ಶುಕ್ರವಾರ, ನವೆಂಬರ್ 22, 2019
27 °C

ಮೊಬೈಲ್ ಗೋಪುರ ಏರಿದ ಶಾಸಕ

Published:
Updated:

ಜೈಪುರ (ಪಿಟಿಐ): ಸಾಮಾನ್ಯ ಜನರು ಬೇಡಿಕೆ ಈಡೇರಿಕೆಗಾಗಿ ಮರ, ವಿದ್ಯುತ್ ಕಂಬಗಳನ್ನು ಏರಿ  ಪ್ರತಿಭಟನೆ ನಡೆಸುವುದು ಸಾಮಾನ್ಯ.ಆದರೆ ರಾಜಸ್ತಾನದ ಚಿತ್ತೋರ್‌ಗಡ ಜಿಲ್ಲೆಯ ಬಡಿಸದ್ರಿ ಪ್ರದೇಶದಲ್ಲಿ ತಮ್ಮ ಕ್ಷೇತ್ರದ ಜನರ ಆರೋಗ್ಯ ಕಾಪಾಡಲು  ಮೂರು  ಮೊಬೈಲ್ ಗೋಪುರಗಳನ್ನು ಸ್ಥಳಾಂತರ ಮಾಡುವಂತೆ ಸೋಮವಾರ ಆಡಳಿತಾರೂಢ ಕಾಂಗ್ರೆಸ್ ಶಾಸಕ ಪ್ರಕಾಶ್ ಚಂದ್ರ ಚೌಧರಿ ಮೊಬೈಲ್ ಗೋಪುರ ಏರಿ  ಪ್ರತಿಭಟನೆ ನಡೆಸಿದ್ದಾರೆ.ಶಾಸಕರು ಗೋಪುರ ಏರಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದ ತಕ್ಷಣ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಅವರನ್ನು ಮನವೊಲಿಸಲು ಪ್ರಯತ್ನಿಸಿದರು.  ಆದರೆ ಶಾಸಕ ಚೌಧರಿ ಇದಕ್ಕೆ ಒಪ್ಪದೆ ಐದು ಗಂಟೆಗಳ ಕಾಲ ಅಧಿಕಾರಿಗಳನ್ನು ಕಾಡಿದರು.  ಅವರಿಂದ ಭರವಸೆ ಸಿಕ್ಕ ನಂತರ ಗೋಪುರದಿಂದ ಕೆಳಗಿಳಿದರು ಎಂದು ಜಿಲ್ಲಾಧಿಕಾರಿ ಜಗದೀಶ್  ನಾರಾಯಣ     ಹೇಳಿದ್ದಾರೆ.ಮೊಬೈಲ್ ಗೋಪುರಗಳು ಹೊರಸೂಸುವ ವಿಕಿರಣಗಳಿಂದ  ಕ್ಷೇತ್ರದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಆದ ಕಾರಣ ಅದನ್ನು ಬೇರೆ ಸ್ಥಳಕ್ಕೆ ವರ್ಗಾಯಿಸುವಂತೆ ದೂರು ನೀಡಿದ್ದರೂ ಅಧಿಕಾರಿಗಳು ಬಗೆಹರಿಸಿಲ್ಲ. ಅದರಿಂದಾಗಿ ಗೋಪುರ ಏರಬೇಕಾಯಿತು ಎಂದು ಶಾಸಕರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)