ಶನಿವಾರ, ನವೆಂಬರ್ 23, 2019
17 °C
ಫುಟ್‌ಬಾಲ್: ಡ್ರಾ ಪಂದ್ಯದಲ್ಲಿ ಭವಾನಿಪುರ್

ಮೊದಲ ಡಿವಿಷನ್‌ಗೆ ಮಹಮ್ಮಡನ್ ಅರ್ಹತೆ

Published:
Updated:

ಬೆಂಗಳೂರು: ಇಂಡಿಯನ್ ಫುಟ್‌ಬಾಲ್ ಲೀಗ್ ಮೊದಲ ಎರಡೂ ಲೆಗ್‌ಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಮಹಮ್ಮಡನ್ ಸ್ಪೋರ್ಟಿಂಗ್ ತಂಡ ಮೊದಲ ಡಿವಿಷನ್‌ಗೆ ಅರ್ಹತೆ ಪಡೆದುಕೊಂಡಿದೆ.ಅಶೋಕನಗರದಲ್ಲಿರುವ ರಾಜ್ಯ ಫುಟ್‌ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಕೋಲ್ಕತ್ತದ ಮಹಮ್ಮಡನ್ ಹಾಗೂ ಭವಾನಿಪುರ್ ಕ್ಲಬ್ ನಡುವಿನ ಪಂದ್ಯವು ಗೋಲು ರಹಿತವಾಗಿ ಡ್ರಾದಲ್ಲಿ ಅಂತ್ಯ ಕಂಡಿತು.ಒಂಬತ್ತು ಪಂದ್ಯಗಳನ್ನಾಡಿರುವ ಮಹಮ್ಮಡನ್ 18 ಪಾಯಿಂಟ್ಸ್ ಗಳಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನಾಲ್ಕು ವರ್ಷಗಳ ನಂತರ ಮಹಮ್ಮಡನ್ ಐ ಲೀಗ್ ಮೊದಲ ಡಿವಿಷನ್‌ನಲ್ಲಿ ಆಡಲು ಅರ್ಹತೆ ಪಡೆದುಕೊಂಡಿತು.ಕೋಲ್ಕತ್ತದ ಇನ್ನೊಂದು ಕ್ಲಬ್ ಭವಾನಿಪುರ್ ಒಂಬತ್ತು ಪಂದ್ಯಗಳಿಂದ 14 ಅಂಕಗಳನ್ನು ಹೊಂದಿದ್ದು, ಮೂರನೇ ಸ್ಥಾನದಲ್ಲಿದೆ. 16 ಅಂಕಗಳನ್ನು ಕಲೆ ಹಾಕಿರುವ ಶಿಲ್ಲಾಂಗ್‌ನ ರಂಗ್‌ದೇಜಿದ್ 16 ಅಂಕಗಳೊಂದಿಗೆ ಎರಡನೇ ಸ್ಥಾನ ಗಳಿಸಿದೆ.`ನಾಲ್ಕು ವರ್ಷಗಳ ಬಳಿಕ ಮತ್ತೆ ಐ ಲೀಗ್ ಮೊದಲ ಡಿವಿಷನ್‌ಗೆ ಅರ್ಹತೆ ಪಡೆದದ್ದಕ್ಕೆ ಖುಷಿಯಾಗಿದೆ. ಮೊದಲ ಹಾಗೂ ಎರಡನೇ ಲೆಗ್‌ನಲ್ಲಿ ತಂಡ ನೀಡಿದ ಪ್ರದರ್ಶನ ಖುಷಿ ನೀಡಿದೆ' ಎಂದು ಮಹಮ್ಮಡನ್ ತಂಡದ ತರಬೇತುದಾರ ಸಂಜಯ್ ತಿಳಿಸಿದರು.

ಪ್ರತಿಕ್ರಿಯಿಸಿ (+)