ಮೊಗೆಚಿಟ್ಟೆಯ ನಾಗಿ ಮುಕ್ರಿಗೆ ಜಾನಪದ ಪ್ರಶಸ್ತಿ

7

ಮೊಗೆಚಿಟ್ಟೆಯ ನಾಗಿ ಮುಕ್ರಿಗೆ ಜಾನಪದ ಪ್ರಶಸ್ತಿ

Published:
Updated:

ಹೊನ್ನಾವರ: `ಹಳ್ಳಿಯ ಪದ~ ಕಲಾ ಪ್ರಕಾರಕ್ಕೆ 2011ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿಯ ಪ್ರಶಸ್ತಿ ಪಡೆದಿರುವ ನಾಗಿ ಮುಕ್ರಿ ಹೊನ್ನಾವರ ತಾಲ್ಲೂಕಿನ ಹಳದೀಪುರ ಗ್ರಾಮದ ಮೊಗೆಚಿಟ್ಟೆ ಎಂಬ ಪುಟ್ಟ ಊರಿನ ಕಲಾವಿದೆ.ಅನಕ್ಷರಸ್ಥೆಯಾಗಿರುವ ನಾಗುಮುಕ್ರಿಗೆ ಜಾನಪದ ಪ್ರಶಸ್ತಿಯ ಬಗ್ಗೆ ಏನೇನೂ ಗೊತ್ತಿಲ್ಲ.ಅವರಿಗೆ ಬರುವ ಹಾಡಿನ ಸಂಖ್ಯೆಯೂ ಅವರಿಗೆ ಗೊತ್ತಿಲ್ಲ.”6-8 ಹಾಡು ಬರುತ್ತದೆ” ಎಂಬ ಲೆಕ್ಕವನ್ನು ಈ ಮುಗ್ಧೆ ಕೊಟ್ಟರು.ಅಷ್ಟೇಕೆ ಇವರಿ ಗಾದ ವರ್ಷವೂ ಇವರಿಗೆ ತಿಳಿದಿಲ್ಲ.~90 ವರ್ಷ ಆಗಿರಬಹುದು~ ಎಂಬ ತನ್ನ ಸೊಸೆಯ ಮಾತಿಗೆ ಹೌದೆಂದರು.`ಭತ್ತ ಕುಟ್ಟುವಾಗ, ಗದ್ದೆ ನೆಟ್ಟಿ ಮಾಡುವಾಗ, ಮದುವೆಯ ಸಂದರ್ಭ ದಲ್ಲಿ ಹಾಡುವ ಹಾಡು ನನಗೆ ಬರುತ್ತದೆ. ನನ್ನ ಖುಷಿಗಾಗಿ, ಕೆಲವೊಮ್ಮೆ ಉಳಿದವರ ಸಂತೋಷಕ್ಕೆ ಹಾಡಿದೆ~ ಎಂದು ಸ್ವಂತ ಗದ್ದೆ- ತೋಟವಿಲ್ಲದ ಈ ಮಹಿಳೆ ತಮ್ಮ ಹಾಡಿನ ಜ್ಞಾನವನ್ನು ತೆರೆದಿಟ್ಟರು.ಹಾಡಿನ ಗುರುವನ್ನು ಇವರು ಹೆಸರಿ ಸಲಾರರು, ಹಲವು ಹಿರಿಯರಿಂದ ಕಲಿತ, ಹರಳುಗಟ್ಟಿದ ಸ್ವಾನುಭವದ ಮೂಸೆಯಿಂದ ಸ್ವಯಂ ಪ್ರೇರಿತವಾಗಿ ಹೊರಹೊಮ್ಮಿದ ಅನೇಕ ಪದ್ಯದ ಸಾಲುಗಳು ಬಹುಶಃ ಇವರ ಹಾಡಿನ ಭಂಡಾರದಲ್ಲಿವೆ.ಕುಪ್ಪು ಹಾಗೂ ದೇವಿ ಮುಕ್ರಿಯ 3ನೇ ಮಗಳಾಗಿ ಜನಿಸಿದ ನಾಗು ತನ್ನ ಗಂಡನ ಮನೆಗೆ ಅಲ್ಲಿಯೇ ಪಕ್ಕದ ನೆರೆ ಮನೆಯಿಂದ ಬಂದವರು. ಸ್ವಂತದ್ದೆಂದು ಸಣ್ಣ ಗುಡಿಸಲು ಮಾತ್ರ ಹೊಂದಿರುವ ನಾಗಿ ಮುಕ್ರಿಗೆ 3 ಗಂಡು, 2 ಹೆಣ್ಣು ಮಕ್ಕಳು, ಮೊಮ್ಮಕ್ಕಳ ತುಂಬು ಬಳಗ ವಿದೆ. ಈಕೆಯ ಮಕ್ಕಳೆಲ್ಲ ಜೀವನೋ ಪಾಯಕ್ಕಾಗಿ ಕೂಲಿಕೆಲಸ ಮಾಡುತ್ತಿರು ವರಾದರೂ ಮೊಮ್ಮಕ್ಕಳು ಕೆಲಮಟ್ಟಿಗೆ ವಿದ್ಯಾವಂತರಾಗಿದ್ದಾರೆ.ಆದರೂ ಕಲಿತ ಮೊಮ್ಮಕ್ಕಳಿಗೆ ಖಾಯಂ ಉದ್ಯೋಗ ಇನ್ನೂ ಸಿಕ್ಕಿಲ್ಲವೆಂಬ ಕೊರಗು ಈಕೆಯ ಸಂಸಾರಕ್ಕಿದೆ. ಜಾನಪದ ಪ್ರಶಸ್ತಿ ಹೆಸರಿನ ಜೊತೆಗೆ ಲೌಕಿಕ ಸುಖವನ್ನೂ ತರಲಿ ಎಂದು ಆಶಿಸುವುದು ಬಡತನ ವನ್ನೇ ಹಾಸು ಹೊದ್ದಿರುವ ಇಂಥವರು ನಿರೀಕ್ಷಿಸುವುದು ಸಹಜವಾಗಿಯೇ ಇದೆ.ಪ್ರಶಸ್ತಿ ವಿಜೇತನ್ನು ಅಭಿನಂದಿಸಿರುವ ಶಾಸಕ ದಿನಕರ ಕೆ.ಶೆಟ್ಟಿ ಅರ್ಹ ಪರಿಶಿಷ್ಟ ಮಹಿಳೆಯನ್ನು ಪ್ರಶಸ್ತಿಗಾಗಿ ಗುರುತಿಸಿ ರುವ ಸರ್ಕಾರದ ಕ್ರಮ ಶ್ಲಾಘನೀಯ ಎಂದು  ಹೇಳಿದ್ದಾರೆ.ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕ, ಪ್ರಶಸ್ತಿ ಪೂರ್ವದಲ್ಲಿ ಜಾನಪದ ಅಕಾ ಡೆಮಿಗೆ ನಾಗಿ ಮುಕ್ರಿಗೆ ಸಂಬಂಧಿಸಿದ ಅಗತ್ಯ ದಾಖಲೆ ಪೂರೈಸಲು ಸಹಕರಿಸಿದ ಸಾಹಿತಿ ಡಾ.ಶ್ರೀಪಾದ ಶೆಟ್ಟಿ, ತಾ.ಪಂ. ಸದಸ್ಯೆ ಪಾರ್ವತಿ ಮುಕ್ರಿ, ಜಾನಪದ ತಜ್ಞ ಡಾ.ಎನ್.ಆರ್.ನಾಯಕ, ಹಣತೆ ಸಾಹಿತ್ಯ ಸಂಘಟನೆಯ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ, ಹೊನ್ನಾವರ ಕ.ಸಾ.ಪ. ಅಧ್ಯಕ್ಷ ಡಾ.ಎಸ್.ಡಿ.ಹೆಗಡೆ ಪ್ರಶಸ್ತಿ ವಿಜೇತ ನಾಗಿ ಮುಕ್ರಿ ಅವರನ್ನು ಅಭಿನಂದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry