ಶುಕ್ರವಾರ, ಜೂನ್ 25, 2021
21 °C

ಮೈಸೂರು ರತ್ನ, ಮೈಸೂರು ನಕ್ಷತ್ರ ಪ್ರಶಸ್ತಿ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು ರತ್ನ, ಮೈಸೂರು ನಕ್ಷತ್ರ ಪ್ರಶಸ್ತಿ ಪ್ರದಾನ

ಮೈಸೂರು: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸ್ನೇಹ ಸಿಂಚನ ವೇದಿಕೆ ವತಿಯಿಂದ ನಗರದ ಐಡಿಯಲ್ ಜಾವಾ ರೋಟರಿ ಶಾಲೆಯ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯ ಕ್ರಮದಲ್ಲಿ ಮೈಸೂರು ರತ್ನ, ಮೈಸೂರು ನಕ್ಷತ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು.ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಬಸವರಾಜ ಮಾಲಗತ್ತಿ ಹಾಗೂ ಶೈಲಜಾ, ಬಿಜೆಪಿ ಮುಖಂಡ ಯಶಸ್ವಿನಿ ಸೋಮಶೇಖರ್ ಹಾಗೂ ಕಾಂತಮ್ಮ, ಇಟ್ಟಿಗೆಗೂಡು ಕನ್ನಡ ಸಮಿತಿ ಅಧ್ಯಕ್ಷ ಎನ್.ನೀಲಕಂಠ ಹಾಗೂ ರೂಪ, ಮೈಸೂರು ಸಾಹಿತ್ಯ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ.ಸಂತೋಷ್ ಹಾಗೂ ರೇಖಾ ದಂಪತಿಯನ್ನು ಮೇಲುಕೋಟೆ ಇಳೈ ಆಳ್ವಾರ್ ಸ್ವಾಮೀಜಿ ಅವರು `ಮೈಸೂರು ರತ್ನ~ ಪ್ರಶಸ್ತಿ ಪ್ರದಾನ ಮಾಡಿದರು.ಖ್ಯಾತ ಕಾದಂಬರಿಗಾರ್ತಿ ಎಸ್. ಮಂಗಳಾ ಸತ್ಯನ್, ವೈದ್ಯೆ ಡಾ.ಕಮಲಾ ರಾಮನ್, ಪಶ್ಚಿಮ ವಾಹಿನಿಯ ಕಾವೇರಮ್ಮ ಶೇಷಾದ್ರಿ, ಪಾಲಿಕೆ ಮಾಜಿ ಸದಸ್ಯೆ ಸುಶೀಲಾ ಮರೀಗೌಡ, ಸಮಾಜ ಸೇವಕಿ ಬಿ.ಎಸ್.ಗೀತಾಗಣೇಶ್, ಮೇಕಪ್ ತಜ್ಞೆ ಉಮಾಜಾಧವ್ ಅವರಿಗೆ `ಮೈಸೂರು ನಕ್ಷತ್ರ~ ಪ್ರಶಸ್ತಿ ಪ್ರದಾನ ಮಾಡಲಾಯಿತು.ಇದೇ ಸಂದರ್ಭದಲ್ಲಿ ರಂಗೋಲಿ, ಮೆಹಂದಿ, ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ತೀರ್ಪುಗಾರರಾಗಿ ಕೃಷ್ಣಮೂರ್ತಿಪುರಂ ಶ್ರೀರಾಮ ಮಂದಿರದ ಉಪಾಧ್ಯಕ್ಷೆ ರುಕ್ಮಿಣಮ್ಮ, ಶಿಕ್ಷಕಿಯರಾದ ರಮಾ ನಾಗೇಂದ್ರ, ತೇಜಸ್ವಿನಿ ಆಳ್ವಾರ್, ಉದ್ಯಮಿ ಇಂದಿರಾ ವೆಂಕಟೇಶ್  ಅವರು ಪಾಲ್ಗೊಂಡಿದ್ದರು.ಮಹಿಳೆಯರಿಗಾಗಿ ಏರ್ಪಡಿಸಿದ್ದ ಫ್ಯಾಷನ್ ಶೋನಲ್ಲಿ ವಿಜೇತರಾ ದವರಿಗೆ `ಮೈಸೂರು ಕ್ವೀನ್ ಸಿಂಚನ~ (16 ರಿಂದ 30 ವರ್ಷ-ಚೂಡಿದಾರ, ಘಾಗ್ರಾ), `ಬೆಸ್ಟ್ ವುಮೆನ್ ಸಿಂಚನ~ (30 ರಿಂದ 35 ವರ್ಷ-ಫ್ಯಾನ್ಸಿ ಸೀರೆ), `ಬೆಸ್ಟ್ ಹೋಮ್ ಮೇಕರ್ ಸಿಂಚನ~ (50 ವರ್ಷ ಮೇಲ್ಪಟ್ಟು- ರೇಷ್ಮೆ ಸೀರೆ) ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸ್ನೇಹ ಚಿಂಚನ ವೇದಿಕೆ ಅಧ್ಯಕ್ಷೆ ಮ.ನ.ಲತಾ ಮೋಹನ್, ಚಿತ್ರನಟಿ ರಕ್ಷಾ, ತನುಶ್ರೀ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.