾದ ಅನ್ಸಾರಿ 111 ಅಡಿ ಉದ್ದದ ಧ್ವಜವನ್ನು ತಯಾರು ಮಾಡಲು ಪಣ ತೊಟ್ಟು ನಿಂತರು.



8 ಮಂದಿ ಟೈಲರ್‌ಗಳು ಇವರಿಗೆ ಸಹಾಯಕರಾಗಿ ದುಡಿದರು. 15 ದಿನಗಳಲ್ಲಿ ಈ ಧ್ವಜ ತಯಾರಾಯಿತು. ‘ಬಿಳಿ ಬಣ್ಣದ ಬಟ್ಟೆ ಮೈಸೂರಲ್ಲೇ ಸಿಕ್ಕಿತು.

 ಕೇಸರಿ ಹಾಗೂ ಹಸಿರು ಬಟ್ಟೆಯನ್ನು ಬೆಂಗಳೂರಿನಿಂದ ತರಿಸಲಾಯಿತು. ಈ ಪ್ರದರ್ಶನವು ದೇಶದ ಇತಿಹಾಸದಲ್ಲೇ ಪ್ರಥಮ ಪ್ರಯತ್ನವಾಗಿದ್ದು, ಇದೊಂದು ದಾಖಲೆಯ ಪಯತ್ನ’ ಎನ್ನುತ್ತಾರೆ ಅಬ್ದುಲ್ ಅನ್ಸಾರಿ.



ಉಪನ್ಯಾಸಕರಾದ ಶಬ್ಬೀರ್ ಹುಸೇನ್, ಶಬ್ಬೀರ್ ಮುಸ್ತಫಾ ಎಸ್‌ಡಿಪಿಐ ಅಧ್ಯಕ್ಷ ಮಹಮ್ಮದ್ ಫೈಸಲ್, ಉಪಾಧ್ಯಕ್ಷ ಅಕ್ರಮ್ ಷರೀಫ್, ಪ್ರಧಾನ ಕಾರ್ಯದರ್ಶಿ ಅಫ್ಜಲ್ ಮಹಮ್ಮದ್, ಸದಸ್ಯರಾದ ಕಿರಣ್ ಕುಮಾರ್, ಅಯೂಬ್‌ಖಾನ್  ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.