ಮೈಸೂರು ವಿ.ವಿ. ಉತ್ತಮ ಆರಂಭ

7
ಅಂತರ ವಿವಿ ಕ್ರಿಕೆಟ್: ಭರತ್ ಆಲ್‌ರೌಂಡ್ ಆಟ

ಮೈಸೂರು ವಿ.ವಿ. ಉತ್ತಮ ಆರಂಭ

Published:
Updated:

ಮಣಿಪಾಲ: ಎನ್.ಭರತ್ ಅವರ ಆಲ್‌ರೌಂಡ್ ಆಟದ (26ಕ್ಕೆ2 ಮತ್ತು ಔಟಾಗದೇ 61) ನೆರವಿನಿಂದ ಮೈಸೂರು ವಿಶ್ವವಿದ್ಯಾಲಯ ಸೋಮವಾರ ಕರ್ನೂಲಿನ ರಾಯಲಸೀಮಾ ವಿಶ್ವವಿದ್ಯಾಲಯ ವಿರುದ್ಧ 10 ವಿಕೆಟ್‌ಗಳ ನಿರಾಯಾಸ ಗೆಲುವಿನೊಡನೆ ದಕ್ಷಿಣ ವಲಯ ಅಂತರ ವಿ.ವಿ. ಕ್ರಿಕೆಟ್ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆಯಿತು.ಮೈಸೂರು ವಿ.ವಿ.ಯವರು, ಎಂಐಟಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರಾಯಲಸೀಮಾ ವಿ.ವಿ. ತಂಡವನ್ನು 106 ರನ್ನಿಗೆ ಉರುಳಿಸಿದ ಮೇಲೆ, ಗೆಲುವಿಗೆ ಅಗತ್ಯವಿದ್ದ ರನ್‌ಗಳನ್ನು 16 ಓವರುಗಳಲ್ಲೇ ಬಾರಿಸಿದರು- ಅದೂ ವಿಕೆಟ್ ನಷ್ಟವಿಲ್ಲದೇ.

ಇತರ ಪಂದ್ಯಗಳೂ ಅಷ್ಟೇನೂ ರೋಚಕವಾಗಿರಲಿಲ್ಲ.ಅನಂತರಪುರದ ಜೆಎನ್‌ಟಿಯು ವಿ.ವಿ., 9 ವಿಕೆಟ್‌ಗಳಿಂದ ಕಾರೈಕುಡಿಯ ಅಳಗಪ್ಪ ವಿ.ವಿ. ವಿರುದ್ಧ ಜಯಗಳಿಸಿದರೆ, ಬ್ರಹ್ಮಾವರದ ಎಸ್‌ಎಂಎಸ್ ಪಿಯು ಕಾಲೇಜು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮಚಲಿಪಟ್ಟಣಂನ ಕೃಷ್ಣಾ ವಿ.ವಿ. ಅಷ್ಟೇ ಅಂತರದಿಂದ ಚೆನ್ನೈನ ಗಾಂಧಿಗ್ರಾಮ ಗ್ರಾಮೀಣ ವಿ.ವಿ. ವಿರುದ್ಧ ಜಯಗಳಿಸಿತು.ತಿರುನಲ್ವೇಲಿಯ ಎಂಎಸ್ ವಿ.ವಿ. ತಂಡ 6 ವಿಕೆಟ್‌ಗಳಿಂದ ಕಾಂಚಿಪುರಂನ ಎಸ್‌ಸಿಎಸ್ ವಿಎಂ ತಂಡವನ್ನು ಮಣಿಸಿತು. ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿ.ವಿ. 3 ವಿಕೆಟ್‌ಗಳಿಂದ ರಾಜಮುಂಡ್ರಿ ವಿ.ವಿ. ವಿರುದ್ಧ ಜಯಪಡೆಯಿತು.ಸ್ಕೋರುಗಳು: ಮಣಿಪಾಲ ವಿ.ವಿ. ಮೈದಾನ 1: ಅಳಗಪ್ಪ ವಿ.ವಿ., ಕಾರೈಕುಡಿ: 23 ಓವರುಗಳಲ್ಲಿ 63 (ಚಕ್ರಿ ರೆಡ್ಡಿ 24ಕ್ಕೆ3, ಎಸ್.ಮಸ್ತಾನ್ 6ಕ್ಕೆ3); ಜೆಎನ್‌ಟಿಯು, ಅನಂತಪುರ: 14 ಓವರುಗಳಲ್ಲಿ 1ವಿಕೆಟ್‌ಗೆ 64 (ವೈ.ಕೇಶವ ಕುಮಾರ್ ಔಟಾಗದೇ 36).

ಮಣಿಪಾಲ ವಿ.ವಿ.ಮೈದಾನ 2: ಆದಿಕವಿ ನನ್ನಯ್ಯ ವಿ.ವಿ., ರಾಜಮುಂಡ್ರಿ: 35.2 ಓವರುಗಳಲ್ಲಿ 144 (ಆದಿತ್ಯ 53, ಚೈತನ್ಯ ಕುಮಾರ್ 32; ವೈಷ್ಣವ್ 17ಕ್ಕೆ3, ಮನು ವಿಜಯನ್ 32ಕ್ಕೆ4); ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿ.ವಿ, ಕೊಚ್ಚಿ: 39.2 ಓವರುಗಳಲ್ಲಿ 7 ವಿಕೆಟ್‌ಗೆ 145 (ಎಂ.ಅರ್ಜುನ್ 84; ಅಮಲೇಶ್ವರ ರಾವ್ 24ಕ್ಕೆ2, ಆದಿತ್ಯ 28ಕ್ಕೆ2, ಸತ್ಯನಾರಾಯಣ 16ಕ್ಕೆ2).

ಬ್ರಹ್ಮಾವರದ ಎಸ್‌ಎಂಎಸ್ ಪಿಯು ಕಾಲೇಜು ಮೈದಾನ: ಗಾಂಧಿಗ್ರಾಮ ಗ್ರಾಮೀಣ ವಿ.ವಿ, ಚೆನ್ನೈ: 26.4 ಓವರುಗಳಲ್ಲಿ 57 (ಎಂ.ಪರುಪ್ಪಸ್ವಾಮಿ 25; ಗಣೇಶ್ ಕುಮಾರ್ 14ಕ್ಕೆ4); ಕೃಷ್ಣಾ ವಿ.ವಿ, ಮಚಲಿಪಟ್ಟಣಂ: 5.4 ಓವರುಗಳಲ್ಲಿ 1 ವಿಕೆಟ್‌ಗೆ 58 (ಗೌತಮ್ ಔಟಾಗದೇ 35).ಎಂಜಿಎಂ ಕಾಲೇಜು ಮೈದಾನ: ಎಸ್‌ಸಿಎಸ್ ವಿಎಂ, ಕಾಂಚಿಪುರಂ: 25.2 ಓವರುಗಳಲ್ಲಿ 74 (ಅನೀಶ್ ಕುಮಾರ್ 41ಕ್ಕೆ6, ಮರಿಯ ಅಮೃತನ್ 13ಕ್ಕೆ2); ಎಂಎಸ್‌ಯು ವಿ.ವಿ. ತಿರುನಲ್ವೇಲಿ: 27.4 ಓವರುಗಳಲ್ಲಿ 4 ವಿಕೆಟ್‌ಗೆ 78 (ಷಣ್ಮುಗ 35).

ಎಂಐಟಿ ಮೈದಾನ: ರಾಯಲಸೀಮೆ ವಿ.ವಿ., ಕರ್ನೂಲ್: 36.1 ಓವರುಗಳಲ್ಲಿ 106 (ಸಿಂಚನ್ 11ಕ್ಕೆ4, ಎನ್.ಭರತ್ 26ಕ್ಕೆ2); ಮೈಸೂರು ವಿ.ವಿ: 16 ಓವರುಗಳಲ್ಲಿ ವಿಕೆಟ್ ಕಳೆದುಕೊಳ್ಳದೇ 110 (ಎನ್.ಭರತ್ ಔಟಾಗದೇ 61, ಫಹಾದ್ ಔಟಾಗದೇ 24).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry