ಮೊದಲು ಸೌಲಭ್ಯ ಒದಗಿಸಿ

ಮಂಗಳವಾರ, ಜೂಲೈ 23, 2019
25 °C

ಮೊದಲು ಸೌಲಭ್ಯ ಒದಗಿಸಿ

Published:
Updated:

ಸಿದ್ದರಾಮಯ್ಯನವರ ಬಜೆಟ್ ಮಂಡನೆ ಅಲ್ಪ ತೃಪ್ತಿ ತಂದರೂ; ಹದಿನೈದು ಹೊಸ ಮಹಿಳಾ ಕಾಲೇಜುಗಳ ಸ್ಥಾಪನೆಯ ಪ್ರಸ್ತಾವ ಗಾಬರಿಯದಾಗಿದೆ. ಇರುವ ಕಾಲೇಜುಗಳಲ್ಲಿ ಕುಡಿಯುವ ನೀರು, ವಸತಿ, ಶೌಚಾಲಯ, ಗ್ರಂಥಾಲಯಗಳಿರಲಿ, ಬೋಧಕ ಸಿಬ್ಬಂದಿ ಯನ್ನೂ ಕಾಣಲಾಗದೆ ಅತಿಥಿ ಉಪನ್ಯಾಸಕರನ್ನು ಅವಲಂಬಿಸಿ, ಕಾಲೇಜುಗಳು ನಡೆಯುತ್ತಿವೆ.ಜೊತೆಗೆ ಇರುವ ಅಲ್ಪಸ್ವಲ್ಪ ಉಪನ್ಯಾಸಕರು ಆಯಕಟ್ಟಿನ ಅನುಕೂಲ ಸ್ಥಳದಲ್ಲಿ, ಕೆಲಸ ಇರಲಿ, ಇಲ್ಲದಿರಲಿ, ಪರಿಸರ ಅಧ್ಯಯನ; ಮತ್ತಿತರ ಸಬೂಬಿನಲ್ಲಿ ಕಾಲ ತಳ್ಳುವುದು ವಾಡಿಕೆಯಾಗಿದೆ. ಹೀಗಿರುವಾಗ ಮತ್ತೂ ಹದಿನೈದು ಕಾಲೇಜು ತೆರೆದು, ವಿದ್ಯಾರ್ಥಿಗಳಿಗೆ ವರವಾಗುವುದರ ಬದಲಿಗೆ ಭಾರವಾಗಬಾರದು. ಮೊದಲು ಸೌಲಭ್ಯ, ಸುಧಾರಣೆಯ ನಂತರ ಹೊಸ ಯೋಜನೆ ಕೈಗೆತ್ತಿಕೊಂಡರೆ ಎಲ್ಲರಿಗೂ ಕ್ಷೇಮ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry