ಸೋಮವಾರ, ಏಪ್ರಿಲ್ 19, 2021
23 °C

ಮೊದಲ ಓದು: ಸಂಗೀತ ಕಲಾವಿದರ ಮಾಹಿತಿ ಕೋಶ

ಉಮಾ ಅನಂತ್ Updated:

ಅಕ್ಷರ ಗಾತ್ರ : | |

ಕರ್ನಾಟಕ ಸಂಗೀತದ ಕಲಾವಿದರು, ಅವರ ಬಗೆಗಿನ ವಿವರಗಳ ಕ್ರೋಡೀಕರಣದ ಫಲಶ್ರುತಿ- `ಸಂಗೀತ ಕಲಾವಿದರ ಮಾಹಿತಿ ಕೋಶ~. ರಾಜ್ಯದಲ್ಲಿರುವ ಸಂಗೀತ ಕಲಾವಿದರ ಅಪರೂಪದ ಮಾಹಿತಿ ಸಂಗ್ರಹ ಕೋಶ ಇದು.ಬೆಂಗಳೂರಿನ ಹೊರತಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಪ್ರತಿಭಾವಂತ ಕಲಾವಿದರ ಬಗೆಗಿನ ಮಾಹಿತಿ, ಸಂಪರ್ಕ ವಿಳಾಸಗಳು  ಸುಲಭವಾಗಿ ಸಿಗುವುದಿಲ್ಲ. ಈ ಕೊರತೆಯನ್ನು ತುಂಬುವ ಪ್ರಯತ್ನವಾಗಿ ಮೃದಂಗ ಕಲಾವಿದರಾದ ವಿದ್ವಾನ್ ಎಚ್.ಎಸ್. ಸುಧೀಂದ್ರ ಅವರು ತಮ್ಮ `ಸುಸ್ವರಲಯ ಸಂಗೀತ ಪ್ರೌಢ ಕಲಾಶಾಲೆ~ ವತಿಯಿಂದ ಈ ಪುಸ್ತಕ ಪ್ರಕಟಿಸಿದ್ದಾರೆ.

1999ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ, ಕರ್ನಾಟಕ ಸಂಗೀತ ಕಲಾವಿದರ ಕೈಪಿಡಿಯ ಹೊತ್ತಿಗೆಯ ಮೊದಲ ಆವೃತ್ತಿಯನ್ನು ತನ್ನ ಮೂರನೆಯ ವಾರ್ಷಿಕೋತ್ಸವದಲ್ಲಿಯೇ ಲೋಕಾರ್ಪಣೆ ಮಾಡಿತು. ಆನಂತರ ಪ್ರತಿ ಎರಡು ವರ್ಷಕ್ಕೊಮ್ಮೆ ಪರಿಷ್ಕೃತಗೊಳ್ಳುತ್ತಿರುವ ಪುಸ್ತಕ ಈಗ ಆರನೇ ಆವೃತ್ತಿಯಾಗಿ ಬೆಳಕುಕಂಡಿದೆ.ಪ್ರತಿಯೊಂದು ಆವೃತ್ತಿಯಲ್ಲೂ ಹೊಸ ಕಲಾವಿದರನ್ನು ಪರಿಚಯಿಸುವುದರ ಮೂಲಕ ಅವರ ವಿಳಾಸ, ಸಂಪರ್ಕ ದೂರವಾಣಿ, ಅಂತರ್ಜಾಲ ವಿಳಾಸಗಳನ್ನು ನಿಖರವಾಗಿ ದಾಖಲಿಸಲಾಗಿದೆ. ಕಲಾವಿದರ ವೈಯಕ್ತಿಕ ವಿವರಗಳನ್ನೂ, ಅವರಿಗೆ ಮುಂಬರುವ ಸಂಗೀತ ಕಾರ್ಯಕ್ರಮಗಳನ್ನು ಗುರುತು ಮಾಡಿಕೊಳ್ಳಲು ವಾರ್ಷಿಕ ದಿನಚರಿಯನ್ನೂ, ಹಬ್ಬ ಹರಿದಿನಗಳ ದಿನಾಂಕಗಳನ್ನೂ ಈ ಪುಸ್ತಕ ಒಳಗೊಂಡಿದೆ.ಪುಸ್ತಕ ಎರಡು ಭಾಗಗಳಲ್ಲಿದೆ. ಕಲಾವಿದರ ವಿಳಾಸ, ದೂರವಾಣಿ ಮತ್ತಿತರ ವಿವರಗಳು ಮೊದಲ ಭಾಗದಲ್ಲಿದ್ದರೆ, ಎರಡನೇ ಭಾಗದಲ್ಲಿ ಸಂಗೀತಕ್ಕೆ ಪೋಷಕವಾಗುವ ವಿವರಗಳನ್ನು (ಸಭಾಗಳು, ಧ್ವನಿಮುದ್ರಣ ಕೇಂದ್ರಗಳು, ಸಂಗೀತ ಪೋಷಿಸುವ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು, ಧ್ವನಿ ವರ್ಧಕ, ಕಲಾವಿದರಿಗಾಗಿ ವಸತಿ ಗೃಹಗಳು ಇತ್ಯಾದಿ) ನೀಡಲಾಗಿದೆ.`ಸಂಗೀತ ಕಲಾವಿದರ ಮಾಹಿತಿ ಕೋಶ~

ಸಂ: ಎಚ್ ಎಸ್ ಸುಧೀಂದ್ರ ಪು: 160 ಬೆ: ರೂ.150

ಪ್ರ: ಸುಸ್ವರಲಯ ಸಂಗೀತ ಶಾಲೆ

ನಂ. 12, 28ನೇ ಕ್ರಾಸ್, ಗೀತಾ ಕಾಲೊನಿ,ಜಯನಗರ 4ನೇ ಬ್ಲಾಕ್, ಬೆಂಗಳೂರು

080-26545655;94480-59595

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.