ಮೈಸೂರು: ಅಪಹೃತ ವಿದ್ಯಾರ್ಥಿಯ ಹತ್ಯೆ

7

ಮೈಸೂರು: ಅಪಹೃತ ವಿದ್ಯಾರ್ಥಿಯ ಹತ್ಯೆ

Published:
Updated:

ಮೈಸೂರು: ಹಣಕ್ಕಾಗಿ ಅಪಹರಿಸಲಾಗಿದ್ದ ವಿದ್ಯಾರ್ಥಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದು, ನಗರದ ಹೊರವಲಯದ ಜಯಪುರ ವರುಣಾ ನಾಲೆ ಬಳಿ ಬುಧವಾರ ಸಂಜೆ ಶವ ಪತ್ತೆಯಾಗಿದೆ.ಕೊಲೆಯಾದ ಸಂಜಯ್ (18), ಹೆಬ್ಬಾಳು ನಿವಾಸಿ ತಾರಾರಾಮ್ ಅವರ ಮೂರು ಮಕ್ಕಳಲ್ಲಿ ಹಿರಿಯವನು. ನಗರದ ವಿದ್ಯಾಶ್ರಮ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ತಾರಾರಾಮ್ ಅವರು ಕಾಳಿದಾಸ ರಸ್ತೆಯಲ್ಲಿ ಪಂಚರತ್ನ ಜ್ಯುವೆಲರಿ ಅಂಗಡಿಯನ್ನು ನಡೆಸುತ್ತಿದ್ದಾರೆ.ಡಿ.12 ರಂದು ಸಂಜೆ 7 ಗಂಟೆ ಸುಮಾರಿಗೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಸಂಜಯ್‌ನನ್ನು ವಾಹನದಲ್ಲಿ ಬಂದ ದುಷ್ಕರ್ಮಿಗಳು ಅಪಹರಿಸಿ ಪರಾರಿಯಾಗಿದ್ದರು. ಡಿ.13 ರಂದು ಅಪಹರಣಕಾರರು ಸಂಜಯ್ ಮೊಬೈಲ್‌ನಿಂದಲೇ ತಾರಾರಾಮ್‌ಗೆ ಕರೆ ಮಾಡಿ ರೂ. 50 ಲಕ್ಷಕ್ಕೆ  ಬೇಡಿಕೆ ಇಟ್ಟಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry