ಮೊದಲು ಮೂಲ ಸೌಕರ್ಯ ನೀಡಿ...

7

ಮೊದಲು ಮೂಲ ಸೌಕರ್ಯ ನೀಡಿ...

Published:
Updated:

ದಾವಣಗೆರೆಯಲ್ಲಿ ಉತ್ತರ ಮತ್ತು ದಕ್ಷಿಣ ಎರಡೂ ಕ್ಷೇತ್ರಗಳಲ್ಲೂ ಒಂದು ಕೋಟಿಗೂ ಅಧಿಕ ವೆಚ್ಚದ ಎರಡು ಗಾಜಿನ ಮನೆಗಳನ್ನು ನಿರ್ಮಿಸ­ಲಾಗು­ವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಶಿವಶಂಕರಪ್ಪ ಅವರು ಹೇಳಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸ­ಲಾಗುವುದು ಎಂದೂ ಹೇಳಿದ್ದಾರೆ. ಇದಕ್ಕೆ ನಮ್ಮ ವಿರೋಧವಿಲ್ಲ.

ಆದರೆ, ಅದಕ್ಕೆ ಮೊದಲು ಈ ಕ್ರಮಗಳನ್ನು ಕೈಗೊಳ್ಳಲಿ. ಗಾಜಿನ ಮನೆಗೆ ಹೋಗುವ, ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಗಳು ಕೆಟ್ಟು ಹೋಗಿವೆ; ಗುಂಡಿಗಳು ಬಿದ್ದಿವೆ. ಮುಖ್ಯವಾಗಿ ನಗರದ ಜೀವನಾಡಿಯಾಗಿರುವ ಪಿ.ಬಿ. ರಸ್ತೆ ವಿಸ್ತರಣೆಯಾಗಬೇಕು. ಹಲವು ವರುಷಗಳಿಂದ ಈ ರಸ್ತೆ ವಿಸ್ತರಣೆ ಮಾಡಲಾಗುವುದು ಎಂದು ಜನಪ್ರತಿನಿಧಿಗಳು ಹೇಳುತ್ತಲೇ ಬಂದಿದ್ದಾರೆ.

ಆದರೆ, ಇದುವರೆಗೂ ಇದನ್ನು ಕಾರ್ಯಗತ ಗೊಳಿಸಿಲ್ಲ. ಹಾಗಾಗಿ, ಶಾಮನೂರು ಅವರು ತಮ್ಮ ಅವಧಿಯಲ್ಲಾದರೂ ರಸ್ತೆಗಳನ್ನು ಅಭಿವೃದ್ಧಿಪಡಿಸಿ, ಜಿಲ್ಲೆಯ ಜನರಿಗೆ ಉಪಕಾರ ಮಾಡುವಂತಾಗಲಿ!. ನಗರದ ಕೆಲವು ಪ್ರದೇಶಗಳಲ್ಲಿ ನಿತ್ಯ ಕುಡಿಯುವ ನೀರಿನ ಪೂರೈಕೆ­ಯಾಗುತ್ತಿಲ್ಲ. ಕಸ ವಿಲೇವಾರಿ ಸಮಸ್ಯೆ ಇದೆ. ಹಂದಿಗಳ ಮತ್ತು ಬಿಡಾಡಿ ದನಗಳ ವಿಪರೀತ ಕಾಟ ಬೇರೆ. ಇವೆಲ್ಲವುಗಳಿಗೂ ಪರಿಹಾರ ಕಲ್ಪಿಸಲಿ.

ಆಗ ದಾವಣಗೆರೆಯು ಗಾಜಿನ ಮನೆ ನಿಮಾರ್ಣಕಿಂತಲೂ, ವಿಮಾನ ನಿಲ್ದಾಣಕಿಂತಲೂ ಹೆಚ್ಚು ಸುಂದರ­ವಾಗಿ ಕಾಣುತ್ತದೆ. ನಂತರ ಗಾಜಿನ ಮನೆ ಹಾಗೂ ವಿಮಾನ ನಿಲ್ದಾಣ ನಿರ್ಮಾಣವಾದರೆ, ಹೆಚ್ಚು ಉಪಯುಕ್ತ­ವಾದೀತು. ಗಾಜಿನಮನೆ, ವಿಮಾನ ನಿಲ್ದಾಣ ಕೈಬಿಟ್ಟರೂ ಪರವಾಗಿಲ್ಲ. ಮೂಲ ಸೌಕರ್ಯಗಳಿಗೆ ಸಚಿವರು ಆದ್ಯತೆ ನೀಡಲಿ...!

–ಮಹಮ್ಮದ್‌ ರಫೀ ಎನ್‌, ದಾವಣಗೆರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry