ಮೊಬೈಲ್ ಫೋನ್ ಸ್ಫೋಟ: ಆತಂಕ

7

ಮೊಬೈಲ್ ಫೋನ್ ಸ್ಫೋಟ: ಆತಂಕ

Published:
Updated:

ಮುಂಡಗೋಡ (ಉತ್ತರ ಕನ್ನಡ):  ಅಂಗಿಯ ಜೇಬಿನಲ್ಲಿದ್ದ ಮೊಬೈಲ್ ಏಕಾಏಕಿ ಸ್ಫೋಟವಾಗಿ ಕೆಲ ಹೊತ್ತು ಆತಂಕದ ವಾತಾವರಣ ಉಂಟಾದ ಘಟನೆ ತಾಲ್ಲೂಕಿನ ಚಿಗಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.ಗೋವಿಂದ ನ್ಯಾಸರ್ಗಿ ಎಂಬುವವರು ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡು ತನ್ನ ಗೆಳೆಯರೊಂದಿಗೆ ಮಾತನಾಡುತ್ತಿರುವಾಗ ಒಮ್ಮೆಲೇ ಪಟಾಕಿ ಸಿಡಿದಂಥ ಶಬ್ದ ಕೇಳಿ ಜೇಬಿನಿಂದ ಹೊಗೆ ಬರಲಾರಂಭಿಸಿದೆ. ಇದರಿಂದ ಗಾಬರಿಯಾದಗೋವಿಂದ ಅವರು ಅಂಗಿ ಬಿಚ್ಚಿ ನೋಡಿದಾಗ ಮೊಬೈಲ್ ಬ್ಯಾಟರಿ ಸಂಪೂರ್ಣ ಕರಕಲಾಗಿ ಜೇಬು ಸುಟ್ಟು ಹೋಗಿತ್ತು. ಆದರೆ, ಯಾವುದೇ ರೀತಿಯ ಗಾಯವಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry