ಶನಿವಾರ, ಮೇ 15, 2021
23 °C

ಮೊಣಕಾಲು ಮುರಿ ಬಿದ್ದರೆ ಮೈಕೈ ಮುರಿ!

-ವೈ.ಬಿ.ಕಡಕೋಳ . Updated:

ಅಕ್ಷರ ಗಾತ್ರ : | |

ದೊಂದು ವಿಚಿತ್ರ ಎನಿಸುವ ಆಟ. ಶರೀರ ನಿಯಂತ್ರಣದಲ್ಲಿ ಇಟ್ಟುಕೊಂಡು ಏಣಿ ಏರಬೇಕು. ಸ್ವಲ್ಪ ಯಾಮಾರಿದರೂ ಸೀದಾ ಪಾತಾಳವೇ ಗತಿ, ಮೈಕೈ ಮುರಿದುಕೊಳ್ಳುವುದು ದಿಟ.ಇದೇ ಮೊಣಕಾಲು ಮುರಿ ಆಟ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಯಡಹಳ್ಳಿ, ಕೆಂಚರಾಮನಹಳ್ಳಿ ಗ್ರಾಮಗಳಲ್ಲಿ ಕಾಣಸಿಗುತ್ತದೆ ಈ ಆಟ. ಗಂಡಸುತನಕ್ಕೆ ಸವಾಲು ಎನ್ನುವ ಈ ಆಟಕ್ಕೆ `ಮಿಂಡರ ಗಣಿ', `ಮಿಂಡರ ಜೋಕಾಲಿ' ಎನ್ನುವ ಹೆಸರೂ ಇದೆ.ತರುಣರು ಶರೀರ ಸ್ವಾಸ್ಥ್ಯ ಕಾಪಾಡಿಕೊಳ್ಳುವ ಜೊತೆಗೆ  ಮನಸ್ಸನ್ನು ಹಾಗೂ ಶರೀರವನ್ನು ಏಕಾಗ್ರ ಚಿತ್ತದೆಡೆಗೆ ಸಾಗಿಸುವ ಮೂಲ ಉದ್ದೇಶ ಈ ಆಟದ್ದು. ಅದೇನೇ ಇದ್ದರೂ ಹಲವರ ಪಾಲಿಗೆ ಇದು ಕಾಸಿಗಾಗಿ ಮಾಡುವ `ಕೌಶಲ್ಯವೂ' ಹೌದು.

ಈ ಆಟವನ್ನು ಷರತ್ತು ಕಟ್ಟುವ ಮೂಲಕ ಆಡುತ್ತಾರೆ. ಅಂದರೆ ಗೆದ್ದವರಿಗೆ ಹಣದ ರೂಪದ್ಲ್ಲಲೋ, ವಸ್ತುಗಳ ರೂಪದಲ್ಲಿಯೋ ಹಣ ಸಿಗುತ್ತದೆ. ಮಕ್ಕಳ ಹೊಟ್ಟೆ-ಬಟ್ಟೆಗಾಗಿ ಈ `ಸರ್ಕಸ್' ಮಾಡುವ ಅಪ್ಪಂದಿರೇ ಹೆಚ್ಚು.ಹೀಗಿದೆ ಆಟ

ವಿವಿಧ ಆಕಾರದ ಮೂರು ಕಂಬಗಳು ಇಲ್ಲಿರುತ್ತವೆ. ಏಣಿಗೆ ಬಳಸುವ ಬಿದಿರು ಇತ್ಯಾದಿ ಬಳಸಿ ಮೊಣಕಾಲು ಮುರಿ ಕಂಬ ಸಿದ್ಧಪಡಿಸಿರುವರು. ಈ ಏಣಿಯನ್ನು ಏರುವ ಸಂದರ್ಭದಲ್ಲಿ  ಶರೀರದ ಸಮತೂಕ ಕಾಯ್ದುಕೊಂಡು ಏರಲು ಅಣಿಯಾಗಬೇಕು. ಕೈ ಹಿಡಿಯುವಾಗಲೂ ಎಚ್ಚರಿಕೆ ಅಗತ್ಯ.

ಜೊತೆಗೆ ಏಣಿಯ ಮೇಲೆ ಕಾಲು ಇಡುವಾಗ ಶರೀರದ ಭಾರ ಸಮಸ್ಥಿತಿಯಲ್ಲಿ ಇರುವಂತೆ ಇಟ್ಟುಕೊಳ್ಳಬೇಕು. ಸ್ವಲ್ಪ ತಪ್ಪಿದರೂ ಆ ಏಣಿಯು ತಿರುವು ಮುರುವಾಗುತ್ತದೆ. ಆಗ ದೇವರೇ ಗತಿ. ಏಣಿಯನ್ನು ಏರಿದಾತ ಅದರ ತುದಿಯನ್ನು ಮುಟ್ಟಿ ಬರುವುದು ಈ ಆಟದ ವಿಶೇಷ.ಅಂದ ಹಾಗೆ ಇದು ಶ್ರಾವಣ ಮಾಸದ ವಿಶೇಷ ಎನ್ನುತ್ತಾರೆ ಗ್ರಾಮಸ್ಥರು. ಆದರೆ ಈಚೆಗೆ ಈ ಕ್ರೀಡೆ ಮರೆಯಾಗುತ್ತಿದೆ ಎಂಬ ಆತಂಕವೂ ಅಲ್ಲಿಯವರದ್ದು.

-ವೈ.ಬಿ.ಕಡಕೋಳ .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.