ಮೈಸೂರಿನ ಬಾಲಕನಿಗೆ ಶೌರ್ಯ ಪ್ರಶಸ್ತಿ

7

ಮೈಸೂರಿನ ಬಾಲಕನಿಗೆ ಶೌರ್ಯ ಪ್ರಶಸ್ತಿ

Published:
Updated:

ಮೈಸೂರು: ಗಣರಾಜ್ಯೋತ್ಸವದ ಸಂದರ್ಭದಲ್ಲಿ ನೀಡಲಾಗುವ ‘ರಾಷ್ಟ್ರೀಯ ಶೌರ್ಯ ಪ್ರಶಸ್ತಿ’ಗೆ ಇಲ್ಲಿನ ಗದ್ದಿಗೆ ರಸ್ತೆಯಲ್ಲಿರುವ ನವೋದಯ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿ ಎಸ್.ಎಸ್. ಮನೋಜ್ ಆಯ್ಕೆಯಾಗಿದ್ದಾರೆ.

2012ರ ಸೆ. 2ರಂದು ಶ್ರೀರಂಗಪಟ್ಟ­ಣದ ಕಾವೇರಿ ನದಿಗೆ ಕಾಲು ಜಾರಿ ಬಿದ್ದ ಮಂಚಮ್ಮ ಎಂಬ ಅಂಗವಿಕಲ ಮಹಿಳೆ­ಯನ್ನು ರಕ್ಷಿಸಿದ್ದ ಈತನಿಗೆ ರಾಜ್ಯ ಸರ್ಕಾರ ‘ಹೊಯ್ಸಳ ಮತ್ತು ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿ’ ನೀಡಿ ಗೌರವಿಸಿದೆ.

ಪ್ರಶಸ್ತಿ ಪತ್ರ, ಒಂದು ಚಿನ್ನದ  ಪದಕ ಹಾಗೂ ಒಂದು ಲಕ್ಷ ರೂ. ನಗದು ಒಳಗೊಂಡಿದೆ. ಗಣ­ರಾಜ್ಯೋತ್ಸವದಂದು ನವದೆಹಲಿಯಲ್ಲಿ  ಪ್ರಧಾನ­ಮಂತ್ರಿ ಡಾ.ಮನ­ಮೋಹನ ಸಿಂಗ್  ಪದಕ ವಿತರಣೆ ಮಾಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry