ಮೊನಿಕಾ ಲೆವಿನ್‌ಸ್ಕಿ ಲೈಂಗಿಕ ಹಗರಣ:ಜಾಬ್ಸ್‌ಗೆ ಫೋನಾಯಿಸಿದ್ದ ಕ್ಲಿಂಟನ್!

7

ಮೊನಿಕಾ ಲೆವಿನ್‌ಸ್ಕಿ ಲೈಂಗಿಕ ಹಗರಣ:ಜಾಬ್ಸ್‌ಗೆ ಫೋನಾಯಿಸಿದ್ದ ಕ್ಲಿಂಟನ್!

Published:
Updated:

ಲಂಡನ್ (ಐಎಎನ್‌ಎಸ್): ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಮೋನಿಕಾ ಲೆವಿನ್‌ಸ್ಕಿ ಹಗರಣದಲ್ಲಿ ಸಿಲುಕಿ ಸಂಕಷ್ಟದಲ್ಲಿದ್ದಾಗ ಕಂಪ್ಯೂಟರ್ ಜಗತ್ತಿನ ದಿಗ್ಗಜ ದಿವಂಗತ ಸ್ಟೀವ್ ಜಾಬ್ಸ್ ಅವರಿಗೆ ಫೋನಾಯಿಸಿ, ಈ ಸಮಸ್ಯೆಯನ್ನು ಹೇಗೆ ಎದುರಿಸುವುದು ಎಂದು ಕೇಳಿದ್ದರಂತೆ.ಇದಕ್ಕೆ ಉತ್ತರಿಸಿದ್ದ ಜಾಬ್ಸ್, `ನೀವು ಇಂತಹ ಕೆಲಸ ಮಾಡಿದ್ದೀರಿ ಎಂದು ನನಗನ್ನಸುತ್ತಿಲ್ಲ. ಹಾಗೊಂದು ವೇಳೆ ಮಾಡಿದ್ದೇ ಆದರೆ ಅದನ್ನು ದೇಶದ ಜನರೆದುರು ಸ್ಪಷ್ಟವಾಗಿ ತಿಳಿಸಿಬಿಡಿ~ ಎಂಬ ಸಲಹೆ ನೀಡಿದ್ದರಂತೆ!

ಆಗ ಅತ್ತ ಕಡೆಯಿಂದ ನೀರವ ಮೌನವೇ ಇದಕ್ಕೆ ಉತ್ತರವಾಗಿತ್ತಂತೆ!!ಜಾಬ್ಸ್ ತಮ್ಮ 13ನೇ ವಯಸ್ಸಿಗೇ ಚರ್ಚಿಗೆ ಹೋಗುವುದನ್ನು ನಿಲ್ಲಿಸಿದ್ದರಂತೆ. ಅವರಿಗೆ ದೇವರು ಇದ್ದಾನೊ ಇಲ್ಲವೊ ಎಂಬುದು ಒಂದು ರೀತಿ 50-50 ಛಾನ್ಸ್ ಎಂಬಂತಹ ಧೋರಣೆಯಾಗಿತ್ತಂತೆ. ಜಾಬ್ಸ್ ತಮ್ಮ 15ನೇ ವಯಸ್ಸಿನಲ್ಲೇ ಮಾದಕ ವಸ್ತು ಮರಿಜುವಾನದ ರುಚಿ ನೋಡಿದ್ದರಂತೆ!ಇಂತಹ ಹತ್ತು ಹಲವು ಸ್ವಾರಸ್ಯಕರ ಅಂಶಗಳನ್ನು ಒಳಗೊಂಡ ಸ್ಟೀವ್ ಜಾಬ್ಸ್ ಅವರ ಜೀವನ ಚರಿತ್ರೆ ಇದೇ ಅಕ್ಟೋಬರ್ 24ರಂದು ಬಿಡುಗಡೆಯಾಗುತ್ತಿದೆ. ವಾಲ್ಟರ್ ಇಸಾಕ್‌ಸನ್ ಬರೆದಿರುವ ಈ ಜೀವನ ಚರಿತ್ರೆಯಲ್ಲಿ ಜಾಬ್ಸ್ ಅವರೊಂದಿಗೆ ನಡೆಸಲಾಗಿರುವ ಸುಮಾರು 40 ಹೆಚ್ಚು ಸಂದರ್ಶನಗಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry