ಬುಧವಾರ, ಮಾರ್ಚ್ 3, 2021
25 °C
ಮಾರಾಟಕ್ಕೆ ತಾತ್ಕಾಲಿಕ ತಡೆ; ವ್ಯಾಪಾರಿಗಳಿಗೆ ಸೂಚನೆ

ಮೈಸೂರಿನ ‘ಸಿಎಫ್‌ಟಿಆರ್‌ಐ’ನಲ್ಲಿ ಮ್ಯಾಗಿ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರಿನ ‘ಸಿಎಫ್‌ಟಿಆರ್‌ಐ’ನಲ್ಲಿ ಮ್ಯಾಗಿ ಪರೀಕ್ಷೆ

ಬೆಂಗಳೂರು/ನವದೆಹಲಿ: ನೆಸ್ಲೆ ಕಂಪೆನಿಯ ಮ್ಯಾಗಿ ನೂಡಲ್ಸ್‌ನಲ್ಲಿ ಅಪಾಯಕಾರಿ ಮೋನೊಸೋಡಿಯಂ ಗ್ಲುಟಮೇಟ್ ಮತ್ತು ಸೀಸದ ಅಂಶ ಪತ್ತೆಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ನೂಡಲ್ಸ್‌ ಮಾದರಿಯನ್ನು ಹೆಚ್ಚಿನ ಪರೀಕ್ಷೆಗಾಗಿ ಮೂರು ಪ್ರಯೋಗಾಲಯಗಳಿಗೆ ಕಳುಹಿಸಿದೆ.

ಮೈಸೂರಿನಲ್ಲಿರುವ ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಮತ್ತು ಬೆಂಗಳೂರಿನಲ್ಲಿರುವ ಎರಡು ಅಧಿಕೃತ ಪ್ರಯೋಗಾಲಯಗಳಲ್ಲಿ ಮ್ಯಾಗಿ ಪರೀಕ್ಷೆ ನಡೆಯಲಿದೆ. ವರದಿ ಬಂದ ನಂತರ ಅವುಗಳ ನಿಷೇಧ ಕುರಿತು ತೀರ್ಮಾನ ಮಾಡಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ.‘ಈ ಪ್ರಯೋಗಾಲಗಳು ಸುರಕ್ಷತಾ ವರದಿ ನೀಡುವವರೆಗೂ ಮ್ಯಾಗಿ ತಿನ್ನಬೇಡಿ.  ಈಗಾಗಲೇ ಅಧಿಕಾರಿಗಳು ಮ್ಯಾಗಿ ತಯಾರಿಕಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಲ್ಲರೆ ವ್ಯಾಪಾರಿಗಳಿಗೆ ತಾತ್ಕಾಲಿಕವಾಗಿ ಮ್ಯಾಗಿ ಮಾರಾಟ ನಿಲ್ಲಿಸುವಂತೆ ಸೂಚಿಸಲಾಗಿದೆ’ ಎಂದು ಅವರು  ಹೇಳಿದರು.ದೆಹಲಿ, ಕೇರಳ, ಪಂಜಾಬ್‌, ಗುಜರಾತ್‌, ತಮಿಳುನಾಡು ರಾಜ್ಯಗಳು ಈಗಾಗಲೇ ಮ್ಯಾಗಿ ಮಾದರಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಗಳಿಗೆ ಕಳುಹಿಸಿವೆ.ಮ್ಯಾಗಿ ನೂಡಲ್ಸ್‌ನ ಮಾದರಿಗಳು ಆರೋಗ್ಯಕ್ಕೆ ಹಾನಿಕಾರಕ ಎಂಬುದು ಪರೀಕ್ಷೆಯಿಂದ ತಿಳಿದುಬಂದಿದೆ ಎಂದು ದೆಹಲಿ ಸರ್ಕಾರ ತಿಳಿಸಿದ್ದರೆ, ಸರ್ಕಾರಿ ಸ್ವಾಮ್ಯದ ಮಳಿಗೆಗಳಲ್ಲಿ ಈ ಉತ್ಪನ್ನಗಳನ್ನು  ಕೇರಳ ಸರ್ಕಾರ ನಿಷೇಧಿಸಿದೆ. ಹರಿಯಾಣ ಸರ್ಕಾರ ಉತ್ಪನ್ನದ ಮಾದರಿ ಪರೀಕ್ಷಿ­ಸಲು ನಿರ್ಧರಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.