ಮೊದಲ ದಿನವೇ ಮಾಸಿಕ ವೇತನ ನೀಡಲು ಆಗ್ರಹ

ಗುರುವಾರ , ಮೇ 23, 2019
32 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಮೊದಲ ದಿನವೇ ಮಾಸಿಕ ವೇತನ ನೀಡಲು ಆಗ್ರಹ

Published:
Updated:

ಹೊಸಪೇಟೆ: ಪ್ರತಿ ತಿಂಗಳು ಮೊದಲ ದಿನವೇ ಆರೋಗ್ಯ ಸಹಾಯಕರಿಗೂ ಮಾಸಿಕ ವೇತನವನ್ನು ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳೊಂದಿಗೆ  ಕರ್ನಾಟಕ ರಾಜ್ಯ ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾಯಕರ ತಾಲ್ಲೂಕು ಘಟಕದವರು ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.ಮಂಗಳವಾರ ತಾಲ್ಲೂಕು ವೈದ್ಯಾಧಿಕಾರಿಗಳ ಕಚೇರಿಯಿಂದ ಮೆರವಣಿಗೆ ಮಾಡಿದ ಆರೋಗ್ಯ ಸಹಾಯಕರು ಹಾಗೂ ಇತರರು ಹಾಜರಿದ್ದರು.

 

ಬೇಡಿಕೆಗಳು: ಸದ್ಯ ನೀಡುತ್ತಿರುವ 3 ರಿಂದ 4 ತಿಂಗಳಿಗೊಮ್ಮೆ ನೀಡುವ ವೇತನವನ್ನು ಪ್ರತಿ ತಿಂಗಳ ನೀಡಬೇಕು,  ವೈದ್ಯಾಧಿಕಾರಿಗಳಿಗೆ ನೀಡುತ್ತಿರುವ ಗ್ರಾಮೀಣ ಭತ್ಯೆ, ತುರ್ತು ಚಿಕಿತ್ಸಾ ಭತ್ಯೆ, ವಿದ್ಯಾರ್ಹತೆ ಭತ್ಯೆಯನ್ನು ಎಲ್ಲ ಸಿಬ್ಬಂದಿಗೆ ನೀಡುವಂತೆ ನೀಡಬೇಕು, ಮೂಲವೇತನಲ್ಲಿರುವ ತಾರತಮ್ಯ ನಿವಾರಿಸಬೇಕು, ಕೇಂದ್ರ ಸರ್ಕಾರದ ಅದೇಶದನ್ವಯ ಆರೋಗ್ಯ ಸಹಾಯಕರನ್ನು ಮೂರು ಸಾವಿರ ಜನಸಂಖ್ಯೆಗೆ ಒಬ್ಬರಂತೆ ನೇಮಕ ಮಾಡಬೇಕು ಎಂಬುದು ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಸೆಪ್ಟೆಂಬರ್ 14ರೊಳಗಾಗಿ ಈಡೇರಿಸದಿದ್ದರೆ ಸಾಮೂಹಿಕವಾಗಿ ಒಂದು ದಿನದ ಸಾಂದರ್ಭಿಕ ರಜೆ ಹಾಕಿ ಧರಣಿ ನಡೆಸಲಾಗುವುದು ಎಂದು ಮನವಿಯಲ್ಲಿ ಸರ್ಕಾರಕ್ಕೆ ತಿಳಿಸಿದ್ದಾರೆ.ಸಂಘದ ಗೌರವ ಅಧ್ಯಕ್ಷ ಎಸ್.ಎಸ್. ಶಿರಹಟ್ಟಿ, ಪ್ರಧಾನ ಕಾರ್ಯದರ್ಶಿ ಎಚ್. ಹುಲುಗಪ್ಪ ಸೇರಿದಂತೆ ಇತರೆ ಆರೋಗ್ಯ ಸಹಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry