ಮೊಬೈಲ್ ಅಂತರ್ಜಾಲ ಬಳಕೆ ಹೆಚ್ಚಳ ನಿರೀಕ್ಷೆ

7

ಮೊಬೈಲ್ ಅಂತರ್ಜಾಲ ಬಳಕೆ ಹೆಚ್ಚಳ ನಿರೀಕ್ಷೆ

Published:
Updated:

ನವದೆಹಲಿ (ಪಿಟಿಐ): ಭಾರತದಲ್ಲಿ ಮೊಬೈಲ್‌ ಅಂತರ್ಜಾಲ ಬಳಕೆದಾರರ ಸಂಖ್ಯೆ ಮುಂಬರುವ ಮಾರ್ಚ್‌ ವೇಳೆಗೆ 15.5 ಕೋಟಿಗೆ ತಲುಪುವ ನಿರೀಕ್ಷೆ ಯಿದೆ.

ದೇಶದಲ್ಲಿ ಮೊಬೈಲ್‌  ಫೋನ್‌ನಲ್ಲಿ  ಅಂತರ್ಜಾಲ  ಬಳಕೆ ಕುರಿತು  ಇತ್ತೀಚೆಗೆ  ‘ಭಾರತೀಯ ಅಂತರ್ಜಾಲ ಮತ್ತು ಮೊಬೈಲ್ ಸೇವಾ ಸಂಸ್ಥೆ’(ಐಎಎಂಎಐ) ಮತ್ತು  ‘ಭಾರತೀಯ ಮಾರುಕಟ್ಟೆ ಸಂಶೋಧನಾ ಸಂಸ್ಥೆ’ (ಐಎಂಆರ್‌ಬಿ) ಮಾರುಕಟ್ಟೆ ಅಧ್ಯಯನ ನಡೆಸಿದ್ದು, ‘ಈ ಸಂಖ್ಯೆ ಜೂನ್‌ ವೇಳೆಗೆ 18.5 ಕೋಟಿಗೆ ಮುಟ್ಟುವ ಸಾಧ್ಯತೆ ಇದೆ’ ಎಂದು ಹೇಳಿವೆ.‘2013ರ ಅಕ್ಟೋಬರ್‌ನಲ್ಲಿ 11 ಕೋಟಿಯಷ್ಟಿದ್ದ ಮೊಬೈಲ್‌  ಫೋನ್‌ ಅಂತರ್ಜಾಲ ಬಳಕೆದಾರರ ಸಂಖ್ಯೆ ಡಿಸೆಂಬರ್‌ ವೇಳೆಗೆ 13 ಕೋಟಿ ತಲು ಪಿತ್ತು. 2014ರಲ್ಲಿ ಈ ಸಂಖ್ಯೆ ಪ್ರತಿ ತ್ರೈಮಾಸಿಕ ಅವಧಿಯಲ್ಲಿ ಶೇ 20ರಷ್ಟು ಹೆಚ್ಚುತ್ತಾ ಹೋಗುವ ನಿರೀಕ್ಷೆ ಇದೆ’ ಎಂದು ಐಎಎಂಎಐ ಮತ್ತು ಐಎಂ ಆರ್‌ಬಿ ವಿಶ್ವಾಸ ವ್ಯಕ್ತಪಡಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry