ಶುಕ್ರವಾರ, ಡಿಸೆಂಬರ್ 6, 2019
17 °C

ಮೈ ಐ1 ಡೇ

Published:
Updated:
ಮೈ ಐ1 ಡೇ

ರಸ್ತೆ ಸುರಕ್ಷೆ ಕುರಿತು ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಐ1 ಸೂಪರ್‌ಕಾರ್ ಸೀರೀಸ್‌ನ ಮ್ಯೋಕ್‌ಡರ್ ಮೋಟರ್ ಸ್ಪೋರ್ಟ್ಸ್ `ಮೈ ಐ1 ಡೇ~ ರಾಷ್ಟ್ರವ್ಯಾಪಿ ಆಂದೋಲನವನ್ನು ಈಚೆಗೆ ಆಯೋಜಿಸಿತ್ತು.

ಬಾಲ್ಡ್‌ವಿನ್ ಬಾಯ್ಸ ಹೈಸ್ಕೂಲ್‌ನಲ್ಲಿ ಚಾಲನೆಗೊಂಡ ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ರಸ್ತೆ ಸುರಕ್ಷತೆ ಮಾನದಂಡಗಳನ್ನು ನಿತ್ಯ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ತಿಳಿಸಿಕೊಡಲಾಯಿತು. ದೇಶದ 100 ನಗರಗಳ 654 ಶಾಲೆಗಳ 3,27,000 ಮಕ್ಕಳನ್ನು ತಲುಪಿ ಅವರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ.

ಈ ಸಂದರ್ಭದಲ್ಲಿ ಮಕ್ಕಳಿಗೆ `ಮೈ ಡ್ಯಾಡ್ ಡ್ರೈವ್ಸ್ ಸೇಫ್~ ಎಂಬ ಐ1 ಬ್ರಾಂಡೆಡ್ ಸ್ಟಿಕ್ಕರ್ ನೀಡಲಾಯಿತು. ಜತೆಗೆ ಮಕ್ಕಳಿಗೆ ಐ1 ಸೂಪರ್‌ಕಾರ್ ಸೀರೀಸ್‌ಗೆ ಸಂಬಂಧಿಸಿದ ಮಾಹಿತಿ ನೀಡಲಾಯಿತು.

`ದೇಶದಾದ್ಯಂತ ಹಲವು ಶಾಲೆಗಳಲ್ಲಿ `ಮೈ ಐ1 ಡೇ~ ಕಾರ್ಯಕ್ರಮ ಆರಂಭಿಸುತ್ತಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ. ರಸ್ತೆ ಸುರಕ್ಷತಾ ಸಪ್ತಾಹ ನಡೆಯುವ ದಿನಾಂಕಗಳನ್ನು ಗಮನದಲ್ಲಿರಿಸಿಕೊಂಡು ಈ ಕಾರ್ಯಕ್ರಮದ ನಿಗದಿಪಡಿಸಿದ್ದೇವೆ. ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ಮ್ಯೋಕ್‌ಡರ್ ಶಾಲೆಗಳತ್ತ ಹೆಜ್ಜೆ ಇಡುತ್ತಿದೆ~ ಎಂದು ಮ್ಯೋಕ್‌ಡರ್ ಮೋಟರ್‌ಸ್ಫೋರ್ಟ್ಸ್‌ನ ಸಿಇಒ ಎಂ.ದರ್ಶನ್ ಖುಷಿ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)