ಮೊಬೈಲ್: ಇರಲಿ ಎಚ್ಚರ

ಭಾನುವಾರ, ಜೂಲೈ 21, 2019
27 °C

ಮೊಬೈಲ್: ಇರಲಿ ಎಚ್ಚರ

Published:
Updated:

ಮೀನು ನೀರಿನಿಂದ ಹೊರಬಂದಾಗ ಚಡಪಡಿಸುವಂತೆ ಇಂದಿನ ಮಕ್ಕಳು ಕೂಡ ಮೊಬೈಲ್‌ಗೆ ಗಟ್ಟಿಯಾಗಿ ಅಂಟಿಕೊಂಡು ಬಿಟ್ಟಿದ್ದಾರೆ. ಪಾಲಕರೂ ಹಾಗೆಯೇ. ತಮ್ಮ ಮಕ್ಕಳು ಸೆಲ್ ಫೋನ್ ಬಳಕೆಯಲ್ಲಿ ಎಷ್ಟು `ಪರಿಣತರು~ ಎಂಬುದನ್ನು ಎದೆಯುಬ್ಬಿಸಿಕೊಂಡು ವರ್ಣಿಸುತ್ತಾರೆ. ಆದರೆ ಮೊಬೈಲ್ ವಿಕಿರಣದಿಂದ ಮಕ್ಕಳ ಮೆದುಳಿಗೆ ಯಾವ ರೀತಿ ಅಪಾಯವಾಗುತ್ತದೆ ಎಂಬುದು ಅವರಿಗೆ ಗೊತ್ತಿರುವುದಿಲ್ಲ. ಮೊಬೈಲ್ ಎಂಬುದು ಆಟಿಕೆಯಲ್ಲ ಅಥವಾ ಮಕ್ಕಳು ಕೈಗೆ ಸಿಕ್ಕಾಗ ಬಳಸುವ ಗ್ಯಾಜೆಟ್ ಕೂಡ ಅಲ್ಲ.ಇಂದಿನ ಕಾಲದಲ್ಲಿ ದೊಡ್ಡವರಿಗಿಂತ ಮಕ್ಕಳು ಹೆಚ್ಚು ಸಮಯವನ್ನು ಮೊಬೈಲ್ ಜೊತೆ ಕಳೆಯುತ್ತಾರೆ. ಪರಿಣಾಮವಾಗಿ, ದುಪ್ಪಟ್ಟು ವಿಕಿರಣವನ್ನು ತಮ್ಮ ತಲೆಯ ಮೂಲಕ ಹೀರಿಕೊಳ್ಳುತ್ತಾರೆ. ಐದು ವರ್ಷದ ಮಗುವಿನ ಮೆದುಳಿನ ಕಾರ್ನಿಯಲ್ ಎಲುಬು ಮತ್ತು ಚರ್ಮ ದೊಡ್ಡವರ ಮೆದುಳಿಗಿಂತ ತೆಳುವಾಗಿರುತ್ತವೆ. ಮೊಬೈಲ್ ಫೋನ್ ಟೂ ವೇ ಮೈಕ್ರೊವೇವ್ ರೇಡಿಯೊ ಆಗಿದ್ದು, ಬಿಟ್ಟೂ ಬಿಟ್ಟೂ ಬರುವ ಮತ್ತು ಅಭದ್ರಗೊಳಿಸುವ ಪಲ್ಸ್‌ಗಳಿಂದಾಗಿ ಡಿಎನ್‌ಎ ಸಾಮರ್ಥ್ಯವನ್ನು ಒಡೆಯುವ, ಮೆದುಳಿನ ರಕ್ಷಣಾ ಬೇಲಿಯನ್ನು ದುರ್ಬಲಗೊಳಿಸುವ, ಪ್ರತಿಕ್ರಿಯಾತ್ಮಕ ಹಾಗೂ ಹಾನಿಕಾರಕ ಪರಮಾಣು ಗುಚ್ಛಗಳನ್ನು ಬಿಡುಗಡೆ ಮಾಡುವ ಶಕ್ತಿಯನ್ನು ಹೊಂದಿದೆ.
ಸಂತಾನಹೀನತೆ...! 

ಮೊಬೈಲ್ ಬಳಕೆಗೆ ಸಂಬಂಧಿಸಿದಂತೆ ಹೆಚ್ಚು ಚರ್ಚೆಗೊಳಪಡದ ಇನ್ನೊಂದು ಸಮಸ್ಯೆ ಎಂದರೆ ಸಂತಾನಹೀನತೆ. ಈ ನಿಟ್ಟಿನಲ್ಲಿ ಅನೇಕ ಸಂಶೋಧನೆಗಳು ನಡೆದಿವೆ.ಕಾಯಂ ಆಗಿ ಸೆಲ್ ಫೋನ್ ಬಳಸದವರಿಗೆ ಹೋಲಿಸಿದರೆ, ಹೆಚ್ಚಾಗಿ ಮೊಬೈಲ್ ಉಪಯೋಗಿಸುವ ಪುರುಷರ ವೀರ್ಯಾಣು ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ ಎಂದು ಅಮೆರಿಕನ್ ಸೊಸೈಟಿ ಫಾರ್ ರಿಪ್ರೊಡಕ್ಟಿವ್ ಮೆಡಿಸಿನ್ ಅಧ್ಯಯನವು ತಿಳಿಸಿದೆ.

ಇದು ಇಲ್ಲಿಗೇ ನಿಲ್ಲದು. ಕಿಸೆಯಲ್ಲಿ ಮೊಬೈಲ್ ಅನ್ನು ಚಾಲೂ ಸ್ಥಿತಿಯಲ್ಲಿ ಇಟ್ಟುಕೊಂಡರೂ ಹಾನಿ ತಪ್ಪಿದ್ದಲ್ಲ ಎಂದು ಅಧ್ಯಯನ ಎಚ್ಚರಿಸಿದೆ. ಏಕೆಂದರೆ ಮೊಬೈಲ್ ಫೋನ್‌ಗಳು ಕಾಲಕಾಲಕ್ಕೆ ಸೆಲ್ ಟವರ್‌ನೊಂದಿಗೆ ಸಂಪರ್ಕ ಹೊಂದಲು ಯತ್ನಿಸುತ್ತವೆ. ಸೆಲ್ ಫೋನ್ ವಿಕಿರಣವು ಉತ್ಪಾದಿಸುವ ಡಿಎನ್‌ಎಯು ವೀರ್ಯ ಜೀವಕೋಶಗಳಲ್ಲಿ ವಿಭಜನೆಯಾಗಿ, ಬದಲಾವಣೆ ಉಂಟುಮಾಡಿ ಕ್ಯಾನ್ಸರ್‌ಗೂ ಕಾರಣವಾಗಬಲ್ಲದು.ಹ್ಯಾಂಡ್ಸ್-ಫ್ರೀ ಸಾಧನ ಬಳಕೆಯಿಂದ ಮೊಬೈಲ್ ದೇಹದಿಂದ ದೂರ ಇರುತ್ತದಾದ್ದರಿಂದ ಇದು ಸುರಕ್ಷಿತ ಎಂದು ಹೇಳಲಾಗುತ್ತದೆ. ಆದರೂ, ಕಿಸೆಯಲ್ಲಿ ಮೊಬೈಲ್ ಇರಿಸಿಕೊಳ್ಳುವುದು ಅಷ್ಟೇನೂ ಒಳ್ಳೆಯದಲ್ಲ. ಕಿಸೆಯಲ್ಲಿ, ಅಂಡದ ಬಳಿ ಮೊಬೈಲ್ ಇರಿಸಿಕೊಂಡರೆ ಸಂತಾನಶಕ್ತಿ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಕ್ಲೀವ್‌ಲ್ಯಾಂಡ್ ಕ್ಲಿನಿಕ್‌ನ ಸಂಶೋಧಕರ ಅಧ್ಯಯನ ಹೇಳಿದೆ.ಮಾತನಾಡುತ್ತಿರುವಾಗ ಮೊಬೈಲ್ ಅನ್ನು ಕಿಸೆಯಲ್ಲಿ ಇಟ್ಟುಕೊಂಡರೆ ಅಥವಾ ಸೊಂಟದ ಬೆಲ್ಟ್‌ಗೆ ಸಿಕ್ಕಿಸಿಕೊಂಡಿದ್ದರೆ ಅಂಡವನ್ನು ಎಲೆಕ್ಟ್ರೊಮ್ಯೋಗ್ನೆಟಿಕ್ ವಿಕಿರಣಕ್ಕೆ ಒಡ್ಡಿದಂತಾಗುತ್ತದೆ ಎಂದೂ ಈ ಅಧ್ಯಯನ ಹೇಳಿದೆ. ಹೆಚ್ಚಿನವರು ಬಳಸುವ, ಸುರಕ್ಷಿತ ಎಂದು ಹೇಳಲಾಗುವ ಬ್ಲೂಟೂಥ್‌ನ ಇನ್ನೊಂದು ಮುಖವನ್ನು ಇದು ಅನಾವರಣಗೊಳಿಸುತ್ತದೆ.ನಾವು ಸೆಲ್ ಫೋನ್‌ನ ಅಧಿಕ ಮಟ್ಟದ ವಿಕಿರಣದಿಂದ ಸುತ್ತುವರಿದಿದ್ದೇವೆ; ಮೊಬೈಲ್ ಗೋಪುರಗಳಿರಬಹುದು ಅಥವಾ ಸೆಲ್ ಫೋನ್ ಸಾಧನವೇ ಆಗಿರಬಹುದು.ಇದರೊಂದಿಗೆ ವೈಫೈ ಸಾಧನಗಳು ಮತ್ತು ಕಾರ್ಡ್‌ಲೆಸ್ ಫೋನ್‌ಗಳೂ ಈ ಸಂಕಟಕ್ಕೆ ತುಪ್ಪ ಸುರಿಯುತ್ತವೆ. ಎಲೆಕ್ಟ್ರೊಮ್ಯೋಗ್ನೆಟಿಕ್ ವಿಕಿರಣಕ್ಕೆ ಈ ರೀತಿ ಅತಿಯಾಗಿ ಒಡ್ಡಿಕೊಳ್ಳುವ ಪರಿಸ್ಥಿತಿಯಿಂದಾಗಿ ಪುರುಷರ ಸಂತಾನಹೀನತೆ ಸಮಸ್ಯೆ ಪ್ರಮಾಣ ಹೆಚ್ಚಾಗಿರುವುದರಲ್ಲಿ ಅಚ್ಚರಿಯೇನೂ ಇಲ್ಲ. `ಜಾಗತಿಕ ತಾಪಮಾನಕ್ಕೆ ಸೆಲ್ ಫೋನ್‌ಗಳ ಇಎಂಆರ್ ಕೂಡ ಒಂದು ಕಾರಣ~ ಎಂದು ಹೇಳುತ್ತದೆ ವಿಕಿರಣ ಸಮಸ್ಯೆಗಳಿಗೆ ಪರಿಹಾರ ನೀಡುವ ಉಪಕರಣಗಳ ತಯಾರಿಕೆಯಲ್ಲಿ ತೊಡಗಿರುವ ಇ ಬಯೊ ವರ್ಲ್ಡ್ ಕಂಪೆನಿ.

ಮಕ್ಕಳ ತಲೆಯ ಅಸ್ಥಿ ಮಜ್ಜೆ ದೊಡ್ಡವರಿಗಿಂತ ಹತ್ತು ಪಟ್ಟು ಹೆಚ್ಚು ವಿಕಿರಣವನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ದೊಡ್ಡವರಷ್ಟು ಇರುವುದಿಲ್ಲವಾದ್ದರಿಂದ ಅವರಿಗೆ ಎಲೆಕ್ಟ್ರೊಮ್ಯೋಗ್ನೆಟಿಕ್ ವಿಕಿರಣದ ಅಪಾಯ ಕೂಡಾ ಹೆಚ್ಚು. ಮಕ್ಕಳ ತಲೆ ತೆಳುವಾಗಿರುತ್ತದೆ ಮತ್ತು ಇನ್ನೂ ಬೆಳವಣಿಗೆಯ ಹಂತದಲ್ಲಿರುತ್ತದೆ.ಹೀಗಾಗಿ ವಯಸ್ಸು ಸಣ್ಣದಿದ್ದಷ್ಟೂ ಎಲೆಕ್ಟ್ರೊಮ್ಯೋಗ್ನೆಟಿಕ್ ವಿಕಿರಣ ಪ್ರವೇಶಿಸುವ ಆಳದ ಪ್ರಮಾಣ ಹೆಚ್ಚು. ಆದ್ದರಿಂದ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸೆಲ್ ಫೋನನ್ನು ಸಾಧ್ಯವಿದ್ದಷ್ಟೂ ಕಡಿಮೆ ಬಳಸಬೇಕು. ಏಕೆಂದರೆ, ಅವರಲ್ಲಿ ಮೆದುಳಿನ ಕ್ಯಾನ್ಸರ್ ಅಪಾಯ ಅಧಿಕ.ಸಣ್ಣ ವಯಸ್ಸಿನಲ್ಲಿಯೇ (ಹದಿಹರೆಯದವರು ಅಥವಾ ಯುವಕರು) ಮೊಬೈಲ್ ಉಪಯೋಗಿಸಲು ಆರಂಭಿಸಿದವರಲ್ಲಿ ಮೆದುಳಿನ ಕ್ಯಾನ್ಸರ್ ಉಂಟಾಗುವ ಸಂಭವ ಶೇಕಡಾ 420ರಷ್ಟು ಅಧಿಕ ಎಂದು ಸ್ವೀಡನ್ನಿನ ಸಂಶೋಧಕರು ಕಂಡುಕೊಂಡಿದ್ದಾರೆ. ಹೀಗಾಗಿ, ಜರ್ಮನಿ, ಇಸ್ರೇಲ್, ರಷ್ಯ, ಫ್ರಾನ್ಸ್, ಬೆಲ್ಜಿಯಂ ಮುಂತಾದ ದೇಶಗಳು ಮಕ್ಕಳು ಮೊಬೈಲ್ ಬಳಸುವುದಕ್ಕೆ ಉತ್ತೇಜನ ನೀಡುತ್ತಿಲ್ಲ. ಮೈಕ್ರೊವೇವ್‌ಗಳಿಂದಾಗಿ ಮಕ್ಕಳಿಗೆ ಬರಬಹುದಾದ ಇತರ ತೊಂದರೆಗಳೆಂದರೆ, ತಲೆನೋವು, ಏಕಾಗ್ರತೆಯ ಕೊರತೆ, ಸ್ಮರಣಶಕ್ತಿ ನಷ್ಟ, ಶ್ರವಣ ನ್ಯೂನತೆ, ಆಟಿಸಂ, ವರ್ತನಾ ಬದಲಾವಣೆ, ಕಿವಿಯಲ್ಲಿ ಗುಂಯ್‌ಗುಟ್ಟಿದಂತಾಗುವುದು, ಪಾರ್ಕಿನ್ಸನ್, ಅಲ್ಜೀಮರ್, ನಿದ್ರಾಹೀನತೆ ಮತ್ತು ನರ ವ್ಯವಸ್ಥೆಗೆ ಸಂಬಂಧಪಟ್ಟ ಅನೇಕ ತೊಂದರೆಗಳು. ಮಕ್ಕಳಲ್ಲಿ ಇದು ಮೂರ್ಛೆ ರೋಗವನ್ನೂ ಉಂಟುಮಾಡಬಹುದು ಎಂದು ತಜ್ಞರು ಹೇಳುತ್ತಾರೆ.

ಮುನ್ನೆಚ್ಚರಿಕೆ ಹೀಗಿರಲಿ

ಹೆಡ್‌ಸೆಟ್, ಬ್ಲೂಟೂಥ್ ಬಳಕೆ ಅಥವಾ ಸ್ಪೀಕರ್ ಫೋನ್‌ಗೆ ಕಿವಿಗೊಡುವ ಮೂಲಕ ಮೊಬೈಲ್ ಫೋನ್ ಅನ್ನು ದೇಹದಿಂದ ಆದಷ್ಟೂ ದೂರದಲ್ಲಿ ಇರಿಸಲು ಯತ್ನಿಸಬೇಕು.ಮಾತನಾಡದಿದ್ದಾಗ ವೈರ್‌ಲೆಸ್ ಅನ್ನು ತೆಗೆಯಲು ಮರೆಯಬಾರದು. ಏಕೆಂದರೆ, ಈ ಸಾಧನ ಕಡಿಮೆ ವಿಕಿರಣ ಹೊರಸೂಸುತ್ತದೆ ಎನ್ನಲಾಗಿದೆ.ಸೆಲ್ ಫೋನ್ ದೇಹದಿಂದ ದೂರ ಇರಬೇಕಾದುದು ಅವಶ್ಯ. ಆದರೆ, ಮೊಬೈಲನ್ನು ಪ್ಯಾಂಟ್ ಕಿಸೆಯಲ್ಲಿ ಇಟ್ಟುಕೊಳ್ಳುವುದು ಅಥವಾ ಸೊಂಟದ ಬೆಲ್ಟ್‌ಗೆ ಸಿಕ್ಕಿಸಿಕೊಳ್ಳುವುದು ಸಲ್ಲದು.ಮೊಬೈಲ್‌ನಲ್ಲಿ ಮಾತನಾಡುವ ಅವಧಿ ಸಂಕ್ಷಿಪ್ತವಾಗಿರಲಿ. ಈ ಮೂಲಕ ಮಕ್ಕಳು ಮೊಬೈಲ್‌ಗೆ ಒಡ್ಡಿಕೊಳ್ಳುವುದನ್ನು ಪಾಲಕರು ನಿಯಂತ್ರಿಸಬೇಕು.ನೆಟ್‌ವರ್ಕ್ ಉತ್ತಮ ಇರುವಲ್ಲಿ ಮೊಬೈಲ್ ಬಳಸಬೇಕು.ಮಕ್ಕಳು, ಹದಿಹರೆಯದವರು ಲ್ಯಾಂಡ್‌ಲೈನ್ ಬಳಸುವುದು ಮೇಲು.ಸಿಗ್ನಲ್ ದುರ್ಬಲವಾಗಿದ್ದಲ್ಲಿ ಕರೆ ಮಾಡಬಾರದು. ಸಿಗ್ನಲ್‌ಗಳನ್ನು ಕಂಡುಕೊಳ್ಳುವಾಗ ಮೊಬೈಲ್ ಫೋನ್‌ಗಳು ಅಧಿಕ ಎಲೆಕ್ಟ್ರೊಮ್ಯೋಗ್ನೆಟಿಕ್ ವಿಕಿರಣವನ್ನು ಹೊರಸೂಸುತ್ತವೆ.ವಾಹನ ಚಾಲನೆ ಮಾಡುವಾಗ ಮೊಬೈಲ್‌ನಲ್ಲಿ ಮಾತನಾಡಬಾರದು. ಏಕೆಂದರೆ, ಆ ಸಂದರ್ಭದಲ್ಲಿ ಫೋನ್ ಸಂಕೇತವು ಅನೇಕ ವೈರ್‌ಲೆಸ್ ಟವರ್‌ಗಳಿಗೆ ಸಂಪರ್ಕ ಹೊಂದುವ ಯತ್ನ ನಡೆಸುವುದರಿಂದ ಎಲೆಕ್ಟ್ರೊಮ್ಯೋಗ್ನೆಟಿಕ್ ವಿಕಿರಣದ ಪ್ರಮಾಣ ಹೆಚ್ಚಿರುತ್ತದೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry