ಮೊಬೈಲ್ ಟವರ್‌ನಿಂದ ಹಾನಿ

7

ಮೊಬೈಲ್ ಟವರ್‌ನಿಂದ ಹಾನಿ

Published:
Updated:

ಕೋಲಾರ: ಮೊಬೈಲ್ ಟಾವರ್‌ಗಳಿಂದ ಹೊರಸೂಸುವ ವಿಕಿರಣಗಳು ಸುತ್ತಮುತ್ತಲಿನ ಪ್ರಾಣಿ-ಪಕ್ಷಿಗಳ ಮೇಲೆ ದುಷ್ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಗೋಪುರಗಳ ಸ್ಥಾಪನೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಬಂಗಾರಪೇಟೆ ತಾಲ್ಲೂಕು ಅಭಿವೃದ್ಧಿ ಸಮಿತಿ  ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ಬಾಬಣ್ಣ ಅವರಿಗೆ ಶನಿವಾರ ಮನವಿ ಸಲ್ಲಿಸಿದರು. ಮೊಬೈಲ್ ಹಾಗೂ ದೂರವಾಣಿ ಸಂಪರ್ಕ ಗೋಪುರಗಳು ಹೊರಸೂಸುವ ವಿಕಿರಣಗಳು ಆಯಾ ವ್ಯಾಪ್ತಿ ಪ್ರದೇಶದ ಜನತೆಯಲ್ಲಿ ದೈಹಿಕ ಸಮಸ್ಯೆ ತರುತ್ತವೆ. ಈ ಹಿನ್ನೆಲೆಯಲ್ಲಿ ಮಕ್ಕಳು, ಗರ್ಭಿಣಿಯರು, ವಯೊವೃದ್ಧರ ಮೇಲೂ ಸಹ ದುಷ್ಪರಿಣಾಮ ಬೀರುವುದು ಎಂದು ಅಂತರ್ ಸಚಿವಾಲಯ ಸಮಿತಿ (ಐಎಂಸಿ) ವರದಿ ಮಾಡಿದೆ ಎಂದು ತಿಳಿಸಿದರು. ವಿಕಿರಣ ಪ್ರಭಾವಕ್ಕೆ ಸಿಲುಕಿ ಈಗಾಗಲೇ  ಪಕ್ಷಿಗಳ ಹಾಗೂ ವಿವಿಧ ಜೀವ ಪ್ರಭೇದಗಳ  ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ. ಇಂತಹ ಮಾರಕ ಗೋಪುರಗಳ ಕುರಿತು ಅನುಸರಿಸುತ್ತಿರುವ ನಿಯಮಾವಳಿಗಳನ್ನು ಪರಿಷ್ಕರಿಸುವಂತೆ ಸಮಿತಿಯ ಕಾರ್ಯಕರ್ತರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮುನಿನಾರಾಯಣಪ್ಪ, ಎಂ.ಎನ್.ಭಾರದ್ವಾಜ್, ನಾಗರತ್ನ, ಟಿ.ಎಸ್.ಎಸ್. ಆಜಂ ಷರೀಫ್, ಎಜಾಜ್‌ಖಾನ್, ಖಾಜಾ, ಅಮ್ಜದ್, ಗೋಪಿ, ಕಿರಣ್, ಅಯ್ಯಪ್ಪ, ಕುಪ್ಪನಹಳ್ಳಿ ಆನಂದ್, ಶ್ರೀನಿವಾಸ್, ಅಂಬರೀಶ್, ಮೆಹಬೂಬ್ ಪಾಷ, ಬಾಬಾ, ಚಂದ್ರ, ಜಗದೀಶ್, ಅನಿಲ್ ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry