ಮೊಬೈಲ್ ಕಂಪೆನಿ ಜಾಹೀರಾತು: ವಿರುದ್ಧ ನಟ ಶೈನಿ ಕೆಂಗಣ್ಣು
ಮುಂಬೈ(ಪಿಟಿಐ):ಬಾಲಿವುಡ್ ನಟ ಶೈನಿ ಅಹುಜಾ ಮೈಕ್ರೊಮ್ಯಾಕ್ಸ್ ಮೊಬೈಲ್ ಕಂಪೆನಿಯ ಜಾಹೀರಾತಿನ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಕಳೆದ ವಾರ ಮೈಕ್ರೊಮ್ಯಾಕ್ಸ್ ಕಂಪೆನಿಯು ದೀಪಾವಳಿ ನಿಮಿತ್ತ ಪ್ರಸಾರ ಮಾಡಿರುವ ವಾಣಿಜ್ಯ ಜಾಹೀರಾತಿನಲ್ಲಿ ತೇಜೋವಧೆ ಮಾಡುವಂತಹ ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಮ್ಮ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
ಹೀಗಿರುವಾಗ ತಮ್ಮ ತೇಜೋವಧೆ ಮಾಡುವಂತಹ ಜಾಹೀರಾತು ನ್ಯಾಯಾಂಗ ನಿಂದನೆ ಆಗುತ್ತದೆ ಎಂದು ಹೇಳಿದ್ದಾರೆ. ಶೈನಿ ತಮ್ಮ ಮನೆಗೆಲಸದವಳ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ವಿಚಾರಣಾ ನ್ಯಾಯಾಲಯದಿಂದ ಈಗಾಗಲೇ ಏಳು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಟರ್ಕಿಯಲ್ಲಿ 300 ಭಾರತೀಯರು ಸುರಕ್ಷಿತ
ನವದೆಹಲಿ (ಐಎಎನ್ಎಸ್): ಭಾರಿ ಭೂಕಂಪ ಸಂಭವಿಸಿರುವ ಟರ್ಕಿಯಲ್ಲಿ ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ಸೋಮವಾರ ವಿದೇಶಾಂಗ ಸಚಿವಾಲಯ ತಿಳಿಸಿದೆ.
`ಅಂಕಾರದಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿಗೆ ದೊರೆತಿರುವ ಮಾಹಿತಿ ಪ್ರಕಾರ ಭಾರತೀಯ ಪ್ರಜೆಗಳೆಲ್ಲರೂ ಸುರಕ್ಷಿತವಾಗಿದ್ದಾರೆ~ ಎಂದು ಸಚಿವಾಲಯ ಹೇಳಿದೆ. ಟರ್ಕಿಯಲ್ಲಿ ಸುಮಾರು 300 ಜನ ಭಾರತೀಯ ಪ್ರಜೆಗಳು ನೆಲೆಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.