ಸೋಮವಾರ, ಏಪ್ರಿಲ್ 12, 2021
25 °C

ಮೈಸೂರು: ಹಾಡಹಗಲೇ ವ್ಯಕ್ತಿಯ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಹಾಡಹಗಲೇ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಗುಂಪೊಂದು ವ್ಯಕ್ತಿಯನ್ನು ಕೊಲೆ ಮಾಡಿರುವ  ಘಟನೆ ನಗರದ ವಿದ್ಯಾವರ್ಧಕ ಕಾಲೇಜಿನ ಬಳಿ ಗುರುವಾರ ಜರುಗಿದೆ. ದಾಳಿಯಲ್ಲಿ ಹಲ್ಲೆಗೆ ಒಳಗಾದ ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಮಂಡಿ ಮೊಹಲ್ಲಾದ ಸುನ್ನಿ ಚೌಕದ ನಿವಾಸಿ ಮುರ್ತುಜ ಖಾನ್ ಅವರ ಮಗ ಜಮೀರ್ ಖಾನ್ (35) ಕೊಲೆಯಾದ ವ್ಯಕ್ತಿ. ಈತನ ಸಹೋದರ ಶಮೀಲ್ ಖಾನ್ (25) ತೀವ್ರವಾಗಿ ಗಾಯಗೊಂಡಿದ್ದು, ಸ್ಥಿತಿ ಗಂಭೀರವಾಗಿದೆ.ವೆಲ್ಡಿಂಗ್ ಶಾಪ್ ನಡೆಸುತ್ತಿರುವ ಜಮೀರ್ ಖಾನ್-ಶಮೀಲ್ ಖಾನ್ ಸಹೋದರರು ಮಧ್ಯಾಹ್ನ 2.45ರ ಸುಮಾರಿನಲ್ಲಿ ನ್ಯೂ ಸಯ್ಯಾಜಿ ರಾವ್ ರಸ್ತೆಯಲ್ಲಿರುವ ಕ್ಷೌರದ ಅಂಗಡಿಗೆ ತೆರಳಿದ ಬಳಿಕ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ದಾಳಿ ನಡೆಸಿದ 20 ಜನರಿದ್ದ ಗುಂಪು ಸಹೋದರರನ್ನು ಸುತ್ತುವರಿದು ಮನಬಂದಂತೆ ಹಲ್ಲೆ ನಡೆಸಿತು.

ಒಂದು ವರ್ಷದ ಹಿಂದೆ ಸಹೋದರರು ಪ್ರಾರ್ಥನಾ ಮಂದಿರದ ಮೇಲೆ ದಾಳಿ ನಡೆಸಿ ಗುಂಪೊಂದರ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಸೇಡು ತೀರಿಸಿಕೊಳ್ಳುವ ಸಲುವಾಗಿ ವಿರೋಧಿ ಗುಂಪು ಈ ದಾಳಿ ನಡೆಸಿದೆ ಎನ್ನಲಾಗಿದೆ. ಮಂಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.