ಗುರುವಾರ , ಮೇ 13, 2021
34 °C

ಮೊದಲ ಓದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎರಡು ದಶಕಗಳ ಹಿಂದೆ `ಬೋಳುಗುಡ್ಡ~ ಎನ್ನುವ ಮಕ್ಕಳ ನಾಟಕ ಬರೆದಿದ್ದ ವಿಷ್ಣು ನಾಯ್ಕರು ಇದೀಗ ಮಕ್ಕಳ ಕವಿತೆಗಳ ಸಂಕಲನ ಪ್ರಕಟಿಸಿದ್ದಾರೆ. `ಸಮಗ್ರ ಕಾವ್ಯ~ದ ನಂತರ- ಅರವತ್ತು ತುಂಬಿದ ನಂತರ- ವಿಷ್ಣು ನಾಯ್ಕರು ಮಕ್ಕಳಿಗಾಗಿ ಹಾಡುಗಳನ್ನು ಬರೆದಿರುವುದು ಚಿಣ್ಣರ ಬಗೆಗಿನ ಅವರ ಪ್ರೀತಿಗೆ ಸಾಕ್ಷಿಯಂತಿದೆ.ಇಲ್ಲಿನ ಮೂವತ್ತೂ ಕವಿತೆಗಳು ಹಾಡಲಿಕ್ಕೆ ಬರುವಂತಿವೆ. ನೀತಿ ಬೋಧೆಯೇ ಮುಖ್ಯವಾಗದ ಇಲ್ಲಿನ ಕವಿತೆಗಳು ತಮ್ಮ ರಂಜನೆಯ ಗುಣದಿಂದಾಗಿ ಮಕ್ಕಳಿಗೆ ಇಷ್ಟವಾಗುವಂತಿವೆ.

 

ಕಾಡು, ಗಣೇಶ, ಗರಿಮುರಿ ದೋಸೆ, ಯುಗಾದಿ ಹಬ್ಬ, ಅಜ್ಜನ ಕೋಲು, ಬೆಕ್ಕು-ಇಲಿ, ದೇವರು, ಹೂವು, ಚಂದಮಾಮ, ಭಾವೈಕ್ಯ- ಹೀಗೆ, ಮಕ್ಕಳ ಮನಸ್ಸಿಗೆ ಹಲವು ಸಂಗತಿಗಳನ್ನು ತುಂಬುವ ಪ್ರಯತ್ನವನ್ನು ವಿಷ್ಣುನಾಯ್ಕರು ಮಾಡಿದ್ದಾರೆ. ಇವುಗಳ ಜೊತೆಗೆ, ಬದುಕಿನ ಇನ್ನೊಂದು ಮುಖವನ್ನು ಪರಿಚಯಿಸುವ `ಕುಡುಕ ತಂದೆ~, `ದೊಡ್ಡ ಸಂಸಾರ~ದಂಥ ರಚನೆಗಳೂ ಇವೆ.ವಿಷ್ಣುನಾಯ್ಕರು ತಮ್ಮ ಕವಿತೆಗಳನ್ನು ಹೊಳಪು ಕಾಗದದಲ್ಲಿ ಮುದ್ರಿಸಿದ್ದಾರೆ. ಕೆಲವು ಕವಿತೆಗಳಿಗೆ ಚಿತ್ರಗಳೂ ಇವೆ. ಉಳಿದ ಕವಿತೆಗಳಿಗೆ ಚಿಣ್ಣರೇ ಚಿತ್ರಗಳನ್ನು ಬರೆಯಬೇಕೆಂದು ಅವರು ಅಪೇಕ್ಷಿಸಿದ್ದಾರೆ.ಇವೆಲ್ಲವೂ ಸರಿಯೇ. ಆದರೆ ಕನ್ನಡದಲ್ಲಿ ಮಕ್ಕಳ ಸಾಹಿತ್ಯವನ್ನು ಆವರಿಸಿಕೊಂಡಿರುವ ಕ್ಲೀಷೆಗಳಿಂದ ಪಾರಾಗಲು, ಕನ್ನಡದ ಜೀನ್ಸ್ ಜಾಣೆಜಾಣೆಯರಿಗೆ ಹೊಸ ನುಡಿಗಟ್ಟುಗಳನ್ನು ಕಟ್ಟಿಕೊಡುವುದು ಇಲ್ಲಿ ಸಾಧ್ಯವಾಗಿಲ್ಲ.`ಕಂದನ ಕುತೂಹಲ~ ಎನ್ನುವ ಕವಿತೆಯಲ್ಲಿ- `ಕಡಲಲಿ ಮುಳುಗುವ ಸೂರ್ಯನ ನಿತ್ಯವೂ/ ಎತ್ತುವರಾರಮ್ಮ?/ ಗುಡುಗಿನ ಒಳಗಡೆ ಬೆಂಕಿಯ ಚೂರನು/ ಇಟ್ಟವರಾರಮ್ಮ?~ ಎಂದು ಕವಿ ಬರೆಯುತ್ತಾರೆ. ಇಂಥ ಪದ್ಯಗಳು ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಬಂದಿವೆ ಎನ್ನುವುದಕ್ಕಿಂತಲೂ ಹೊಸಗಾಲದ ಮಕ್ಕಳ ಕನಸುಕನವರಿಕೆಗಳನ್ನು ನಮ್ಮ ಕವಿಗಳು ಹಿಡಿದಿಡಲು ಪ್ರಯತ್ನಿಸುತ್ತಲೇ ಇಲ್ಲವಲ್ಲ ಅನ್ನಿಸುತ್ತದೆ.ಮಕ್ಕಳ ಮೂವತ್ತು ಕವಿತೆಗಳು

ಲೇ: ವಿಷ್ಣು ನಾಯ್ಕ

ಪು: 68; ಬೆ: ರೂ. 60

ಪ್ರ: ವಿಷ್ಣು ನಾಯ್ಕ, `ಪರಿಮಳ~, ಅಂಬಾರಕೊಡ್ಲ, ಅಂಕೋಲ- 581 314

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.