ಶುಕ್ರವಾರ, ಏಪ್ರಿಲ್ 16, 2021
31 °C

ಮೈಸೂರು ದಸರಾ: ವಿಜಾಪುರ ಸ್ತಬ್ಧ ಚಿತ್ರ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಮೈಸೂರಿನ ವಿಶ್ವವಿಖ್ಯಾತ ಜಂಬೂ ಸವಾರಿ ಸಂದರ್ಭದಲ್ಲಿ ನಡೆದ ಸ್ತಬ್ಧ ಚಿತ್ರಗಳ ಮೆರವಣಿಗೆಯಲ್ಲಿ ವಿಜಾಪುರ ಜಿಲ್ಲೆಯ ಸ್ತಬ್ಧ ಚಿತ್ರಕ್ಕೆ ಪ್ರಥಮ ಬಹುಮಾನ ಲಭಿಸಿದೆ.ಕಾಖಂಡಕಿ ಗ್ರಾಮದಲ್ಲಿ ಜರುಗುವ ಕಾರಹುಣ್ಣಿಮೆ ವಿಷಯ ಹಾಗೂ ಸನ್ನಿವೇಶ ಇರುವ ಈ ಸ್ತಬ್ಧ ಚಿತ್ರವನ್ನು ಜಿಲ್ಲಾ ಪಂಚಾಯಿತಿಯಿಂದ ಕಳಿಸಲಾಗಿತ್ತು.ಈ ಸುಂದರ ಸ್ತಬ್ಧ ಚಿತ್ರ ವಿನ್ಯಾಸಗೊಳಿಸುವಲ್ಲಿ ಶ್ರಮಿಸಿದ ಸ್ಥಳೀಯ ಕಲಾವಿದರಾದ ವಿಜಾಪುರ ಡಯಟ್‌ನ ಮಂಜುನಾಥ್ ಮಾನೆ, ಪಿಡಿಜೆ ಪ್ರೌಢ ಶಾಲೆಯ ಕಲಾ ಶಿಕ್ಷಕ ಅಂಬಾದಾಸ ಜೋಶಿ ಹಾಗೂ ಕಲಾ ಶಿಕ್ಷಕರನ್ನು ಜಿಲ್ಲಾಧಿಕಾರಿ ಶಿವಯೋಗಿ ಕಳಸದ, ಜಿಲ್ಲಾ ಪಂಚಾಯಿತಿ ಸಿಇಒ ಗುತ್ತಿ ಜಂಬುನಾಥ್ ಅಭಿನಂದಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.