ಮೊದಲ ಸ್ಥಾನಕ್ಕೆ ಏರಲು ಕೋಲ್ಕತ್ತ ನೈಟ್ ರೈಡರ್ಸ್ ಹೋರಾಟ:ಮುಂಬೈ ಇಂಡಿಯನ್ಸ್‌ಗೆ ಸವಾಲಿನ ಪಂದ್ಯ

7

ಮೊದಲ ಸ್ಥಾನಕ್ಕೆ ಏರಲು ಕೋಲ್ಕತ್ತ ನೈಟ್ ರೈಡರ್ಸ್ ಹೋರಾಟ:ಮುಂಬೈ ಇಂಡಿಯನ್ಸ್‌ಗೆ ಸವಾಲಿನ ಪಂದ್ಯ

Published:
Updated:
ಮೊದಲ ಸ್ಥಾನಕ್ಕೆ ಏರಲು ಕೋಲ್ಕತ್ತ ನೈಟ್ ರೈಡರ್ಸ್ ಹೋರಾಟ:ಮುಂಬೈ ಇಂಡಿಯನ್ಸ್‌ಗೆ ಸವಾಲಿನ ಪಂದ್ಯ

ಕೋಲ್ಕತ್ತ (ಪಿಟಿಐ): ಸತತ ಆರು ಗೆಲುವಿನ ಸಂಭ್ರಮದಲ್ಲಿರುವ ಕೋಲ್ಕತ್ತ ನೈಟ್ ರೈಡರ್ಸ್ ಯಶಸ್ಸಿನ ಓಟಕ್ಕೆ ವಿರಾಮ ಹಾಕುವುದು ಮುಂಬೈ ಇಂಡಿಯನ್ಸ್ ಉದ್ದೇಶ. ಈ ನಿಟ್ಟಿನಲ್ಲಿ ಯಶಸ್ವಿಯಾದರೆ ಪ್ಲೆಆಫ್ ತಲುಪುವತ್ತ ಇನ್ನೊಂದು ಹೆಜ್ಜೆ.ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಸೋಲಿನ ನಂತರ ಚಡಪಡಿಸಿರುವ `ಭಜ್ಜಿ~ ಬಳಗಕ್ಕೆ ಈಗ ಗೆಲುವು ಅಗತ್ಯವಾಗಿದೆ. ಆದರೆ ಶನಿವಾರ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯ ಐದನೇ ಅವತರಣಿಕೆ ಪಂದ್ಯದಲ್ಲಿ ಗೌತಮ್ ಗಂಭೀರ್ ನೇತೃತ್ವದ ತಂಡವು ಸುಲಭದ ಎದುರಾಳಿಯಂತೂ ಅಲ್ಲ.ನೈಟ್ ರೈಡರ್ಸ್ ತಂಡವು ಡೆಕ್ಕನ್ ಚಾರ್ಜರ್ಸ್ ವಿರುದ್ಧದ ರದ್ದಾದ ಒಂದು ಪಂದ್ಯದ ಹೊರತಾಗಿ, ಸತತ ಜಯ ಗಳಿಸುತ್ತಾ ಸಾಗಿದೆ. ಅದು ಮತ್ತೊಂದು ಪಂದ್ಯ ಗೆದ್ದು ಪಾಯಿಂಟುಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರುವ ಸಾಹಸ ಮಾಡಬಹುದು. ಆದರೆ ಅದಕ್ಕೆ ಪ್ರಬಲ ಪೈಪೋಟಿ ನೀಡಿರುವ ಡೆಲ್ಲಿ ಡೇರ್‌ಡೆವಿಲ್ಸ್ ತನ್ನ ಮುಂದಿನ ಪಂದ್ಯದಲ್ಲಿ ಯಾವ ಫಲವನ್ನು ಪಡೆಯುತ್ತದೆ ಎನ್ನುವುದು ಮಹತ್ವದ್ದಾಗಿದೆ.ಸದ್ಯಕ್ಕಂತೂ ನೈಟ್ ರೈಡರ್ಸ್ ಎರಡನೇ ಸ್ಥಾನದಲ್ಲಿಯಂತೂ ಗಟ್ಟಿ. ಆದರೆ ಮುಂಬೈ ಇಂಡಿಯನ್ಸ್ ಸ್ಥಿತಿ ಅಷ್ಟೊಂದು ಸುರಕ್ಷಿತವಾಗಿಲ್ಲ. ಮುಂದಿನ ಹಂತದಲ್ಲಿ ಆಡುವುದಕ್ಕೆ ಅರ್ಹತೆ ಪಡೆಯಲು ಎರಡು ಪಾಯಿಂಟುಗಳನ್ನು ಗಿಟ್ಟಿಸುತ್ತಾ ಸಾಗಬೇಕು.ಐಪಿಎಲ್ ಐದನೇ ಅವತರಣಿಕೆಯ ಆರಂಭಕ್ಕೆ ಮುನ್ನ ಚಾಂಪಿಯನ್ ಪಟ್ಟ ಪಡೆಯುವ ನೆಚ್ಚಿನ ತಂಡದ ಸ್ಥಾನ ಪಡೆದಿದ್ದ ಇಂಡಿಯನ್ಸ್ ಅದೇ ವಿಶ್ವಾಸದೊಂದಿಗೆ ಬೆಳೆದು ನಿಲ್ಲಲಿಲ್ಲ. ಸೂಪರ್ ಕಿಂಗ್ಸ್ ಹಾಗೂ ಚಾಲೆಂಜರ್ಸ್ ನಿಕಟ ಸ್ಪರ್ಧೆ ನೀಡುತ್ತಿವೆ. ಆದ್ದರಿಂದ ನೈಟ್‌ರೈಡರ್ಸ್ ಎದುರು ಗೆದ್ದು ಸ್ಥಿತಿಯನ್ನು ಉತ್ತಮಪಡಿಸಿಕೊಂಡರೆ ಕಷ್ಟಗಳೂ ದೂರವಾಗುತ್ತವೆ.ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಬಗ್ಗೆ ಚಿಂತೆಗೀಡಾಗಿದೆ. ಅದು ಪ್ರದರ್ಶನ ಮಟ್ಟವನ್ನು ಕಾಯ್ದುಕೊಂಡು ಹೋಗುವುದು ಸಾಧ್ಯವಾಗುತ್ತಿಲ್ಲ. ಆದರೆ ಬೌಲಿಂಗ್ ವಿಭಾಗದಲ್ಲಿ ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗ ಪ್ರಭಾವಿಯಾಗಿದ್ದು ಅದಕ್ಕೆ ದೊಡ್ಡ ಬಲ.ಸಚಿನ್ ಅವರಂಥ ಬ್ಯಾಟ್ಸ್‌ಮನ್‌ಗಳಿರುವ ಇಂಡಿಯನ್ಸ್ ರನ್ ಗತಿಗೆ ಚುರುಕು ನೀಡುವಂಥ ಆಟವಾಡಿದರೆ ಯಾವುದೇ ಎದುರಾಳಿಯನ್ನು ಮಣಿಸಬಹುದು. ಆದರೆ ರನ್ ಮೊತ್ತ ಹೆಚ್ಚಿಸುವ ತಾಕತ್ತು ಪ್ರದರ್ಶನ ಪ್ರತಿಯೊಂದು ಪಂದ್ಯದಲ್ಲಿ ಸಾಧ್ಯವಾಗದ್ದು ಹರಭಜನ್ ಚಿಂತೆಗೆ ಕಾರಣವಾಗಿದೆ.

ಪಂದ್ಯ ಆರಂಭ: ಸಂಜೆ 4.00ಕ್ಕೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry