ಸೋಮವಾರ, ಅಕ್ಟೋಬರ್ 21, 2019
24 °C

ಮೊಬೈಲ್‌ಫೋನ್, ವಾಹನ ದುರ್ಬಳಕೆ ಬೇಡ

Published:
Updated:

ಚಿಕ್ಕಬಳ್ಳಾಪುರ: ಶಾಲಾ-ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ತಮ್ಮ ಮಕ್ಕಳಿಗೆ ಮೊಬೈಲ್ ಫೋನ್ ಅಥವಾ ದ್ವಿಚಕ್ರ ವಾಹನ ಕೊಡಿಸುವ ಮುನ್ನ ಪೋಷಕರು ಎಚ್ಚರವಹಿಸ ಬೇಕು. ಅವೆರಡೂ ಮಕ್ಕಳಿಗೆ ತೀರ ಅಗತ್ಯವಿದೆಯೇ ಎಂಬುದನ್ನು ಚಿಂತನೆ ಮಾಡಬೇಕು ಎಂದು ಶಿಕ್ಷಣ ತಜ್ಞ ಡಾ. ಕೋಡಿರಂಗಪ್ಪ ತಿಳಿಸಿದರು.23ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ನಗರದ ಹೊರವಲಯದಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಸಭಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಮೊಬೈಲ್ ಫೋನ್ ಮತ್ತು ದ್ವಿಚಕ್ರ ವಾಹನಗಳ ಹಾವಳಿಯಿಂದ ಮಕ್ಕಳು ಹಾದಿ ತಪ್ಪುತ್ತಿದ್ದಾರೆ. ವಿದ್ಯಾಭ್ಯಾಸದತ್ತ ಗಮನ ನೀಡುವುದರ ಬದಲು ಮೋಜುಭರಿತ ಜೀವನಕ್ಕಾಗಿಯೇ ಹಾತೊರೆಯುತ್ತಿದ್ದಾರೆ~ ಎಂದು ಹೇಳಿದರು.`ತುರ್ತು ಸಂದರ್ಭಗಳಲ್ಲಿ ಮಾತ್ರವೇ ಬಳಕೆಯಾಗಬೇಕಾದ ಮೊಬೈಲ್ ಪೋನ್ ಇಲ್ಲಸಲ್ಲದ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ. ಯಾವುದೇ ರೀತಿಯ ಸುರಕ್ಷತಾ ನಿಯಮಗಳನ್ನು ಪಾಲಿಸದೇ ದ್ವಿಚಕ್ರ ವಾಹನಗಳನ್ನು ಚಾಲನೆ ಮಾಡಲಾಗುತ್ತಿದೆ. ಯುವಜನರೇ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಕ್ಕೀಡಾಗುತ್ತಿದ್ದಾರೆ. ದ್ವಿಚಕ್ರ ವಾಹನವನ್ನು ವೇಗವಾಗಿ ಚಾಲನೆ ಮಾಡುತ್ತ ಅಥವಾ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತ ಅಪ ಘತಕ್ಕೀಡಾಗುತ್ತಾರೆ. ಚಿಕಿತ್ಸೆ ಸ್ಪಂದಿಸದೇ ಬಹು ತೇಕ ಯುವಜನರೇ ಸಾವನ್ನಪ್ಪುತ್ತಿದ್ದಾರೆ~ ಎಂದು ಅವರು ಖೇದ ವ್ಯಕ್ತಪಡಿಸಿದರು.ಆರ್‌ಟಿಒ ಅಧಿಕಾರಿ ಎ.ಎ.ಖಾನ್ ಮಾತ ನಾಡಿ, `ವಾಹನ ಚಾಲನೆ ಮಾಡುವಾಗ ವಾಹನ ಸವಾರರು ಎಚ್ಚರವಹಿಸಬೇಕು. ಅಪಘಾತಕ್ಕೀಡಾ ಗದಂತೆ ಮತ್ತು ಪಾದಚಾರಿಗಳಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ಚಾಲನೆ ಮಾಡಬೇಕು. ದ್ವಿಚಕ್ರ ವಾಹನ ಚಾಲನೆ ಮಾಡುವಾಗ, ಮೊಬೈಲ್ ಪೋನ್‌ಗಳಲ್ಲಿ ಸಂಗೀತ ಕೇಳುವುದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದರು.ಇದಕ್ಕೂ ಮುನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಡಾ. ಟಿ.ಡಿ.ಪವಾರ್ ಅವರು ರಸ್ತೆ ಸುರ ಕ್ಷತಾ ನಿಯಮಗಳಿಗೆ ಸಂಬಂಧಿಸಿದಂತೆ ಕರಪತ್ರ ಗಳನ್ನು ಬಿಡುಗಡೆಗೊಳಿಸಿ, ರಸ್ತೆ ಸುರಕ್ಷತಾ ಮಾಹಿತಿ ಕೊಠಡಿ ಉದ್ಘಾಟಿಸಿದರು.

ಡಿವೈಎಸ್ಪಿ ಕಾಖಂಡಕಿ, ಸರ್ಕಲ್ ಇನ್ಸ್‌ಪೆಕ್ಟರ್ ಎಸ್. ಮಹೇಶ್‌ಕುಮಾರ್, ಸಂಚಾರ ಠಾಣೆ ಸಬ್‌ಇನ್ಸ್‌ಪೆಕ್ಟರ್ ನಯಾಜ್ ಬೇಗ್, ನಗರ ಠಾಣೆ ಸಬ್‌ಇನ್ಸ್‌ಪೆಕ್ಟರ್ ವಸಂತ್ ಮತ್ತಿತರರು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.

 

Post Comments (+)