ಮೊಬೈಲ್‌ ಚಂದಾದಾರರ ಸಂಖ್ಯೆ ಹೆಚ್ಚಳ

7

ಮೊಬೈಲ್‌ ಚಂದಾದಾರರ ಸಂಖ್ಯೆ ಹೆಚ್ಚಳ

Published:
Updated:

ನವದೆಹಲಿ (ಪಿಟಿಐ): ದೇಶದ ಜಿಎಸ್‌ಎಂ ದೂರವಾಣಿ ಚಂದಾದಾರರ ಸಂಖ್ಯೆ ಮೇ ತಿಂಗಳಲ್ಲಿ 61.9 ಲಕ್ಷದಷ್ಟು  ಹೆಚ್ಚಿದ್ದು 73.3 ಕೋಟಿಗೆ ಏರಿಕೆ ಕಂಡಿದೆ ಎಂದು ಭಾರತೀಯ ದೂರ­ವಾಣಿ ಸೇವಾ ಸಂಸ್ಥೆಗಳ ಒಕ್ಕೂಟ (ಸಿಒಎಐ) ಹೇಳಿದೆ.ಭಾರ್ತಿ ಏರ್‌ಟೆಲ್‌ ಮತ್ತು ಯುನಿ­ನಾರ್‌ ಅತಿ ಹೆಚ್ಚು ಗ್ರಾಹಕರನ್ನು ತಮ್ಮ ಸೇವಾ ಜಾಲಕ್ಕೆ ಹೊಸದಾಗಿ ಸೇರ್ಪಡೆ ಮಾಡಿಕೊಂಡಿವೆ. ಏಪ್ರಿಲ್‌ನಲ್ಲಿ ಒಟ್ಟಾರೆ ‘ಜಿಎಸ್‌ಎಂ’ ಚಂದಾ­ದಾರರ ಸಂಖ್ಯೆ 72.68 ಕೋಟಿಯಷ್ಟಿತ್ತು.ಏರ್‌ಟೆಲ್‌ ತನ್ನ ಸೇವಾ ವ್ಯಾಪ್ತಿಗೆ 16.5 ಲಕ್ಷ ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿದ್ದು ಒಟ್ಟಾರೆ ಚಂದಾ­ದಾರರ ಸಂಖ್ಯೆಯನ್ನು  20.82 ಕೋಟಿಗೆ ಹೆಚ್ಚಿಸಿಕೊಂಡಿದೆ. ಕಂಪೆನಿಯ ಮಾರುಕಟ್ಟೆ ಪಾಲು ಶೇ 28.41ಕ್ಕೆ ಏರಿಕೆ ಕಂಡಿದೆ. ನಾರ್ವೆ ಮೂಲದ ದೂರವಾಣಿ ಕಂಪೆನಿ ಯುನಿನಾರ್‌ 13 ಲಕ್ಷ ಗ್ರಾಹಕರನ್ನು  ಹೊಸದಾಗಿ ತನ್ನ ಸೇವಾ ಜಾಲಕ್ಕೆ ಸೇರ್ಪಡೆ ಮಾಡಿಕೊಂ­ಡಿದ್ದು ಒಟ್ಟು ಗ್ರಾಹಕರ ಸಂಖ್ಯೆಯನ್ನು 3.78 ಕೋಟಿಗೆ ಹೆಚ್ಚಿಸಿಕೊಂಡಿದೆ. ಅಂದಾಜು ರೂ.780 ಕೋಟಿ ಹೂಡಿಕೆಯ ಲಕ್ಷದೀಪ ಯೋಜನೆಯ  ಶೇ 26ರಷ್ಟು ಪಾಲು ಖರೀದಿಸುವ ಮೂಲಕ ಯುನಿ­ನಾರ್‌ನ ಸಂಪೂರ್ಣ ಷೇರು ಪಾಲು ಖರೀದಿಸಲು ಟೆಲಿನಾರ್‌ ಯೋಜನೆ ರೂಪಿಸಿದೆ.ಐಡಿಯಾ ಸೆಲ್ಯೂಲರ್‌ ಗ್ರಾಹಕರ ಸಂಖ್ಯೆ 11.6 ಲಕ್ಷದಷ್ಟು ಹೆಚ್ಚಿದ್ದು 13.77  ಕೋಟಿಗೆ ಏರಿಕೆ ಕಂಡಿದೆ. ಕಂಪೆನಿಯ ಮಾರುಕಟ್ಟೆ ಪಾಲು ಶೇ 18.79­-ರಷ್ಟಿದೆ. ದೇಶದ ಎರಡನೆಯ ಅತಿ ದೊಡ್ಡ ಮೊಬೈಲ್‌ ದೂರವಾಣಿ ಸೇವಾ ಸಂಸ್ಥೆ ವೊಡಾಫೋನ್‌ 9.82 ಲಕ್ಷ ಗ್ರಾಹಕರನ್ನು ಹೊಸದಾಗಿ ಸೇರ್ಪ­ಡೆ ಮಾಡಿಕೊಂ­ಡಿದ್ದು ಒಟ್ಟು ಚಂದಾ­ದಾರರ ಸಂಖ್ಯೆಯನ್ನು 16.82 ಕೋ­ಟಿಗೆ ಹೆಚ್ಚಿಸಿಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry