ಮೊಗಣ್ಣಗೌಡ-ಅಕ್ಮಲ್ ಜೋಡಿ ಪ್ರಥಮ

7

ಮೊಗಣ್ಣಗೌಡ-ಅಕ್ಮಲ್ ಜೋಡಿ ಪ್ರಥಮ

Published:
Updated:

ಚಿಕ್ಕಮಗಳೂರು: ಹಾಸನದ ಮೊಗಣ್ಣಗೌಡ ಮತ್ತು ಅಕ್ಮಲ್ ಜಾವಿದ್ ಜೋಡಿ ಇಲ್ಲಿ ಭಾನುವಾರ ನಡೆದ ವುಡ್‌ಲ್ಯಾಂಡ್ ಆಫ್ ರೋಡ್ ಮೇನಿಯಾ 2012 ರಾಷ್ಟ್ರಮಟ್ಟದ ಮೋಟಾರ್ ರ‌್ಯಾಲಿಯಲ್ಲಿ ಪ್ರಥಮ ಸ್ಥಾನ ಪಡೆದರು.ನಗರದ ಇಮಾನ್ ಸಾಮಿಲ್ ಮೈದಾನದಲ್ಲಿ ಕೃತಕವಾಗಿ ನಿರ್ಮಿಸಿದ್ದ ಹಳ್ಳ, ದಿಣ್ಣೆಯ 800 ಮೀಟರ್ ಟ್ರ್ಯಾಕ್‌ನಲ್ಲಿ ಮೈನವಿರೇಳುವಂತೆ ಜಿಪ್ಸಿ ಚಲಾಯಿಸಿದ ಮೊಗಣ್ಣಗೌಡ 00.55.47 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಟ್ರೋಫಿ ಜಯಿಸಿದರು.ಬೆಂಗಳೂರಿನ ಪ್ರದೀಪ್‌ಕುಮಾರ್ ಮತ್ತು ಸಹ ಚಾಲಕ ನಿಶಾಂತ್ ಜೋಡಿ ಚಲಾಯಿಸಿದ ಮಹಿಂದ್ರಾ ತಾರ್ ಜೀಪು 1.04.35 ಅವಧಿ ತೆಗೆದು ಕೊಂಡು ಎರಡನೇ ಸ್ಥಾನ ಪಡೆಯಿತು. ಮಧುಸೂಧನ್ ಮತ್ತು ರಮೇಶ್ ಜೋಡಿ 1.10.09 ನಿಮಿಷದಲ್ಲಿ ಗುರಿ ತಲುಪಿ, ತೃತೀಯ ಸ್ಥಾನ ಪಡೆದುಕೊಂಡಿತು.ಮಹಿಳಾ ವಿಭಾಗದಲ್ಲಿ ಬೆಂಗಳೂರಿನ ಸ್ಮಿತಾ ಮತ್ತು ದೀಪಕ್ ಜೋಡಿ ಪ್ರಥಮ ಸ್ಥಾನ ಹಾಗೂ ಸಕಲೇಶಪುರದ ಸಪನ ಗುರುಕುರ್ ಮತ್ತು ಚಂದನ್ ಗುರುಕುರ್ ಜೋಡಿ ದ್ವಿತೀಯ ಸ್ಥಾನ ಪಡೆಯಿತು.ನಗರದಲ್ಲಿ ಇದೇ ಮೊದಲ ಬಾರಿಗೆ ನಡೆದ ಅತಿ ಕ್ಲಿಷ್ಟಕರ ಅಡೆತಡೆಯ ಟ್ರ್ಯಾಕ್ ರ‌್ಯಾಲಿಯಲ್ಲಿ ವಿವಿಧೆಡೆಯಿಂದ 19 ಮಂದಿ ಚಾಲಕರು ಪಾಲ್ಗೊಂ ಡಿದ್ದರು. ಎರಡನೇ ಸುತ್ತಿನ ಸ್ಪರ್ಧೆ ಇದೇ ಅ. 27 ರಂದು ಕೊಡಗಿನಲ್ಲಿ ಹಾಗೂ 3ನೇ ಸುತ್ತಿನ ಸ್ಪರ್ಧೆ ಬೆಂಗಳೂರಿನಲ್ಲಿ ನವೆಂಬರ್ 24ಕ್ಕೆ ನಡೆಯಲಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry