ಶನಿವಾರ, ಮೇ 15, 2021
26 °C

ಮೈ ಲವ್ಲೀ ಮಮ್ ಫೈನಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಚ್ಚುಮೆಚ್ಚಿನ ಶಾಪಿಂಗ್ ತಾಣ ವೈಟ್‌ಫೀಲ್ಡ್‌ನ ಫೋರಂ ವ್ಯಾಲ್ಯೂ ಮಾಲ್ ಆಯೋಜಿಸಿರುವ `ಮೈ ಲವ್ಲೀ ಮಮ್~  ಎ ಬ್ಯೂಟಿ ಪೆಜೆಂಟ್ ಹುಡುಕಾಟಕ್ಕೆ ಏಪ್ರಿಲ್ 22ರಂದು ತೆರೆ ಬೀಳಲಿದೆ. ಈ ಸ್ಪರ್ಧೆಯ ಫೈನಲ್‌ನಲ್ಲಿ ವಿಜೇತರಾದವರಿಗೆ ಚೀನಾದ ಬೀಜಿಂಗ್‌ಗೆ ಹಾರಲಿದ್ದಾರೆ. ಜತೆಗೆ ಇವರು ಅಂತರರಾಷ್ಟ್ರೀಯ ಬ್ಯೂಟಿ ಪೆಜೆಂಟ್ ಮದರ್ಸ್‌ನಲ್ಲಿ ಭಾಗವಹಿಸುವ ಅವಕಾಶ ಕೂಡ ದೊರೆಯಲಿದೆ.

ಭಾಗವಹಿಸಿದ 200 ಮಂದಿಯಲ್ಲಿ 15 ಮಂದಿ ಅದೃಷ್ಟವಂತ ತಾಯಂದಿರನ್ನು ಈ ಸುತ್ತಿಗೆ ಆಯ್ಕೆ ಮಾಡಲಾಗಿದ್ದು ಖ್ಯಾತ ಫ್ಯಾಷನ್ ಡಿಸೈನರ್ ರಾಜೇಶ್ ಶೆಟ್ಟಿ  ತೀರ್ಪುಗಾರರಾಗಿದ್ದರು.

ಅಂತಿಮ ಸುತ್ತಿಗೆ ಆಯ್ಕೆಯಾದವರನ್ನು `ಝೀಲರ್ಸ್‌ ಡ್ಯಾನ್ಸ್ ಸ್ಟುಡಿಯೋ~ ತರಬೇತಿ ನೀಡಲಿದೆ. ಇವರೆಲ್ಲರೂ ಟ್ಯಾಲೆಂಟ್ ಸುತ್ತಿನಲ್ಲಿ ಗುಂಪಾಗಿ ಭಾಗವಹಿಸಲಿದ್ದಾರೆ. ಸಭಾಂಗಣದ ಹಾಜರಿ ಮತ್ತು ದಿಢೀರ್ ಪ್ರಶ್ನೋತ್ತರ ಸುತ್ತುಗಳ ಮೂಲಕ ಇವರನ್ನು ಪರೀಕ್ಷಿಸಲಾಗುತ್ತದೆ. ಸ್ಪರ್ಧಿಗಳು ಸೋಚ್ ಮತ್ತು ಸಿಸ್ಲೇಯ ಅತ್ಯಾಧುನಿಕ ಸಾಂಪ್ರದಾಯಿಕ ಮತ್ತು ಪಾಶ್ಚಿಮಾತ್ಯ ಡಿಸೈನರ್ ವೇರ್ ಧರಿಸಿ ರ‌್ಯಾಂಪ್ ಮೇಲೆ ನಡೆಯಲಿದ್ದಾರೆ. ಆಡಿಷನ್‌ನ ತೀರ್ಪುಗಾರರೂ ಆಗಿದ್ದ ಫ್ಯಾಷನ್ ಡಿಸೈನರ್ ರಾಜೇಶ್ ಶೆಟ್ಟಿ ಗ್ರಾಂಡ್ ಫೈನಲ್‌ನ ರ‌್ಯಾಂಪ್‌ವಾಕ್‌ಗೆ ಕೊರಿಯೋಗ್ರಫಿ ಮಾಡಲಿದ್ದಾರೆ.

ಫೈನಲ್‌ಗೆ ಆಯ್ಕೆಯಾದ ತಾಯಂದಿರು ತಮ್ಮ ಮಕ್ಕಳೊಂದಿಗೆ ಈ ವಾರ ಲೆಬ್‌ಮೆಕ್ಸ್ ಎ ಲೆಬನೀಸ್ ಮತ್ತು ಮೆಕ್ಸಿಕನ್ ಕ್ಯುಸಿನ್ ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರಿಗೆ ಆರೋಗ್ಯ ಮತ್ತು ಪೌಷ್ಠಿಕತೆ ಕುರಿತು  ಮಾಹಿತಿ ನೀಡಲಾಗುತ್ತದೆ. ಫೋರಂ ವ್ಯಾಲ್ಯೂ ಮಾಲ್ ಸಾಂಪ್ರದಾಯಿಕ ಮಾಲ್ ಚಟುವಟಿಕೆಗಳ ಸಂಪ್ರದಾಯವನ್ನು ಮುರಿದಿದ್ದು ಶಾಪಿಂಗ್ ಮೀರಿದ ಅನುಭವವನ್ನು ಗ್ರಾಹಕರಿಗೆ ಸನೀಡುತ್ತಿದೆ. ಈ ಮೂಲಕ ಫೋರಂ ವ್ಯಾಲ್ಯೂ ಮಾಲ್ ಗ್ರಾಹಕರಿಗೆ ಅತ್ಯುತ್ತಮ ಅನುಭವ ಒದಗಿಸುತ್ತದೆ.

ಏಪ್ರಿಲ್ 22 ರಂದು ಸಂಜೆ ಸಂಜೆ 5ರಿಂದ 8ರ ವರೆಗೆ ವ್ಹೈಟ್‌ಫೀಲ್ಡ್‌ನ ಫೋರಂ ವ್ಯಾಲ್ಯೂ ಮಾಲ್‌ನಲ್ಲಿ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.