ಮೊಬೈಲ್ ಟೈಗರ್ ಟೆಕ್ಸ್ಟ್ :ಹೊಸ ತಲೆನೋವು

ಶುಕ್ರವಾರ, ಜೂಲೈ 19, 2019
23 °C

ಮೊಬೈಲ್ ಟೈಗರ್ ಟೆಕ್ಸ್ಟ್ :ಹೊಸ ತಲೆನೋವು

Published:
Updated:

ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಮೊಬೈಲ್ `ಎಸ್‌ಎಂಎಸ್~ಗಳ ತೀವ್ರ ನಿಗಾ ವಹಿಸುತ್ತಿರುವ ಭದ್ರತಾ ಸಿಬ್ಬಂದಿಗೆ ಈಗ `ಮೊಬೈಲ್ ಟೈಗರ್ ಟೆಕ್ಸ್ಟ್~ ತಂತ್ರಾಂಶ ಹೊಸ ತಲೆನೋವು ಸೃಷ್ಟಿಸಿದೆ. ಇದನ್ನು ಅಮೆರಿಕ ಮೂಲದ ಕಂಪೆನಿಯೊಂದು ಅಭಿವೃದ್ಧಿ ಪಡಿಸುತ್ತಿದೆ. ಟೈಗರ್ ಟೆಕ್ಸ್ಟ್ ತಂತ್ರಾಂಶ ಬಳಸಿ  ಸಂದೇಶ ಕಳುಹಿಸುವ ವ್ಯಕ್ತಿ ಸಂದೇಶದ ಸ್ವೀಕರಿಸುವ ವ್ಯಕ್ತಿಯ ಮೊಬೈಲ್‌ನಲ್ಲಿರುವ ಎಲ್ಲ ಮೆಸೇಜ್, ವಿಡಿಯೊ ಮತ್ತು ಚಿತ್ರಗಳನ್ನು ಡಿಲೀಟ್ ಮಾಡಬಹುದಾಗಿದೆ. ಈ ರೀತಿ ಡಿಲೀಟ್ ಮಾಡಿದರೆ ನಂತರ ಭದ್ರತಾ ಸಂಸ್ಥೆಗಳಿಗೆ `ಸಂದೇಶ~ ಬಂದ ಮೂಲ ಮೊಬೈಲ್ ಸಂಖ್ಯೆ ಪತ್ತೆಯಾಗುವುದಿಲ್ಲ. `ಟೈಗರ್ ಟೆಕ್ಟ್ಸ್~ ತಂತ್ರಾಂಶ ಬಳಕೆದಾರನಿಗೆ ತನ್ನ ಖಾಸಗಿ ಸಂದೇಶಗಳ ಮೇಲೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುತ್ತದೆ. ಇದರಲ್ಲಿರುವ `ಆಟೊ ಡಿಲೀಟ್~ ಸೌಲಭ್ಯ ಬಳಸಿ ಯಾವಾಗ ಬೇಕಾದರೂ, ಸಂದೇಶ ಸ್ವೀಕರಿಸುವ ವ್ಯಕ್ತಿಯ ಮೊಬೈಲ್‌ನಿಂದ ಮಸೇಜ್ ಅನ್ನು ಅಳಿಸಿ ಹಾಕಬಹುದಾಗಿದೆ. ಆದರೆ, ಈ ತಂತ್ರಾಂಶವನ್ನು ಗ್ರಾಹಕ ಬಳಕೆಗೆ ಮುಕ್ತಗೊಳಿಸುವ ಮುನ್ನ ನಿಗಾ ವ್ಯವಸ್ಥೆ ತಂತ್ರಜ್ಞಾನವನ್ನು ಒದಗಿಸುವಂತೆ  ಭದ್ರತಾ ಸಂಸ್ಥೆಗಳು ಸೂಚಿಸಿವೆ. ಈಗಾಗಲೇ ಐಫೋನ್, ಬ್ಲ್ಯಾಕ್‌ಬೆರಿ, ಆಂಡ್ರಾಯ್ಡ ಮೆಸೇಜ್ ಸೇವೆಗಳ ನಿಗಾ ವ್ಯವಸ್ಥೆಯ ಬಗ್ಗೆ ಭದ್ರತಾ ಸಂಸ್ಥೆಗಳು ಪರಿಶೀಲನೆ ನಡೆಸುತ್ತಿವೆ.       

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry