ಭಾನುವಾರ, ನವೆಂಬರ್ 17, 2019
21 °C

ಮೈಸೂರು: ಸಿಲಿಂಡರ್ ಸ್ಫೋಟ, ಐವರ ಸಾವು

Published:
Updated:

ಮೈಸೂರು: ಇಲ್ಲಿನ ಅಜೀಜ್ ನಗರದ ಬಿ.ಡಿ. ಕಾಲೋನಿಯ ಮನೆಯೊಂದರಲ್ಲಿ ಅಡುಗೆ ಅನಿಲ ಸ್ಫೋಟಗೊಂಡ ಪರಿಣಾಮ ಐವರು ಮೃತಪಟ್ಟು, ಮೂವರು ತೀವ್ರವಾಗಿ ಗಾಯಗೊಂಡಿರುವ ದುರ್ಘಟನೆ ಶುಕ್ರವಾರ ನಡೆದಿದೆ.ಮೃತಪಟ್ಟವರನ್ನು ಮಹಮ್ಮದ್ ಅಮೀರ್ ಜಾನ್ (70), ರಿಜ್ವಾನ್ ಬಾನು (30), ಪರ್ವಿನ್ (25), ಅರ್ಬಿಯಾ (10) ಮತ್ತು ಅರಿನ್ (5) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಮೂವರನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಪ್ರತಿಕ್ರಿಯಿಸಿ (+)