ಮೈಸೂರು ಸಿಲ್ಕ್ ಮಾರಾಟ ಮಳಿಗೆ ಉದ್ಘಾಟನೆ

7

ಮೈಸೂರು ಸಿಲ್ಕ್ ಮಾರಾಟ ಮಳಿಗೆ ಉದ್ಘಾಟನೆ

Published:
Updated:

ಬೆಂಗಳೂರು: ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ (ಕೆಎಸ್‌ಐಸಿ)ದ ಮೈಸೂರು ಸಿಲ್ಕ್‌ನ 15ನೇ ಮಾರಾಟ ಮಳಿಗೆ ಹಾಗೂ ಗಾಂಧಿ ಬಜಾರ್‌ನಲ್ಲಿ ಎರಡನೇ ಮಾರಾಟ ಮಳಿಗೆಯನ್ನು ಉದ್ಘಾಟಿಸಲಾಯಿತು.

ಸೋಮವಾರ ನಗರದ ಬಸವನಗುಡಿಯ ಡಿ.ವಿ.ಜಿ ರಸ್ತೆಯ ಓಂ ಶ್ರೀ ಪ್ಲಾಜಾದಲ್ಲಿ ಮಾರಾಟ ಮಳಿಗೆಯನ್ನು ಕಾರ್ಮಿಕ ಹಾಗೂ ರೇಷ್ಮೆ ಸಚಿವ ಬಿ.ಎನ್.ಬಚ್ಚೇಗೌಡ ಉದ್ಘಾಟನೆ ಮಾಡಿ ಮಾತನಾಡಿದ ಅವರು, `ಮೈಸೂರು ಸಿಲ್ಕ್‌ನ ಸೀರೆಗಳಿಗೆ ಎಲ್ಲಾ ಕಡೆಗಳಿಂದ ಬಹಳ ಬೇಡಿಕೆ ಇದ್ದು, ಸಾಂಪ್ರದಾಯಿಕ ರೀತಿಯ ಉತ್ಪಾದನೆ, ಬಟ್ಟೆಯಲ್ಲಿ ಅಳವಡಿಸಲಾಗಿರುವ ಹುರಿ ಮಾಡುವ ವಿಧಾನ, ಮೈಸೂರು ಸಿಲ್ಕ್ ಬಟ್ಟೆಯು ಭಾರತದಲ್ಲಿ ದೊರೆಯುವ ಕ್ರೇಪ್ ಸಿಲ್ಕ್ ಬಟ್ಟೆಗಳಲ್ಲಿಯೇ ಅತ್ಯುತ್ತಮವಾಗಿದ್ದು, ಬಟ್ಟೆಗೆ ವಿಶೇಷ ಮೆರುಗನ್ನು ನೀಡಿದೆ' ಎಂದರು.

`ಸೀರೆಗಳಿಗೆ ಉಪಯೋಗಿಸುವ ಜರಿಯು ಪರಿಶುದ್ದ ಚಿನ್ನದ್ದಾಗಿದ್ದು, ಶೇ 50ರಷ್ಟು ಚಿನ್ನ ಮತ್ತು ಶೇ 50ರಷ್ಟು ಬೆಳ್ಳಿಯಿಂದ ತಯಾರಿಸಲಾಗಿದೆ. ವಿನ್ಯಾಸಗಳು ಸಾಂಪ್ರದಾಯಿಕ ಮತ್ತು ಆಧುನಿಕತೆಯಿಂದ ಕೂಡಿವೆ' ಎಂದು ಹೇಳಿದರು.

`ಶಿವಮೊಗ್ಗ ಡಾಲರ್ಸ್‌ ಕಾಲೋನಿ, ಗರುಡಾಮಾಲ್, ರಾಜ್ಯದ ಎಲ್ಲಾ ಜಿಲ್ಲೆ, ಹೊರ ರಾಜ್ಯಗಳಲ್ಲಿ ಮಳಿಗೆಯನ್ನು ಸ್ಥಾಪಿಸಲು ಮುಂದಾಗಿದ್ದು, ಒಟ್ಟು ನೂರು ಕೋಟಿ ವ್ಯಾಪಾರ ಮಾಡುವ ಉದ್ದೇಶಿಸಲಾಗಿದ್ದು, ಅದರಲ್ಲಿ ಈಗ 15 ಕೋಟಿ ಲಾಭ ಬಂದಿದೆ' ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಹೊಸದಾಗಿ ವಿನ್ಯಾಸಗೊಳಿಸಲಾದ ಹರಳುಗಳು ಹಾಗೂ ಜರ್ದೋಶಿ ಕುಸುರಿಯಿಂದ ಮಾಡಿದ ಸೀರೆಗಳನ್ನು ಬಿಡುಗಡೆ ಮಾಡಲಾಯಿತು.

ಮಳಿಗೆಯಲ್ಲಿ ಎರಡು ಸಾವಿರದಿಂದ 35 ಸಾವಿರ ರೂಪಾಯಿ ಬೆಲೆಯ  ಕ್ರೇಪ್ ಡಿ ಚೈನ್, ಕಸೂತಿ, ಜಾರ್ಜೆಟ್, ಸಾದಾ ಮುದ್ರಿತ ಸೀರೆಗಳ, ಟೈಯ್ಸ, ಸ್ಕಾರ್ಫ್ ಸೇರಿದಂತೆ ಮತ್ತಿತರ ವಿವಿಧ ಬಗೆಯ ಸೀರೆಗಳು ಲಭ್ಯವಾಗುತ್ತವೆ.ಕೆಎಸ್‌ಐಸಿಯ ಎಲ್ಲಾ ಮಾರಾಟ ಮಳಿಗೆಯಲ್ಲಿ ಗ್ರಾಹಕರಿಗೆ ಶೇ 30ರಷ್ಟು ವಿಶೇಷ ರಿಯಾಯಿತಿಯನ್ನು ನೀಡಲಾಗಿದೆ. ಸಮಾರಂಭದಲ್ಲಿ  ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಕೆ.ಶಂಕರಲಿಂಗೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಅಂತರ್ಜಾಲ ಮಾರಾಟ

`ದಿನದಿಂದ ದಿನಕ್ಕೆ ಬೇಡಿಕೆ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ಹೊರ ರಾಜ್ಯ ಹಾಗೂ ವಿದೇಶಿಗರಿಗೆ ಅನುಕೂಲವಾಗುವ ಉದ್ದೇಶಕ್ಕಾಗಿ ಅಂತರ್ಜಾಲದಲ್ಲಿ ಮಾರಾಟ ಮಾಡಲು ಪ್ರಾರಂಭಿಸಲಾಗಿದೆ' ವೆಬ್‌ಸೈಟ್ ವಿಳಾಸ: www.ksicsilk.com - ಬಿ.ಎನ್.ಬಚ್ಚೇಗೌಡ, ಕಾರ್ಮಿಕ ಹಾಗೂ ರೇಷ್ಮೆ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry