ಮೊದಲ ಓದು : ಅವಳ ಜೋಗಿ

7

ಮೊದಲ ಓದು : ಅವಳ ಜೋಗಿ

Published:
Updated:
ಮೊದಲ ಓದು : ಅವಳ ಜೋಗಿ

ಉಗಮ ಶ್ರೀನಿವಾಸ್ ತಾವು 15 ವರ್ಷಗಳಲ್ಲಿ ಬರೆದ ಕವಿತೆಗಳನ್ನು ಒಂದೆಡೆ ಕಲೆ ಹಾಕಿದ್ದಾರೆ. `ಬಯಲ ಬಾಗಿಲು~ ಎಂಬ ಕವನ ಸಂಗ್ರಹವನ್ನು ಈ ಹಿಂದೆ ಪ್ರಕಟಿಸಿದ್ದ ಅವರು ಆ ಸಂಕಲನದ ಕವಿತೆಗಳೂ ಸೇರಿದಂತೆ ಇನ್ನಷ್ಟು ಕವಿತೆಗಳನ್ನು ಸೇರಿಸಿ ಈ ಸಂಕಲನ ಪ್ರಕಟಿಸಿದ್ದಾರೆ. ಇದು ಶ್ರೀನಿವಾಸರ ಕಾವ್ಯ ಸಾಗುತ್ತಿರುವ ದಾರಿಯನ್ನು ತೋರುವ ಸಂಗ್ರಹವಾಗಿದೆ.ಸುಮ್ಮನಾಗು/ ಗೆಲ್ಲುವ ಹಟವನ್ನು ಬಿಡು/ ಗೆಲ್ಲುವುದಾದರೂ ಯಾರಿಗೆ...

ಗೆಲುವು ತುಂಬಾ/ ಸಲೀಸು/ ಸೋಲು ದಕ್ಕುವುದೇ ಇಲ್ಲ/ ಕಣ್ಣೀರಿನಂತೆ.

(ಸುಳ್ಳಿನ ಸತ್ಯ)ಮನುಷ್ಯನ ಆಳದ ತವಕ, ತಲ್ಲಣಗಳು, ದೈನಿಕ ಬದುಕಿನ ಅಪರೂಪದ ಕ್ಷಣಗಳನ್ನು ಶ್ರೀನಿವಾಸ್ ಹಿಡಿದಿಡುವ ಪರಿ ಇಲ್ಲಿನ ಬಹುಪಾಲು ಕವನಗಳ ಶರೀರವನ್ನು ರೂಪಿಸಿದೆ. `ಗೊಮ್ಮಟನೆದುರು ಕುಬ್ಜ ವಿಕಲಾಂಗನೊಬ್ಬ ಮೊರೆಯಿಡುತ್ತಾನೆ/ ದೇವರೇ ನನ್ನ ಕೂಗಿನ ಅಳತೆಯೆಷ್ಟು?~ ಎನ್ನುವಲ್ಲೂ ಒಂದು ಆರ್ತ ಮೊರೆ ಓದುಗನಿಗೆ ಕೇಳಿಸುತ್ತದೆ.ಮನಕ್ಕೆ ನಾಟುವ ಸಾಲುಗಳಲ್ಲಿ, ಪರಿಚಿತ ಮಾತುಗಳಲ್ಲಿ ಬರೆವ ಕವಿ ಇಲ್ಲಿ ಮನಕ್ಕೆ ತಟ್ಟುವ ಚಿತ್ರಗಳಲ್ಲಿ ಓದುಗರೊಳಗೆ ಇಳಿಯುತ್ತಾರೆ. ಹಾಗೆ ನೋಡಿದರೆ ಕವಿಯ ಸ್ಥಾಯಿ ಭಾವ ವಿಷಾದ ಅನ್ನಿಸುತ್ತದೆ. ಅನೇಕ ಕವಿತೆಗಳು ಈ ವಿಷಾದ ರಾಗವನ್ನು, ಸರಳವಾಗಿ ಯಾವುದೇ ಅಬ್ಬರವಿಲ್ಲದೆ ಹೊಮ್ಮಿಸುತ್ತವೆ ಎನ್ನುವುದರಲ್ಲಿ ಅವುಗಳ ಮಹತ್ವ ಇದೆ.ಅವಳ ಜೋಗಿ

ಲೇ: ಉಗಮ ಶ್ರೀನಿವಾಸ

ಪು: 132; ಬೆ: ರೂ. 95

ಪ್ರ: ಅಂಕ ಪ್ರಕಾಶನ, ನಂ. 955, ಕಾಳಿದಾಸ ನಗರ, 4ನೇ ಮೇನ್, ಹೊಸಕೆರೆಹಳ್ಳಿ, ಬನಶಂಕರಿ 3ನೇ ಹಂತ, ಬೆಂಗಳೂರು- 560 085

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry