ಮೊಬೈಲ್‌ ಕಳವು: 14 ಮಂದಿ ಬಂಧನ

7

ಮೊಬೈಲ್‌ ಕಳವು: 14 ಮಂದಿ ಬಂಧನ

Published:
Updated:

ಬೆಂಗಳೂರು: ನಗರದಲ್ಲಿ ದುಬಾರಿ ಬೆಲೆಯ ಮೊಬೈಲ್‌ಗಳನ್ನು ಕಳವು ಮಾಡಿ, ಜಾರ್ಖಂಡ್‌ನಲ್ಲಿ ಮಾರಾಟ ಮಾಡುತ್ತಿದ್ದ ಎಂಟು ಬಾಲಾ ರೋಪಿಗಳು ಸೇರಿದಂತೆ 14 ಮಂದಿ ಯನ್ನು ಕೆಂಪಾಪುರ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.ಜಾರ್ಖಂಡ್ ಮೂಲದ ಆಕಾಶ್‌ ಕುಮಾರ್ (20), ಅಮರನಾಥ ಮಹತೋ (22), ವಿಕ್ರಂ ಕುಮಾರ್ (20), ವಿಕ್ಕಿ ಕುಮಾರ್ (19), ವಿಜಯ್ ಕುಮಾರ್‌ (20) ಮತ್ತು ಸಾಮು (19) ಬಂಧಿತರು. ಪ್ರಮುಖ ಆರೋಪಿ ದೆಹಲಿ ಮೂಲದ ಸುನೀಲ್‌ಕುಮಾರ್‌ ತಲೆಮರೆ ಸಿಕೊಂಡಿದ್ದಾನೆ. ಬಂಧಿತರಿಂದ ಆರು ಲಕ್ಷ ರೂಪಾಯಿ ಮೌಲ್ಯದ 50 ಮೊಬೈಲ್‌ ಗಳು ಹಾಗೂ ಆಪಲ್‌ ಕಂಪೆನಿಯ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ಸುನೀಲ್‌ಕುಮಾರ್‌, ಆಗಾಗ್ಗೆ ಜಾರ್ಖಂಡ್‌ಗೆ ಹೋಗಿ ನಿರುದ್ಯೋಗಿ ಯುವಕರನ್ನು ಪರಿಚಯಿಸಿಕೊಂಡಿದ್ದ. ಅಲ್ಲದೇ ಹಣದ ಆಮಿಷ ತೋರಿಸಿ ಬಾಲಕರನ್ನೂ ಈ ದಂಧೆಗೆ ಬಳಸಿ ಕೊಂಡಿದ್ದ. ಸಾಮಾನ್ಯವಾಗಿ ಹಬ್ಬದ ಸಂದರ್ಭದಲ್ಲಿ ನಗರಕ್ಕೆ ಲಗ್ಗೆ ಇಡುವ ಈ ತಂಡ, ವಸತಿ ಗೃಹದಲ್ಲಿ ಉಳಿದುಕೊಂಡು ಸಂಚು ರೂಪಿಸುತ್ತದೆ. ಮಾರುಕಟ್ಟೆ, ದೇವಸ್ಥಾನ ಸೇರಿದಂತೆ ಜನದಟ್ಟಣೆ ಇರುವ ಪ್ರದೇಶಗಳಿಗೆ ತೆರಳಿ ಮೊಬೈಲ್‌ ಗಳನ್ನು ದೋಚುತ್ತಿದ್ದರು. ಹೀಗೆ ಕಳವು ಮಾಡಿದ ಮೊಬೈಲ್‌ಗಳನ್ನು ಜಾರ್ಖಂ ಡ್‌ನಲ್ಲಿ ಅರ್ಧ ಬೆಲೆಗೆ ಮಾರಾಟ ಮಾಡಿ, ಹಣ ಹಂಚಿಕೊಳ್ಳುತ್ತಿದ್ದರು  ಎಂದು ಪೊಲೀಸರು ಮಾಹಿತಿ ನೀಡಿದರು.ಗಣೇಶ ಹಬ್ಬದ ಸಂದರ್ಭದಲ್ಲಿ ಮೊಬೈಲ್‌ಗಳನ್ನು ಕಳವು ಮಾಡಲು ಸೆ6ರಂದು ನಗರಕ್ಕೆ ಬಂದಿದ್ದ ಆರೋಪಿಗಳು, ಗಾಂಧಿನಗರದ ವಸತಿ ಗೃಹವೊಂದರಲ್ಲಿ ಉಳಿದುಕೊಂಡಿದ್ದರು. ಸೆ.9ರಂದು ಮೂವರು ಆರೋಪಿಗಳು, ಕೆಂಪಾಪುರ ಅಗ್ರಹಾರದಲ್ಲಿ ಗಣೇಶನ ಮೂರ್ತಿಗಳನ್ನು ನೋಡುತ್ತಿದ್ದವರಿಂದ ಮೊಬೈಲ್‌ ಕಳವು ಮಾಡಲು ಯತ್ನಿಸಿದ್ದರು. ಆಗ ಸಾರ್ವಜನಿಕರ ನೆರವಿ ನಿಂದ ಅವರನ್ನು ವಶಕ್ಕೆ ಪಡೆದ ಪೊಲೀಸರು, ಅವರು ನೀಡಿದ ಮಾಹಿತಿ ಆಧರಿಸಿ ಉಳಿದವರನ್ನೂ ಬಂಧಿಸಿದ್ದಾರೆ.ಎಂಟು ಬಾಲಾರೋಪಿಗಳನ್ನು ಬೋಸ್ಕೋ ಸಂಸ್ಥೆಯ ವಶಕ್ಕೆ ಒಪ್ಪಿಸ ಲಾಗಿದೆ. ಸದ್ಯ ಅವರ ಪೋಷಕರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಬಾಲಕರಿಗೆ ಎಚ್ಚರಿಕೆ ನೀಡಿ ಪೋಷಕ ರೊಂದಿಗೆ ರಾಜ್ಯಕ್ಕೆ ಕಳುಹಿಸಲಾಗುವುದು ಎಂದು ಕೆಂಪಾಪುರ ಅಗ್ರಹಾರ ಪೊಲೀಸರು ಹೇಳಿದ್ದಾರೆ.

ಮೋರಿಯಲ್ಲಿ ಶವ: ಬನ್ನೇರುಘಟ್ಟ ರಸ್ತೆಯಲ್ಲಿರುವ ಡೇರಿ ವೃತ್ತದ ಮೋರಿಯಲ್ಲಿ ಗುರುವಾರ ಬೆಳಿಗ್ಗೆ ಸಂಪಂಗಿರಾಮ ರೆಡ್ಡಿ (55) ಎಂಬುವರ ಶವ ಪತ್ತೆಯಾಗಿದೆ.ಅಯ್ಯಪ್ಪನಗರದ ನಿವಾಸಿಯಾದ ಸಂಪಂಗಿರಾಮ ರೆಡ್ಡಿ, ಯಲಹಂಕದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬೆಳಿಗ್ಗೆ ಮೋರಿಯಲ್ಲಿ ಶವವನ್ನು ಕಂಡ ಸ್ಥಳೀಯರು, ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ‘ಮೃತರು ಕೆಲಸ ಮುಗಿಸಿಕೊಂಡು ಪ್ರತಿದಿನ ರಾತ್ರಿ ಬಸ್‌ನಲ್ಲಿ ಡೇರಿ ವೃತ್ತಕ್ಕೆ ಬರುತ್ತಿದ್ದರು. ಅಲ್ಲಿಂದ ಮತ್ತೊಂದು ಬಸ್‌ ಹಿಡಿದು ಅಯ್ಯಪ್ಪನಗರಕ್ಕೆ ಹೋಗುತ್ತಿದ್ದರು ಎಂದು ಸಹಕಾರ್ಮಿಕರು ಹೇಳಿದ್ದಾರೆ.

ಅಂತೆಯೇ ಬುಧವಾರ ರಾತ್ರಿ ಕೂಡ ಅವರು ಡೇರಿ ವೃತ್ತಕ್ಕೆ ಬಂದಿರಬಹುದು. ಮೂತ್ರ ವಿಸರ್ಜನೆ ಮಾಡಲು ಮೋರಿ ಬಳಿ ಹೋದಾಗ ಆಕಸ್ಮಿಕವಾಗಿ ಕೆಳಗೆ ಬಿದ್ದಿರುವ ಸಾಧ್ಯತೆ ಇದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ ಲಾಗುತ್ತಿದೆ’ ಎಂದು ಮೈಕೊಲೇಔಟ್‌ ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry