ಶುಕ್ರವಾರ, ನವೆಂಬರ್ 22, 2019
26 °C

ಮೊಟ್ಟೆಯೊಡೆದು ಚಿಟ್ಟೆಯಾಗಿ...

Published:
Updated:

ಚಿಟ್ಟೆಗಳ ಆಯುಸ್ಸೇ ಅಲ್ಪಾವಧಿಯದ್ದು. ಈಗ ಅವುಗಳಿಗೆ ಸಂಕ್ರಮಣ ಕಾಲ. ಮೊಟ್ಟೆ, ಲಾರ್ವಾ, ಪ್ಯೂಪಾ ಹಂತಗಳನ್ನು ದಾಟಿ ರೆಕ್ಕೆ ಆಡಿಸುತ್ತಾ `ಪಾತರಗಿತ್ತಿ ಪಕ್ಕ ನೋಡಿದೇನಾ ಅಕ್ಕ' ಕವನ ನೆನಪಿಸುವಂತೆ ಹಾರುವ ಚಿಟ್ಟೆಗಳು ಕಬ್ಬನ್ ಉದ್ಯಾನದಲ್ಲಿ ಈಗ ಹೆಚ್ಚು ಸಂಖ್ಯೆಯಲ್ಲಿ ಕಾಣುತ್ತಿವೆ. ತಾಪಮಾನ ಅತಿಯಾಗುತ್ತಿದೆ ಎಂದು ಶಪಿಸುತ್ತಲೇ ಅಲ್ಲಿ ಹಾದುಹೋಗುವವರ ಕಣ್ಣಿಗೆ ಚಿಟ್ಟೆ ಹಾರಾಟ ತಂಪು ನೀಡಬಲ್ಲದು. ಹೀಗೆ ಹಾರುವ ಚಿಟ್ಟೆಗಳಿಗೂ ಜೇಡ ತನ್ನ ಬಲೆ ಬೀಸುತ್ತಿದೆ. ಚಿಟ್ಟೆಗಳ ರಮ್ಯಲೋಕದ ಜೊತೆಗೆ ಜೇಡ ನಡೆಸುವ ಬೇಟೆಯನ್ನೂ ನೋಡಬಹುದು.

ಪ್ರತಿಕ್ರಿಯಿಸಿ (+)