ಬುಧವಾರ, ಜೂನ್ 23, 2021
30 °C

ಮೊದಲ ಚುನಾ­ವಣೆ: 14 ಪಕ್ಷಗಳ ಚಿಹ್ನೆಗಳು

ಜಿ.ಬಿ.ಹರೀಶ್‌ Updated:

ಅಕ್ಷರ ಗಾತ್ರ : | |

1951ರಲ್ಲಿ ನಡೆದ ದೇಶದ ಮೊದಲ ಮಹಾ ಚುನಾವಣೆಯಲ್ಲಿ ವಿವಿಧ ಪಕ್ಷಗಳಿಗೆ ಚುನಾವಣಾ ಆಯೋಗ ವಿಭಿನ್ನವಾದ ಚಿಹ್ನೆಗಳನ್ನು ನೀಡಿತ್ತು. ಸದ್ಯಕ್ಕೆ  ಕೆಲವು ಪಕ್ಷಗಳೇ ಮಾಯ­ವಾಗಿವೆ, ಇನ್ನೂ ಕೆಲವು ರೂಪಾಂತರ­ಗೊಂಡಿವೆ. ಇತರ ಕೆಲ ಪಕ್ಷಗಳು ಚಿಹ್ನೆಗಳನ್ನು ಅಲ್ಪಸ್ವಲ್ಪ ಬದಲಾವಣೆ ಸಮೇತ ಬಳಸುತ್ತಿವೆ. ಈ ಚಿಹ್ನೆಗಳಿಗೇ ಒಂದು  ಇತಿಹಾಸ ಇದೆ.ಭಾರತ ರಾಷ್ಟ್ರೀಯ ಕಾಂಗ್ರೆಸ್ –ಜೋಡಿ ಎತ್ತುಗಳು, ಸಮಾಜವಾದಿ ಪಕ್ಷ–ಮರ, ಫಾರ್ವರ್ಡ್ ಬ್ಲಾಕ್–ಹಸ್ತ, ಕಿಸಾನ್ ಮಜ್ದೂರ್ ಪ್ರಜಾ ಪಕ್ಷ–ಮನೆ, ಭಾರತೀಯ ಕಮ್ಯನಿಸ್ಟ್ ಪಕ್ಷ–ಧಾನ್ಯ ಮತ್ತು ಕತ್ತಿ, ರೆವಲ್ಯುಷನರಿ ಕಮ್ಯುನಿಸ್ಟ್ ಪಕ್ಷ–ಗುದ್ದಲಿ, ಕೃಷಿಕಾರ ಲೋಕ ಪಾರ್ಟಿ–ಧಾನ್ಯ ಕೇರುತ್ತಿರುವ ಬೆಳೆಗಾರ, ಭಾರತೀಯ ಜನಸಂಘ–ದೀಪ, ಫಾರ್ವರ್ಡ್ ಬ್ಲಾಕ್ (ಕಮ್ಯುನಿಸ್ಟ್ ಬಣ)–ನಿಂತಿರುವ ಸಿಂಹ, ಅಖಿಲ ಭಾರತೀಯ ಹಿಂದೂ ಮಹಾಸಭಾ–ಕುದುರೆ ಮತ್ತು ಸವಾರ, ಅಖಿಲ ಭಾರತೀಯ ರಾಮ ರಾಜ್ಯ ಪರಿಷದ್– ಉದಯಿಸುತ್ತಿರುವ ಸೂರ್ಯ, ಅಖಿಲ ಭಾರತೀಯ ಪರಿಶಿಷ್ಟ ಜಾತಿ ಸಂಘ–ಆನೆ, ಕ್ರಾಂತಿಕಾರಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ – ಉರಿಯುತ್ತಿರುವ ಪಂಜು, ಭಾರತೀಯ ಬೊಲ್ಶೆವಿಕ್ ಪಾರ್ಟಿ – ನಕ್ಷತ್ರ.ಈಗ ಹಸ್ತ ಎಂದರೆ ಕಾಂಗೈ, ಆದರೆ 1951ರಲ್ಲಿ ಈ ಚಿಹ್ನೆ ಫಾರ್ವರ್ಡ್ ಬ್ಲಾಕ್ ಹೊಂದಿತ್ತು. ಜೋಡಿ ಎತ್ತುಗಳು ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಚಿಹ್ನೆ ಯಾಗಿತ್ತು. ಸಿಪಿಐ ಚಿಹ್ನೆ  ಮಾತ್ರ ಬದಲಾಗದೆ ಉಳಿದಿದೆ. ಆನೆ ಚಿಹ್ನೆ ಈಗ ಬಹುಜನ ಸಮಾಜ ಪಕ್ಷಕ್ಕೆ ಒಲಿದಿದೆ.ಉಮೇದುವಾರರ ಸಾಮಾಜಿಕ ಹಿನ್ನೆಲೆ, ಲೋಕಸಭಾ ಸ್ಥಾನಗಳ ಸಂಖ್ಯೆ, ಸಿದ್ಧಾಂತ ಎಲ್ಲವೂ ಬದಲಾದಂತೆ 1951ರ ಮೊದಲ ಲೋಕಸಭಾ ಚುನಾವಣೆಯಲ್ಲಿದ್ದ  ಈ 14   ಚಿಹ್ನೆಗಳೂ ಈಗ 2014ರ 16ನೇ ಲೋಕಸಭಾ ಚುನಾವಣೆ ವೇಳೆಗೆ ಸಾಕಷ್ಟು ಬದಲಾಗಿವೆ.ಈಗ ಕಮ್ಯನಿಸ್ಟ್ ಪಕ್ಷದ ಚಹರೆ ಬದಲಾಗಿದೆ. ಹೊಸದಾಗಿ ಜನತಾ ಪರಿವಾರದಿಂದ ಮತ್ತೆ ಮತ್ತೆ ವಿಭಜನೆಯಾದ ಅನೇಕ ಸಮಾಜವಾದಿ ಹಿನ್ನೆಲೆಯ ಸಮಾಜವಾದಿ ಪಕ್ಷಗಳು ಬಂದಿವೆ. ಬಿಜೆಪಿ ದೊಡ್ಡ ಮಟ್ಟದ ಪಕ್ಷವಾಗಿ ಕಾಣಿಸಿಕೊಂಡಿದೆ. ಅನೇಕ ಪ್ರಾದೇಶಿಕ ಪಕ್ಷಗಳು ಎಲ್ಲೆಡೆ ತಲೆಯೆತ್ತಿವೆ. ಮಹಾರಾಷ್ಟ್ರ­ದಲ್ಲಿ ಶಿವಸೇನೆ, ಪಂಜಾಬ್‌ನಲ್ಲಿ ಅಕಾಲಿದಳ ಮುಂತಾದ ಹತ್ತು ಹಲವು ಪಕ್ಷಗಳು ಈಗ ಕಣದಲ್ಲಿವೆ. ಪೊರಕೆ ಚಿಹ್ನೆಯಿರುವ ಹೊಸದಾದ ಆಮ್ ಆದ್ಮಿ ಪಕ್ಷ ಈಗ ತೀವ್ರ ಕುತೂಹಲ ಮೂಡಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.