ಬುಧವಾರ, ಏಪ್ರಿಲ್ 14, 2021
25 °C

ಮೊದಲ ಓದು: ಮುದ್ದುರಾಮನ ಬದುಕು- ಬೆಳಕು

ಸಂದೀಪ ನಾಯಕ Updated:

ಅಕ್ಷರ ಗಾತ್ರ : | |

ಈ ಹಿಂದೆ `ಮುದ್ದುರಾಮನ ಮನಸು~ ಚೌಪದಿಗಳ ಸಂಗ್ರಹ ಪ್ರಕಟಿಸಿದ ಕೆ.ಸಿ. ಶಿವಪ್ಪ ಅದರಿಂದ ಆಯ್ದ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಚೌಪದಿಗಳನ್ನು ಇಲ್ಲಿಆಯ್ಕೆ ಮಾಡಿ ನೀಡಿದ್ದಾರೆ. ವ್ಯಕ್ತಿತ್ವ ವಿಕಸನಕ್ಕೆ ಈ ಚೌಪದಿಗಳು ಹೇಗೆ ನೆರವಾಗುತ್ತವೆ ಎಂಬ ಪ್ರಶ್ನೆಯನ್ನು ಇಟ್ಟುಕೊಂಡರೂ ಲೇಖಕರ ಪ್ರಯತ್ನ  ಹೊಸದಾಗಿದೆ. ಒಂಬತ್ತು ವಿಭಾಗಗಳಲ್ಲಿ ಸುಮಾರು 900 ಚೌಪದಿಗಳನ್ನು ಇಲ್ಲಿ ಕೊಡಲಾಗಿದೆ. ಎರಡು ದೋಣಿಯ ಮೇಲೆ ಕಾಲಿಡುವುದೊಳಿತಲ್ಲ;/ ಏಕಮುಖವಾಗಿರಲಿ ಉತ್ಸಾಹ ದೀಕ್ಷೆ. /ಪಯಣ ಅಸ್ತವ್ಯಸ್ತ ಎಚ್ಚರದ ಕೊರತೆಯಲಿ;/ ಶಿಸ್ತು ವಿಜಯದ ಮಿತ್ರ- ಮುದ್ದುರಾಮ (557) ಎಂದು ಬೋಧಪ್ರದವಾಗಿ, ನೀತಿಯನ್ನು ತಡೆರಹಿತವಾಗಿ ಕವಿತೆಯ ರೂಪದಲ್ಲಿ ಇಲ್ಲಿ ಕೊಡಲಾಗಿದೆ.ವ್ಯಕ್ತಿತ್ವ ವಿಕಸನದಲ್ಲಿ ಆಸಕ್ತಿ ಇರುವವರು ಇವನ್ನು ಓದಿದರೆ ಇಲ್ಲಿ ಹೇಳಲಾದ ನೀತಿ, ನಿಯಮಗಳನ್ನು ಅಳವಡಿಸಿಕೊಳ್ಳದೆ ವಿಧಿಯಿಲ್ಲ ಎಂಬಂತೆ ಇಲ್ಲಿನ ಚೌಪದಿಗಳಿವೆ. ಈಗಾಗಲೇ ನೀತಿ- ಬೋಧನೆಗಳ ಭಾರದಿಂದ ಬೇಸತ್ತವರ ಪ್ರತಿಕ್ರಿಯೆ ಇವುಗಳ ಕುರಿತಂತೆ ಬೇರೆಯೇ ಇರಬಹುದು.ಸರಳ ರಚನೆಯ ಇಲ್ಲಿನ ಚೌಪದಿಗಳು ಜೀವಿಸುವ ಕಲೆಯನ್ನು ಒಂದೇ ಸರಳ ರೇಖೆಯಲ್ಲಿ ನೋಡುತ್ತವೆ. ನೀತಿ, ಅನೀತಿ, ಬೋಧನೆಯನ್ನು ಮೀರಿದ ಬದುಕಿನ ಸಂಕೀರ್ಣತೆಯನ್ನು ಗ್ರಹಿಸುವ ಕಣ್ಣಾಗಲಿ, ಅದನ್ನು ಅಭಿವ್ಯಕ್ತಿಸುವ ಕಲೆಯಾಗಲಿ ಈ ಚೌಪದಿಗಳಲ್ಲಿ ಕಾಣುವುದಿಲ್ಲ. ಆದ್ದರಿಂದ ಇವು ಓದುಗರ ಆಕಳಿಕೆಗೆ ಅರ್ಹವಾದರೆ ಆಶ್ಚರ್ಯವಿಲ್ಲ.

 

ಮುದ್ದುರಾಮನ ಬದುಕು- ಬೆಳಕು

ವ್ಯಕ್ತಿ ವಿಕಾಸ ಕುರಿತ 900 ಚೌಪದಿಗಳು

ಲೇ: ಕೆ.ಸಿ. ಶಿವಪ್ಪ

ಪು: 232; ಬೆ: ರೂ 120;ಪ್ರ: ಸಂವಹನ, ಶಿವರಾಂಪೇಟೆ, ಮೈಸೂರು


 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.