ಮೊಬೈಲ್ ಬಿಲ್ 201,000 ಡಾಲರ್!

7

ಮೊಬೈಲ್ ಬಿಲ್ 201,000 ಡಾಲರ್!

Published:
Updated:

ಲಂಡನ್, (ಐಎಎನ್‌ಎಸ್): ಮೊಬೈಲ್‌ನಲ್ಲಿ ಗಂಟೆಗಟ್ಟಲೆ ಮಾತನಾಡಲು ಯಾರ ಅಡ್ಡಿಯೂ ಇಲ್ಲ. ಆದರೆ ಡಾಲರ್‌ಗಟ್ಟಲೆ ಬಿಲ್ ಬಂದರೆ? ಜಂಘಾಬಲವೇ ಉಡುಗಿ ಹೋಗಬಹುದು. ಅಂಥದ್ದೇ ಒಂದು ಘಟನೆ ದಕ್ಷಿಣ ಫ್ಲಾರಿಡಾದಲ್ಲಿ ನಡೆದಿದೆ.ಇಲ್ಲಿನ ಸೆಲಿನಾ ಆ್ಯರನ್ಸ್ ತಮ್ಮ ಮೊಬೈಲ್ ಬಿಲ್ 201,000 ಡಾಲರ್ ಬಂದಾಗ ಒಮ್ಮೆಲೇ ಬೆಚ್ಚಿಬಿದ್ದರು. ಅದು ಮೊಬೈಲ್ ಕಂಪನಿಯ ಕಣ್ತಪ್ಪಿನಿಂದ ಆದ್ದದ್ದಲ್ಲ, ನಿಜವಾಗಲೂ ಅವರ ಬಿಲ್ ಅಷ್ಟೇ ಬಂದಿದೆ ಎಂಬುದು ತಿಳಿದಾಗಲಂತೂ ಅವರು ದಿಕ್ಕುತೋಚದಂತಾದರು ಎಂದು `ಡೈಲಿ ಮೇಲ್~ ಪತ್ರಿಕೆ ವರದಿ ಮಾಡಿದೆ.

 

ಆದರೆ ಇಂತಹ ಭಾರಿ ಬಿಲ್‌ಗೆ ಕಾರಣವೂ ಇಲ್ಲದಿಲ್ಲ. ಆ್ಯರನ್ಸ್ ಅವರಿಗೆ ಮೂಕ ಹಾಗೂ ಕಿವುಡರಾದ ಇಬ್ಬರು ಸಹೋದರರಿದ್ದಾರೆ. ಅವರಲ್ಲಿ ಕೊನೆಯವನಾದ ಶಮೀರ್ ಕಾಲೇಜಿಗೆ ಹೋಗುತ್ತಿದ್ದು, ಆ್ಯರನ್ಸ್ ಅವರೊಂದಿಗೆ ಹೆಚ್ಚು ಸಲುಗೆಯಿಂದಿದ್ದಾನೆ. ಹಾಗಾಗಿ ಅವರ ನಡುವೆ ಎಸ್‌ಎಂಎಸ್ ಮೂಲಕವೇ ಮಾತುಕತೆ ನಡೆಯುತ್ತಿತ್ತಲ್ಲದೆ ಸಾಮಾನ್ಯವಾಗಿ 175 ಡಾಲರ್‌ಗಳ ಬಿಲ್ ಬರುತ್ತಿತ್ತು. ಶಮೀರ್ ಎರಡು ವಾರಗಳ ರಜೆಗಾಗಿ ಕೆನಡಾಕ್ಕೆ ತೆರಳಿದ್ದ. ಅಲ್ಲಿಗೆ ಹೋಗುವ ವೇಳೆ ಅಂತರ ರಾಷ್ಟ್ರೀಯ ಮೊಬೈಲ್ ಯೋಜನೆಗೆ ಬದಲಾಯಿಸಿಕೊಳ್ಳಬೇಕೆಂಬುದು ಯಾರಿಗೂ ಹೊಳೆಯಲಿಲ್ಲ.

 

ಶಮೀರ್ ಸುಮಾರು 2000ಕ್ಕೂ ಹೆಚ್ಚು ಎಸ್‌ಎಂಎಸ್‌ಗಳಲ್ಲದೆ, ವಿಡಿಯೊಗಳನ್ನು ಡೌನ್‌ಲೋಡ್ ಮಾಡಿದ್ದೇ ಈ ಬೃಹತ್ ಮೊತ್ತದ ಬಿಲ್‌ಗೆ ಕಾರಣ.ಇಷ್ಟು ದೊಡ್ಡ ಮೊತ್ತದ ಬಿಲ್ ಪಾವತಿಯಂತೂ ಅಸಾಧ್ಯ ಎಂದು ಆ್ಯರನ್ಸ್ ಕೈಚೆಲ್ಲಿದರು. ಅವರ ಸಂಕಷ್ಟಕ್ಕೆ ಕೊನೆಗೂ ಮರುಗಿದ ಮೊಬೈಲ್ ಕಂಪನಿ ಕನಿಕರ ತೋರಿ ಬಿಲ್‌ನ್ನು 2,500 ಡಾಲರ್‌ಗೆ ಇಳಿಸಿದೆ. ಅಲ್ಲದೆ ಪಾವತಿಗೆ ಆರು ತಿಂಗಳ ಸಮಯಾವಕಾಶವನ್ನೂ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry