ಶುಕ್ರವಾರ, ಜೂನ್ 18, 2021
28 °C

ಮೊದಲ ದಿನ ಒಂದು ನಾಮಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಲೋಕಸಭಾ ಚುನಾ­ವಣೆಗೆ ನಾಮಪತ್ರ ಸಲ್ಲಿಕೆಯ ಮೊದಲ ದಿನವಾದ ಮಾ. 19ರಂದು ರಾಯ­ಚೂರು ಲೋಕಸಭಾ ಕ್ಷೇತ್ರಕ್ಕೆ ಒಂದು ನಾಮಪತ್ರ ಸಲ್ಲಿಕೆಯಾಗಿದೆ.ಎಸ್‌ಯುಸಿಐ ಪಕ್ಷದ ಅಭ್ಯರ್ಥಿ ಕೆ. ಸೋಮಶೇಖರ ಯಾದಗಿರಿ ಅವರು ಬುಧವಾರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಸ್.ಎನ್ ನಾಗರಾಜು ಅವರಿಗೆ ನಾಮಪತ್ರ ಸಲ್ಲಿಸಿ­ದರು. ಪಕ್ಷದ ರಾಜ್ಯ ಕಾರ್ಯದರ್ಶಿ ಕೆ. ರಾಧಾಕೃಷ್ಣ, ಜಿಲ್ಲಾ ಕಾರ್ಯದರ್ಶಿ ಡಾ.ಟಿ.ಎಸ್ ಸುನೀತ್‌ಕುಮಾರ ಅವರ ಸಮ್ಮುಖದಲ್ಲಿ ಆಭ್ಯರ್ಥಿ ಸೋಮ­ಶೇಖರ ನಾಮಪತ್ರ ಸಲ್ಲಿಸಿದರು.ಲೋಕಸಭಾ ಕ್ಷೇತ್ರದಲ್ಲಿನ ಪಕ್ಷದ ಬೆಂಬಲಿಗರು, ಕಾರ್ಯಕರ್ತರು ಇದ್ದರು. ಪಕ್ಷದ ರಾಯಚೂರು ಜಿಲ್ಲಾ ಸಮಿತಿಯ ಸದಸ್ಯರಾದ ಅಪರ್ಣಾ ಬಿ.ಆರ್, ಎನ್.ಎಸ್. ವೀರೇಶ, ಶರಣಪ್ಪ ಉದ್ಬಾಳ, ರಾಮಣ್ಣ ಎಂ, ಡಾ. ಚಂದ್ರಗಿರೀಶ್, ಮಹೇಶ ಚೀಕಲಪರ್ವಿ, ಚನ್ನಬಸವ ಜಾನೇಕಲ್ ಹಾಗೂ ಗುಲ್ಬರ್ಗ ಜಿಲ್ಲಾ ಸಮಿತಿ ಸದಸ್ಯರಾದ ಉಮಾದೇವಿ, ಶರಣಗೌಡ ಗೂಗಲ್ ಪಾಲ್ಗೊಂಡಿದ್ದರು.ಅಭ್ಯರ್ಥಿ ನುಡಿ:  ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಅಭ್ಯರ್ಥಿ ಸೋಮ­ಶೇಖರ ಯಾದಗಿರಿ, ನಿರಂತರವಾಗಿ ಜನ ಹೋರಾಟ ಬೆಳೆಸುತ್ತಿರುವ ತಮ್ಮ ಪಕ್ಷವು ತಮ್ಮನ್ನು ಈ ಕ್ಷೇತ್ರಕ್ಕೆ ಅಭ್ಯರ್ಥಿ­ಯನ್ನಾಗಿಸಿದೆ. ಹಣಬಲ, ತೋಳ್ಬಲದ ವಿರುದ್ಧ ಸೆಣಸಬೇಕಿದೆ. ಪ್ರತಿಯೊಬ್ಬ ಕಾರ್ಯಕರ್ತರು ಹಗಲಿರುಳೆನ್ನದೇ ಪ್ರಚಾರದಲ್ಲಿ ತೊಡಗಬೇಕು ಎಂದು ಪಕ್ಷದ ಕಾರ್ಯಕರ್ತರು, ಬೆಂಬಲಿಗರಿಗೆ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.