ಮೊಬೈಲ್ ಬಳಕೆ-ಟೈಮ್ ನಿಯತಕಾಲಿಕ ಸಮೀಕ್ಷೆ

7

ಮೊಬೈಲ್ ಬಳಕೆ-ಟೈಮ್ ನಿಯತಕಾಲಿಕ ಸಮೀಕ್ಷೆ

Published:
Updated:

ಮೊಬೈಲ್ ಫೋನ್ ಬಳಕೆದಾರರ ಕುರಿತು ಇತ್ತೀಚೆಗೆ `ಟೈಮ್~ ನಿಯತಕಾಲಿಕ ಜಾಗತಿಕ ಮಟ್ಟದಲ್ಲಿ ಸಮೀಕ್ಷೆನಡೆಸಿತ್ತು. ಈ ಅಧ್ಯಯನ ವರದಿಯಲ್ಲಿರುವ ಹಲವು ಅಂಶಗಳು ಕುತೂಹಲಕಾರಿಯಾಗಿವೆ. `ನಿಮ್ಮ ಮೊಬೈಲ್ ಫೋನ್ ವಿಶ್ವವನ್ನೇ ಬದಲಾಯಿಸಲು ಇರುವ 10 ದಾರಿಗಳು~ ಎನ್ನುವುದು ಈ ಅಧ್ಯಯನದ ಶೀರ್ಷಿಕೆಯಾಗಿತ್ತು.`ಮೊಬೈಲ್ ಹೇಗೆ ದೇಶವೊಂದರ ಆರ್ಥಿಕತೆ, ಸಂಸ್ಕೃತಿ, ಜೀವನಶೈಲಿ, ರಾಜಕೀಯ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ~ ಎನ್ನುವುದನ್ನು ತಿಳಿಯುವುದೇ ಈ ಅಧ್ಯಯನದ ಉದ್ದೇಶವಾಗಿತ್ತು.ಬ್ರೆಜಿಲ್, ಚೀನಾ, ಭಾರತ, ಇಂಡೊನೇಷಿಯಾ, ಕೊರಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಅಮೆರಿಕ ಸೇರಿದಂತೆ ಪ್ರವರ್ಧಮಾನಕ್ಕೆ ಬರುತ್ತಿರುವ ಹಲವು ದೇಶಗಳಲ್ಲಿ ಈ ಸಮೀಕ್ಷೆ ನಡೆಯಿತು. ಈ ಅಧ್ಯಯನ ವಿವರಗಳು ಇತ್ತೀಚಿನ `ಟೈಮ್~ ಆವೃತ್ತಿಯಲ್ಲಿ ಪ್ರಕಟಗೊಂಡಿವೆ. ಭಾರತಕ್ಕೆ ಸಂಬಂಧಿಸಿದ ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ. * ಭಾರತದಲ್ಲಿ ಶೇ 81ರಷ್ಟು ಮಂದಿ ಮೊಬೈಲ್ ಬಳಕೆದಾರರು ಪ್ರತಿ 1 ಗಂಟೆಗೆ ಒಮ್ಮೆಯಾದರೂ ತಮ್ಮ ಹ್ಯಾಂಡ್‌ಸೆಟ್ ಪರಿಶೀಲಿಸಿರುತ್ತಾರೆ.  ಪ್ರತಿ 30 ನಿಮಿಷಗಳಿಗೊಮ್ಮೆ ಮೊಬೈಲ್ ನೋಡುವವರ ಸಂಖ್ಯೆ ಶೇ 63ರಷ್ಟಿದೆ. * ಶೇ 76ರಷ್ಟು ಬಳಕೆದಾರರು ಪ್ರತಿ ವಾರ 4ರಿಂದ 5 ಬಾರಿ ತಮ್ಮ ಮೊಬೈಲ್ ಮೂಲಕವೇ ಇಂಟರ್‌ನೆಟ್ ಬಳಸುತ್ತಾರೆ. 5 ವರ್ಷಗಳ ಹಿಂದೆ ಮೊಬೈಲ್ ಮೂಲಕ ಇಂಟರ್‌ನೆಟ್ ಬಳಸುವವರ ಸಂಖ್ಯೆ ಶೇ 36ರಷ್ಟಿತ್ತು. * ಶೇ 69ರಷ್ಟು ಜನರು ತಮ್ಮ ಪ್ರಯಾಣದ ನಡುವೆ ಮೊಬೈಲ್ ಬಳಸುತ್ತಾರೆ. ಶೇ 47ರ ಷ್ಟು ಜನರು ಚಿತ್ರಮಂದಿರದಲ್ಲಿ ಇದ್ದಾಗಲೂ ಮೊಬೈಲ್ ಬಳಸುತ್ತಾರೆ.*ಶೇ 83ರಷ್ಟು ಭಾರತೀಯರು ಮೊಬೈಲ್ ಬಳಕೆಯಿಂದ ತಮ್ಮ ಜೀವನ ಮಟ್ಟ ಸುಧಾರಿಸಿದೆ ಎಂದು ಹೇಳಿದ್ದಾರೆ. * ಮೊಬೈಲ್ ತಂತ್ರಜ್ಞಾನವು ದೇಶದ ಆರ್ಥಿಕ ಅಭಿವೃದ್ಧಿಗೆ ಮತ್ತು ವಾಣಿಜ್ಯ ವಹಿವಾಟಿಗೆ ಮಹತ್ತರ ಕೊಡುಗೆ ನೀಡಿದೆ ಎನ್ನುವ ಸಂಖ್ಯೆ ಶೇ 97ರಷ್ಟಿದೆ.  

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry